ನಗರಸಭೆ ಸದಸ್ಯೆ ಪಿ.ಹೇಮಲತಾ ವಿರುದ್ಧ ಎಫ್ ಐ ಆರ್ ದಾಖಲು

ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಪ್ರಕರಣ
ರಾಯಚೂರು ಮಾ ೧೪
ವಾರ್ಡ್ ನಂಬರ್ ೧೯ರ ಹಾಲಿ ನಗರಸಭೆ ಸದಸ್ಯರಾಗಿರುವ ಪಿ. ಹೇಮಲತಾ ಅವರ ವಿರುದ್ಧ ಶರಣಪ್ಪ ಟಿ ಹವಾಲ್ದಾರ್ ಅವರು ನೀಡಿದ ದೂರಿನ ಅನ್ವಯ ನಗರದ ಸದರ್ ಬಜರ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪಿ ಹೇಮಲತಾ ಗಂಡ ಬೂದೆಪ್ಪ ವಾರ್ಡ್ ನಂಬರ್ ೧೯ರ ನಗರಸಭೆ ಸದಸ್ಯರು ಹರಿಜನವಾರ್ಡಿನಲ್ಲಿ ವಾಸ ಇವರು ಮೂಲ ಆಂಧ್ರಪ್ರದೇಶದ ಜೋಗುಳಂಬ ಗದ್ವಲ್ ಜಿಲ್ಲೆಯ ಐಜ ಮಂಡಲದ ಮಾನದೊಡ್ಡಿ ಗ್ರಾಮದವರು, ಇವರು ರಾಯಚೂರಿನ ಪಿ ಬೂದೇಪ್ಪ ಅವರನ್ನ ವಿವಾಹವಾಗಿ ರಾಯಚೂರಿಗೆ ವಲಸೆ ಬಂದಿರುತ್ತಾರೆ.
ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಬಂದು ರಾಜ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹವಿಲ್ಲವೆಂಬುದು ಆದೇಶವಾಗಿರುವ ಸುಪ್ರೀಂ ಕೋರ್ಟ್ ತೀರ್ಪುಗೆ ವಿರುದ್ಧವಾಗಿ ನಮೂನೆ – ಡಿ ಅಡಿಯಲ್ಲಿ ಹಿಂದೂ ಮಾದಿಗ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದು ನಗರಸಭೆ ಚುನಾವಣೆಗೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ಪಡೆದು ಸ್ಪರ್ದಿಸಿ ಜಯಗಳಿಸಿದ್ದಾರೆ,ಹಾಗೂ ೨೦೧೬ರಲ್ಲಿ ನಗರ ಸಭೆಯ ಅಧ್ಯಕ್ಷರಾಗಿ ಕೂಡ ಆಯ್ಕೆಯಾಗಿದ್ದರು, ನೈಜ ಪರಿಶಿಷ್ಟ ಜಾತಿಯವರಿಗೆ ಹಾಗು ಸರಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಎಫ್ ಐ ಆರ್ ಅಲ್ಲಿ ಪ್ರಕರಣ ದಾಖಲಾಗಿದೆ.
ಪಿ ಹೇಮಲತಾ ವಿರುದ್ದ ಹಾಗೂ ಸದರಿಯವರಿಗೆ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯಲು ಸಹಕಾರಿಸಿದ ರಾಯಚೂರು ತಹಸೀಲ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲ ದಾಖಲಾಗಿರುತ್ತದೆ.
ಸದರ್ ಬಜರ್ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೇ ನಂಬರ್ ೩೫/೨೦೨೩ ಕಲಂ ೧೯೬,೧೯೮,೪೩೦ಐ ಪಿ ಸಿ ಮತ್ತು ಕಲಂ ೩(೧) ಕಲಂ ೫(ಎ) ೫(ಬಿ)ಅಧಿನಿಯಮ ೧೯೯೨ ರ ಕಾನೂನು ಅನ್ವಯ ಪಿ ಹೇಮಲತಾ ವಿರುದ್ಧ ಪ್ರಕರಣ ದಾಖಲಾಗಿದೆ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಮಹೇಶ್ ಅಗ್ರಹಿದ್ದಾರೆ.