ನಗರಸಭೆ ಸದಸ್ಯ ಜಯಣ್ಣ ನೇತೃತ್ವದಲ್ಲಿ ಭರ್ಜರಿ ಪ್ರಚಾರ

ರಾಯಚೂರು,ಏ.೨೯- ವಾರ್ಡ್ ನಂ ೨ ರಲ್ಲಿ ರಾಯಚೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ ಅವರ ಪರವಾಗಿ ಕಾಂಗ್ರೆಸ್ ಹಿರಿಯ ಮುಖಂಡರೂ, ನಗರಸಭೆ ಸದಸ್ಯರಾದ ಜಯಣ್ಣ ಅವರ ನೇತೃತ್ವದಲ್ಲಿ ಭರ್ಜರಿ ಮತಯಾಚನೆ ಮಾಡಲಾಯಿತು.
ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನೀಡುವ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಇನ್ನು ಹೆಚ್ಚಿನ ಗ್ಯಾರಂಟಿ ಯೋಜನೆಗಳಿಗಾಗಿ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ ಅವರಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಲಾಯಿತು.
ದೇಶದಲ್ಲಿರುವ ಎಲ್ಲಾ ಜಾತಿ ಧರ್ಮದ ಜನಾಂಗದವರನ್ನು ಒಗ್ಗೂಡಿಸ್ಕೊಂಡು ಮುಂದೆ ತೆಗೆದುಕೊಂಡು ಹೋಗುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರೆ ಇದೆ ನಮ್ಮೆಲ್ಲರ ಶಾಂತಿ ಸೌಹಾರ್ತಿಗಾಗಿ ಸೇರಿ ಸರ್ವಾಂಗಣ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ಪ್ರಚಾರದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಸಚಿನ್ ಜಯಣ್ಣ, ಆಶೀಫ್, ಸತ್ಯನಾರಾಯಣ, ವಿಷ್ಣು, ನವೀನ್ ಹನುಮಂತ ಹೊಸೂರು ಸೇರಿದಂತೆ ಅನೇಕರು ಇದ್ದರು.