ನಗರಸಭೆ ಹಿರಿಯ ಸದಸ್ಯ ಸತೀಶ್ ಕುಮಾರ್ ವಜಾ

ಹುಣಸೂರು,ಮಾ.10-ಸ್ಥಳಿಯ ನಗರಸಭೆಯ ಪೌರಾಯುಕ್ತರನ್ನು ನಿಂದಿಸಿ, ಹಲ್ಲೆ ನಡೆಸಲು ಯತ್ನಿಸಿ ಹಾಗೂ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯರೊಬ್ಬರ ಸದಸ್ಯತ್ವನ್ನು ಮೈಸೂರು ಪ್ರಾದೇಶಿಕ ಅಯುಕ್ತರು ವಜಾ ಮಾಡಿ ಅದೇಶ ಹೊರಡಿಸಿರುವ ಘಟನೆತಡವಾಗಿ ಬೆಳಕಿಗೆ ಬಂದಿದೆ.
ವಾರ್ಡ್ ನಂ 8ರ ಪಕ್ಷೇತರ ಸದಸ್ಯ, ಪ್ರಸ್ತುತ ಜೆ.ಡಿ.ಎಸ್ ಮುಖಂಡರಾದ ಸದಾಶಿವನ ಕೊಪ್ಪಲಿನ ಎಚ್.ಪಿ.ಸತೀಶ್‍ಕುಮಾರ್ ವಜಾಗೊಂಡನತ ದೃಷ್ಠ ಸದಸ್ಯರಾಗಿದ್ದಾರೆ.
2023ರ ಜನವರಿ 6ರಂದು ವಜಾಗೊಂಡಿರುವ ಆದೇಶ ಹೊರಬಿದ್ದಿದರು, ಅಧಿಕಾರಿಗಳುಎರಡು ತಿಂಗಳ ಕಾಲ ಗೌಪ್ಯವಾಗಿಟ್ಟಿದ್ದು ಏಕೆಂಬುದು ಸಾರ್ವಜನಿಕ ವಲಯಗಳಲ್ಲಿ ಚರ್ಚೆಯಾಗುತ್ತಿದೆ.
ಘಟನೆ ವಿವರ: 2021ರ ನವಂಬರ್ 18ರಂದು ಅಂದಿನ ಪೌರಾಯುಕ್ತ ರಮೇಶ್‍ರನ್ನು ಕಛೇರಿಯಲ್ಲಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆಗೂ ಸಹ ಮುಂದಾಗಿದ್ದು, ಈ ಸಂಬಂದ ನಗರ ಪೊಲೀಸ್ ಠಾಣೆಯಲ್ಲಿ ಪೌರಾಯುಕ್ತರು ಸಿ.ಸಿ ಕ್ಯಾಮರಾ ಪೂಟೇಜ್ ಆಧಾರದೊಂದಿಗೆ ಸತೀಶ್‍ಕುಮಾರ್ ವಿರುದ್ದ ಪ್ರಕರಣ ದಾಖಲಿಸಿದ್ದರು.
ಅಲ್ಲದೆ 2021ರ ನವಂಬರ್ 24ರಂದು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಲ್ಲದ ವೇಳೆಯಲ್ಲಿ ಕಛೇರಿ ಪ್ರವೇಶಿಸಿ ಎಂ.ಎ.ಅರ್-19 ಹಾಗೂ ಕಚೇರಿಕಡತ ಮತ್ತು ಪೈಲ್‍ಗಳನ್ನು ಪರಿಸಿಲಿಸುತ್ತಿರುವುದು, ಸಿ.ಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ನಗರಸಭೆಯ ಸಿಬ್ಬಂದಿಗಳನ್ನು ಬೆದರಿಸಿ ಪೈಲ್ ಮತ್ತು ಕಡತಗಳನ್ನು ಒತ್ತಡ ಹೇರಿಅಕ್ರಮವಾಗಿ ಕೆಲವು ತಿದ್ದುಪಡಿಗೂ ಮುಂದಾಗಿದ್ದು.ಈ ಸಂಬಂದ ಸಿಬ್ಬಂದಿಯ ಸುರಕ್ಷತೆ, ಅಕ್ರಮತಿದ್ದುಪಡಿ ವಿರುದ್ದ ಪೌರಾಯುಕ್ತರು ಮೇಲಾಧಿಕಾರಿಗಳಿಗೆ ದೂರು ಸಹ ನೀಡಿದ್ದರು.
ಈ ಸಂಬಂಧ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಾಜೆ.ಸಿ.ಪ್ರಕಾಶ್‍ರವರು ಸುೀಧಿರ್ಘ ವಿಚಾರಣೆ ನಡೆಸಿ, ವಿಚಾರಣೆ ವೇಳೆ ಸಾಕ್ಷಿಪುರಾವೆಗಳಾಗಿ ಸಿ.ಸಿ.ಕ್ಯಾಮರಾದ ಫೂಟೇಜ್, ಪೋಟೋ ಇನ್ನಿತರ ಸಾಕ್ಷಿಗಳನ್ನು ಪರಿಗಣಿಸಿ ಸದಸ್ಯರದುರ್ನಡೆತೆ ಮತ್ತು ಕಾನೂನು ಬಾಹಿರವಾಗಿ ನಡೆದುಕೊಂಡಿರುವುದು ಸಾಭಿತಾದ ಹಿನ್ನೆಲೆ, ಸದಸ್ಯತ್ವ ಸ್ಥಾನಕ್ಕೆ ಅಗೌರವಾಗಿ ನಡೆದುಕೊಂಡಕಾರಣಕರ್ನಾಟಕ ಪುರಸಭೆಗಳ ಅನಿಯಮಕಾಯ್ದೆ 1964 ಕಲಂ41(1)ರಅಡಿಯಲ್ಲಿ 2023ರ ಜನವರಿ 6ರಂದು ಎಚ್.ಪಿ.ಸತೀಶ್‍ಕುಮಾರ್‍ರವರ ಸದಸ್ಯತ್ವವನ್ನು ವಜಾಗೊಳಿಸಿ ಆದೇಶಿಸಿದ್ದಾರೆ.