ನಗರಸಭೆ: ಶಾಂತಿಯುತ ಮತದಾನ ಅಂತ್ಯ

ಬೀದರ:ಎ.28: ಇಲ್ಲಿಯ ನಗರಸಭೆಯ 32 ವಾರ್ಡ್‌ಗಳಿಗೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.

ಕುಂಬಾರವಾಡ, ಓಲ್ಡ್‌ಸಿಟಿ, ಎಸ್‌ಪಿ ಕಚೇರಿ ರಸ್ತೆಯಲ್ಲಿರುವ ಪಿಡಬ್ಲ್ಯೂಡಿ ಕಚೇರಿ, ಮೈಲೂರ್‌ನಲ್ಲಿರುವ ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆ ಬಿರುಸಿನ ಮತದಾನ ಮಾಡಿದರು. ಓಲ್ಡ್‌ಸಿಟಿಯಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ರಮ್ಜಾನ್‌ ಪ್ರಯುಕ್ತ ಹಲವರು ಉಪವಾಸ ವ್ರತದಲ್ಲಿದ್ದಾರೆ. ಹೀಗಾಗಿ ಮುಸ್ಲಿಮರು ಹೆಚ್ಚು ವಾಸವಾಗಿರುವ ಪ್ರದೇಶದಲ್ಲಿ ಬೆಳಿಗ್ಗೆ 11 ಗಂಟೆ ಒಳಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಬಿಸಿಲು ಹಾಗೂ ಸೆಕೆ ಅಧಿಕ ಇರುವ ಕಾರಣ ಮಧ್ಯಾಹ್ನ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು.

ಮತಗಟ್ಟೆ ಸಿಬ್ಬಂದಿ ಹ್ಯಾಂಡ್‌ಗ್ಲೌಸ್ ಹಾಗೂ ಮಾಸ್ಕ್‌ ಹಾಕಿಕೊಂಡಿದ್ದರು.ಬೀದರ್: ಇಲ್ಲಿಯ ನಗರಸಭೆಯ 32 ವಾರ್ಡ್‌ಗಳಿಗೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.
ಕುಂಬಾರವಾಡ, ಓಲ್ಡ್‌ಸಿಟಿ, ಎಸ್‌ಪಿ ಕಚೇರಿ ರಸ್ತೆಯಲ್ಲಿರುವ ಪಿಡಬ್ಲ್ಯೂಡಿ ಕಚೇರಿ, ಮೈಲೂರ್‌ನಲ್ಲಿರುವ ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆ ಬಿರುಸಿನ ಮತದಾನ ಮಾಡಿದರು. ಓಲ್ಡ್‌ಸಿಟಿಯಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ರಮ್ಜಾನ್‌ ಪ್ರಯುಕ್ತ ಹಲವರು ಉಪವಾಸ ವ್ರತದಲ್ಲಿದ್ದಾರೆ. ಹೀಗಾಗಿ ಮುಸ್ಲಿಮರು ಹೆಚ್ಚು ವಾಸವಾಗಿರುವ ಪ್ರದೇಶದಲ್ಲಿ ಬೆಳಿಗ್ಗೆ 11 ಗಂಟೆ ಒಳಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಬಿಸಿಲು ಹಾಗೂ ಸೆಕೆ ಅಧಿಕ ಇರುವ ಕಾರಣ ಮಧ್ಯಾಹ್ನ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು.

ಮತಗಟ್ಟೆ ಸಿಬ್ಬಂದಿ ಹ್ಯಾಂಡ್‌ಗ್ಲೌಸ್ ಹಾಗೂ ಮಾಸ್ಕ್‌ ಹಾಕಿಕೊಂಡಿದ್ದರು.