ನಗರಾಭಿವೃದ್ದಿಯ ಹಣ ಪೋಲಾಗುತ್ತಿದೆ

ರಾಯಚೂರು ಮಾ ೨೮
ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದವರು ತಮಗೆ ತೋಚಿದಂತೆ ಕಾಮಗಾರಿಗಳನ್ನು ತೆಗೆದುಕೊಂಡು ಕಾರ್ಯ ಮಾಡುತ್ತಿದ್ದಾರೆ, ಅನೇಕ ಕಾರ್ಯಗಳು ಯಾರಿಗೂ ಉಪಯೋಗಕ್ಕೆ ಬರವುದಿಲ್ಲ ಇದರಿಂದ ನಗರಾಭಿವೃದ್ಧಿಯ ಹಣ ಪೋಲಾಗುತ್ತಿದೆ ಎಂದು ನಗರಸಭೆ ಸದಸ್ಯರಾದ ಜಯಣ್ಣ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ನಗರದಲ್ಲಿ ಮುಖ್ಯವಾಗಿ ಮಾವಿನಕೆರೆ ಹಾಗೂ ಗೊಲ್ಲನಕುಂಟೆ ಕೆರೆ ಇವೆರಡು ಕೆರೆ ಗಳನ್ನು ಅಭಿವೃದ್ಧಿ ಮಾಡಬೇಕ್ಕಾಗಿದ್ದು ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಕರ್ತವ್ಯವಾಗಿದೆ.
ಗೊಲ್ಲನಕುಂಟೆ ಕೆರೆಗೆ ಈಗಾಗಲೇ ನಗರಸಭೆಯಲ್ಲಿ ೩ಕೋಟಿ ಹಣವನ್ನು ಅಮೃತ ಸರೋವರ ಸ್ಕೀಮ್ ನಲ್ಲಿ ಇಡಲಾಗಿದೆ, ಈಗ ನಗರಾಭಿವೃದ್ಧಿ ಪ್ರಾಧಿಕಾರದವರು ೧೫ಲಕ್ಷ ರೂಪಾಯಿ ವೆಚ್ಚದಲ್ಲಿ ತುಂಡು ಗುತ್ತಿಗೆ ಆಧಾರದಲ್ಲಿ ಮಾಡುತ್ತಿದ್ದೆ.ಇದನ್ನ ನಗರಸಭೆ ಹಾಗೂ ನಗರ ಸಭೆ ಸದಸ್ಯರ ವಿಶ್ವಾಸವನ್ನು ಕೂಡ ಪಡೆದಿಲ್ಲ ಈ ಕಾಮಗಾರಿ ಮಾಡುತ್ತಿರುವುದರಿಂದ ಯಾವುದೇ ರೀತಿಯಲ್ಲಿ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದರು.
ಆರ್ ಡಿ ಎ ದವರು ಕಾಮಗಾರಿ ತೆಗಿದುಕೊಂಡು ಕಾರ್ಯ ಮಾಡಲಿ ಆದರೆ ಕಾಮಗಾರಿ ತೆಗೆದುಕೊಳ್ಳುವ ಮುಂಚೆ ಸಂಬಂಧಪಟ್ಟ ನಗರಸಭೆ ಸದಸ್ಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಮಗ್ರವಾದ ಯೋಜನೆ ರೂಪಿಸಿ ಕಾಮಗಾರಿಗಳನ್ನು ಮಾಡಿದಾಗ ಜನರಿಗೆ ಅನುಕೂಲವಾಗುತ್ತದೆ, ಅಧಿಕಾರಿಗಳು ಒಬ್ಬ ಜನಪ್ರತಿನಿದಿ ಮೂಗಿನ ನೇರಕ್ಕೆ ಕೆಲಸ ಮಾಡಬಾರದು ಎಂದು ತಿಳಿಸಿದರು.

ಬಾಕ್ಸ್
ಆರ್ ಡಿ ಎ ವತಿಯಿಂದ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಾಮನ್ ಗಳು ಹಲವಾರು ಕಡೆಗೆ ಇಕ್ಕಟ್ಟಿನಲ್ಲಿ ಕಮಾನ್ ಗಳನ್ನು ಮಾಡುತ್ತಿದ್ದಾರೆ, ಹಲವಾರು ಕಾಮನ್ ಗಳು ಕಳಫೆ ಮಟ್ಟದಲ್ಲಿ ಆಗುತ್ತಿದ್ದಾವೆ ಒಂದು ಕಮಾನ್ ಗೆ ೫ಲಕ್ಷ ಹಣ ಪೋಲಾಗುತ್ತಿದೆ, ಇಕ್ಕಟ್ಟಿನಲ್ಲಿ ಕಮಾನ್ ಗಳನ್ನು ಮಾಡುತ್ತಿರುವುದನ್ನ ಮರು ಪರಿಶೀಲನೆ ಮಾಡಬೇಕು ಹಾಗೂ ಕಮಾನ್ ಮಾಡುವಾಗ ಸ್ಥಳೀಯ ಜನಪ್ರತಿನಿದಿಗಳಾದ ನಗರ ಸಭೆ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ನಗರಸಭೆ ಸದಸ್ಯರಾದ ಜಂಬಣ್ಣ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.