
ವಿಜಯಪುರ:ಮೇ.25: ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದಅಧ್ಯಕ್ಷರಾದ ಪರಶುರಾಮಸಿಂಗ್ ರಜಪೂತಇವರಅಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಿದ ಆದೇಶದನ್ವಯ ಸರ್ಕಾರದ ಸುತ್ತೋಲೆಯನ್ವಯ ವಿಜಯಪುರ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶದಾನಮ್ಮನವರಅವರು ದಿನಾಂಕ : 23-05-2023ರಂದು ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದಅಧ್ಯಕ್ಷರ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿದ್ದಾರೆ.
ವೈಯಕ್ತಿಕ ಗಮನಕ್ಕೆ ತರಬಯಸುವಎಲ್ಲಾ ಪತ್ರಗಳು, ಅರೆ ಸರ್ಕಾರಿ ಪತ್ರಗಳು, ಗೌಪ್ಯ ಪತ್ರಗಳು ಮತ್ತು ಮುಖ್ಯವಾದ ಪತ್ರಗಳನ್ನು ವಿಜಯಮಹಾಂತೇಶಬಿ.ದಾನಮ್ಮನವರ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ನಗರಾಭಿವೃದ್ದಿ ಪ್ರಾಧಿಕಾರ ವಿಜಯಪುರ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.