ನಗರಸಭೆ ಭ್ರಷ್ಟಚಾರ ವಿರುದ್ದ ನಿರ್ದಾಕಿಣ್ಯ ಕ್ರಮ- ಶಾಸಕ ಮಂಜುನಾಥ್

ಕೋಲಾರ,ಜೂ,೭- ನಗರಸಭೆಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಸೇವೆ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣೆ ಮಾಡಿಸಿ ಕೊಡಲಾಗುತ್ತದೆ. ಕೋಲಾರ ನಗರಸಭೆಯಲ್ಲಿ ಕೆಲಸ ನಿರ್ವಹಿಸಲು ಬೇರೆಯವರು ಸಿದ್ದರಿದ್ದಾರೆ. ಸಾರ್ವಜನಿಕರ ಮೂಲ ಭೂತ ಸೌಲಭ್ಯಗಳಲ್ಲೂ ಭ್ರಷ್ಟಚಾರ ಎಸೆಗುತ್ತಿರುವ ಕುರಿತು ನಿರ್ದಿಷ್ಟವಾದ ದೂರು ನೀಡಿದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ನೂತನ ಶಾಸಕ ಕೊತ್ತೂರು ಮಂಜುನಾಥ್ ಎಚ್ಚರಿಕೆ ನೀಡಿದರು,
ನಗರಸಭೆ ಕಾರ್ಯಾಲಯದಲ್ಲಿ ಸದಸ್ಯರ ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ನಗರಸಭಾ ಸದಸ್ಯರಿಂದ ಅಧಿಕಾರಿಗಳ ಮೇಲೆ ವ್ಯಾಪಕ ದೊರುಗಳು ಬರುತ್ತಿರುವುದು. ಸಾರ್ವಜನಿಕರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಲಂಚ ಪಡೆದರೆ ಅವರಿಗೆ ಬರಬಾರದ ಕಾಯಿಲೆಗಳು ಬರುವುದು ಖಚಿತ ಎಂದು ಬೇಸರ ವ್ಯಕ್ತ ಪಡೆಸಿದರು,
ಎಂಜನಿಯರ್ ಕೆಲಸಗಳನ್ನು ಎಂಜನಿಯರ್ ಅವರೇ ಮಾಡ ಬೇಕಾಗುತ್ತದೆ.ಮಾಡದೆ ಇದ್ದಲ್ಲಿ ಅವರೇಕೆ ಬೇಕು ನಮಗೆ ಏನೆ ಸಮಸ್ಯೆಗಳಾಗಿದ್ದರೂ ಸಂಬಂಧ ಪಟ್ಟವರೆ ಬಗೆಹರಿಸ ಬೇಕಾಗಿರುವುದು ಅವರ ಜವಾಬ್ದಾರಿಯಾಗಿದೆ. ಕೆಲವೊಂದು ಕಾಮಗಾರಿಗಳು ತುರ್ತಾಗಿ ಕ್ರಮ ಕೈಗೊಳ್ಳ ಬೇಕಾಗಿರುವಂತ ಅನಿವಾರ್ಯತೆ ಇರುತ್ತದೆ ಅದರೆ ಟೆಂಡರ್ ಅಗಬೇಕೆಂಬ ಸಬೂಬುಗಳನ್ನು ಹೇಳದೆ ಸಮಸ್ಯೆ ಬಗೆಹರಿಸ ಬೇಕೆಂದು ಸಲಹೆ ನೀಡಿದರು,
ಪ್ರಥಮವಾಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆಗೆ ಮೋಟರ್ ಪಂಪ್‌ಗಳು ಹಾಳಾಗಿದ್ದರೆ ತುರ್ತಗಿ ದುರಸ್ಥಿ ಮಾಡಿಸಿ, ಶುದ್ದ ನೀರಿನ ಘಟಕಗಳು ನಗರದ ೩೫ ವಾರ್ಡಗಳ ಪೈಕಿ ಕೇವಲ ೧೪ ಮಾತ್ರ ಕಾರ್ಯನಿರ್ವಾಹಿಸುತ್ತಿದ್ದು ಉಳಿದ ೨೧ ಕೊಳವೆ ಬಾವಿಗಳು ಕಾರ್ಯನಿರ್ವಹಿಸಿದೆ ವಿವಿಧ ಕಾರಣಗಳಿಗೆ ಸ್ಥಗಿತಗೊಳಿಸಲಾಗಿದೆ ಈ ಕುರಿತು ಏಕೆ ಕ್ರಮ ಕೈಗೊಂಡಿಲ್ಲ ಎಂಬ ಶಾಸಕರ ಪ್ರಶ್ನೆಗೆ ಇದು ನೀರು ಸರಬರಾಜು ಮಂಡಲಿ ವ್ಯಾಪ್ತಿಗೆ ಸೇರಿದ್ದು ಇನ್ನು ನಗರಸಭೆ ಸ್ವಾಧೀನಕ್ಕೆ ನೀಡಿಲ್ಲ ಎಂದು ನಗರಸಭೆ ಅಧಿಕಾರಿಗಳು ಸ್ವಷ್ಠ ಪಡೆಸಿದಾಗ ಶಾಸಕರು ಪ್ರತಿಕ್ರಿಯಿಸಿ ಆಗಾ ಏನೇ ಅಗಿರಲಿ ಈಗಾ ಸಾರ್ವಜನಿಕರಿಗೆ ಶುದ್ದ ನೀರು ಸೌಲಭ್ಯ ಕಲ್ಪಿಸಲು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕೊಡಲೇ ಕ್ರಮ ಕೈಗೊಳ್ಳ ಬೇಕು ಎಂದು ಸೂಚಿಸಿದರು,
ಕೋಲಾರ ಮುಂದೆ ಅಭಿವೃದ್ದಿ ಹೊಂದಲೂ ಅಗಬೇಕಾಗಿರುವ ಕೆಲಸದ ಕಡೆ ಗಮನ ಹರಿಸಿ ನಾನು ನಿಮ್ಮ ಮಗನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದೀರಿ, ನಿಮ್ಮಲ್ಲಿ ನಾನು ಒಬ್ಬನಾಗಿ ಸಾರ್ವಜನಿಕರ ಸೇವೆ ಮಾಡುತ್ತೇನೆ. ಸಾರ್ವಜನಿಕರಿಗೆ ಅಗತ್ಯವಾದ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಿ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಸ್ವಚ್ಚತೆ, ಚರಂಡಿ, ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸ ಬೇಕಾಗಿರುವುದು ನಗರಸಭೆಯ ಜವಾಬ್ದಾರಿಯಾಗಿದೆ ಎಂದರು
ರಸ್ತೆಗಳ ಕಾಮಗಾರಿ ಮೊದಲು ಯು.ಜಿ.ಡಿ. ಮತ್ತು ನೀರಿನ ಸಂರ್ಪಕಕ್ಕೆ ಅಗತ್ಯವಾದ ಪೈಪ್‌ಗಳ ಕಾಮಗಾರಿ ಮತ್ತು ಕೇಬಲ್ ಕೆಲಸಗಳು ,ಚರಂಡಿ ಕೆಲಸಗಳು ಪೂರ್ಣವಾದ ಮೇಲೆಯೇ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಬೇಕು. ಈ ಹಿಂದೆ ಮುಳಬಾಗಿಲಿನಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಅನುಭವ ಪಡೆದಿರುವುದಾಗಿ ತಿಳಿಸಿದರು,
ಮಹಿಳಾ ಸದಸ್ಯರು ತಮ್ಮ ಅಧಿಕಾರವನ್ನು ಪತಿಗೆ ಕೊಟ್ಟು ಅಡುಗೆ ಮನೆಯಲ್ಲಿ ಇರುವುದಲ್ಲ. ಸರ್ಕಾರವು ನಿಮಗೆ ನೀಡಿರುವಂತ ಅಧಿಕಾರವನ್ನು ಸದ್ಬಳಿಸಿ ಕೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಬಗೆ ಹರಿಸುವ ಮೂಲಕ ಸಮಾಜ ಮುಖಿಗಳಾಗಿ ಕಾರ್ಯನಿರ್ವಹಿಸ ಬೇಕೆಂದು ಕಿವಿ ಮಾತು ಹೇಳಿದರು,
ನಾನು ಈಗಾಗಲೇ ೫ ವರ್ಷ ಶಾಸಕನಾಗಿ ಮುಳಬಾಗಿಲು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಅಲ್ಲದೆ ಸೊಸೈಟಿಯ ಅಧ್ಯಕ್ಷನಾಗಿಯೋ ಕೆಲಸ ಮಾಡಿದ್ದೇನೆ. ನಿಮ್ಮ ಅಭಿಪ್ರಾಯ ಸಲಹೆ, ಮಾರ್ಗದರ್ಶನಗಳನ್ನು ನೀಡಿದಲ್ಲಿ ಅದರ ಪ್ರಕಾರ ಕೆಲಸಗಳನ್ನು ಮಾಡಿಸಿ ಮುಂದಿನ ೩೦ ವರ್ಷಗಳ ಅಭಿವೃದ್ದಿಯ ಗುರಿಯನ್ನು ಹೊಂದಿ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸ ಬೇಕು, ನಿಮ್ಮ ವಾರ್ಡ್‌ಗಳನ್ನು ನ್ಯಾಯಯುತವಾಗಿ ಅಭಿವೃದ್ದಿ ಪಡೆಸ ಬೇಕು ಇನ್ನು ನಿಮಗೆ ಸಮಯಾವಕಾಶ ಇರುವುದನ್ನು ಸದ್ಬಳಿಸಿ ಕೊಳ್ಳ ಬೇಕೆಂದು ಸೂಚಿಸಿದರು,
ಸದಸ್ಯ ಪ್ರವೀಣ್‌ಗೌಡ ಮಾತನಾಡಿ ನಗರದ ಹೃದಯ ಭಾಗದಲ್ಲಿನ ನಗರಸಭೆಯ ಸುಮಾರು ೨೦ ಕೋಟಿ ಆಸ್ತಿಯನ್ನು ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಯವರು ಒತ್ತುವರಿ ಮಾಡಿದ್ದಾರೆ. ಈ ಸಂಬಂಧವಾಗಿ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗಿದೆ. ಈ ಹಗರಣದಲ್ಲಿ ಉಪನೋಂದಣಿ ಅಧಿಕಾರಿಗಳು ಶಾಮೀಲು ಅಗಿದ್ದಾರೆ ಎಂದು ಅರೋಪಿಸಿದಾಗ ಶಾಸಕರು ಈ ಕುರಿತು ವಿಶೇಷವಾದ ಸಭೆ ಆಯೋಜಿಸಿ ಉಪನೋಂದಣಿ ಅಧಿಕಾರಿ, ತಹಸೀಲ್ದಾರ್,ಗಳನ್ನು ಆಹ್ವಾನಿಸಿ ಪರಿಶೀಲಿಸೋಣ ಎಂದು ತಿಳಿಸಿದರು,
ನಗರಸಭೆಗೆ ಅದಾಯ ಕಡಿಮೆ ಇದೆ ೮೦-೯೦ ಲಕ್ಷ ರೂ ವೆಚ್ಚ ಇದ್ದರೆ ಕೇವಲ ೩೦-೪೦ ಲಕ್ಷ ಅದಾಯ ಬರುತ್ತದೆ. ಅನುದಾನಗಳು ಬಹಳ ಕಡಿಮೆ ಬರುತ್ತಿದೆ. ನಗರದಲ್ಲಿ ೩೪ ಸಾವಿರ ಆಸ್ತಿಗಳಿದ್ದು ಈ ಪೈಕಿ ಕೇವಲ ೨೩ ಸಾವಿರ ಆಸ್ತಿಗಳ ಮಾತ್ರ ಅಧಿಕೃತವಾಗಿದ್ದು ಉಳಿದ ೧೧ ಸಾವಿರ ಆಸ್ತಿಗಳು ಅಕ್ರಮವಾದದ್ದು, ನಗರಸಭೆ ಅಕ್ರಮಗಳನ್ನು ಸಕ್ರಮ ಮಾಡಿದರೆ ನಗರಸಭೆ ಅದಾಯ ಸಿಗಲಿದೆ ಎಂದು ಅಭಿಪ್ರಾಯ ಪಟ್ಟರು,
ನಗರಸಭೆಯ ಸದಸ್ಯರು ಸೂಚಿಸಿದ ಕೆಲಸಗಳನ್ನು ಅಧಿಕಾರಿಗಳು ಸಿಬ್ಬಂದಿಗಳು ಮಾಡುತ್ತಿಲ್ಲ. ನಗರಸಭಾ ಸದಸ್ಯರು ಜವಾನರಂತೆ ಕಡತಗಳನ್ನು ಹಿಡಿದು ಕೊಂಡು ಸಿಬ್ಬಂದಿಗಳು ಟೇಬಲ್, ಟೇಬಲ್‌ಗೂ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಖಾತೆಗಳನ್ನು ಮಾಡಲು ಸದಸ್ಯರಿಗೇನೆ ೬ ತಿಂಗಳು ತಿರುಗಾಡಿಸುವಂತ ಸಿಬ್ಬಂದಿಗಳು ಇನ್ನ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಎಷ್ಟು ಮಾತ್ರ ಮಾಡುತ್ತಿದ್ದಾರೆ ಎಂದು ನೀವೆ ಉಹಿಸ ಬಹುದಾಗಿದೆ ಎಂದು ವಿವರಿಸಿದರು,
ನಗರಸಭೆಯ ಆಸ್ತಿಗಳನ್ನು ಈವೆಗೆ ಗುರುತಿಸಿ ಸಂರಕ್ಷಿಸಿ ಕೊಳ್ಳಲು ಯಾವೂದೇ ಕ್ರಮವಿಲ್ಲ. ನಗರದಲ್ಲಿ ಯುಜಿಡಿ ವಾಹನಗಳು ೪ ಇದ್ದರೂ ಚಾಲಕರಿಲ್ಲದೆ ಅವ್ಯವಸ್ಥೆ ಉಂಟಾಗಿದೆ. ೪೦೦ ಮಂದಿ ಸಿಬ್ಬಂದಿಗಳು ಅಗತ್ಯ ಇದೆ ಅದರೆ ಕನಿಷ್ಟ ೨೦೦ ಮಂದಿಯೂ ಇಲ್ಲದಂತಾಗಿರುವುದರಿಂದ ಸಾರ್ವಜನಿಕರ ಕೆಲಸಗಳು ಅಗುತ್ತಿಲ್ಲ. ಸಿಬ್ಬಂದಿಗಳ ಮೇಲು ಹೆಚ್ಚಿನ ಒತ್ತಡಗಳಿದೆ. ಈ ಸಂಬಂಧವಾಗಿ ಈ ಹಿಂದಿನ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದ ಅವರು ನಗರಸಭೆಯ ಜಾಗಗಳು ಬಹಳಷ್ಟು ಒತ್ತುವರಿಗಳಾಗಿದ್ದರೂ ಕ್ರಮವಿಲ್ಲ ಎಂದು ದೂರಿದರು.
ನಗರಸಭೆ ಆಸ್ತಿಗಳನ್ನು ಕಬಳಿಸಿರುವವರ ಬಳಿ ಸರ್ಕಾರಿ ಅಧಿಕಾರಿಗಳು ಹಾಗೂ ವಕೀಲರು ಶಾಮೀಲಾಗಿದ್ದಾರೆ. ತ್ಯಾಜ್ಯ ಘಟಕಕ್ಕೆ ೫ ಕೋಟಿ ವೆಚ್ಚ ಮಾಡಿ ಪ್ರಗತಿಯಲ್ಲಿದ್ದರೂ ದಾರಿಯ ಸಮಸ್ಯೆ ಎದುರಾಗಿದೆ. ಹಲವಾರು ಆಸ್ತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಈವರೆಗೂ ಒಂದು ಗೆದ್ದಿಲ್ಲ ಎಂದಾಗ ಈ ಮಾತಿಗೆ ಹಲವಾರು ಸದಸ್ಯರು ಧ್ವನಿಗೊಡಿಸಿದರು,
ನಗರಸಭೆಯ ಸದಸ್ಯ ಸೂರಿ ಮಾತನಾಡಿ ಟಮಕವನ್ನು ನಗರಸಭಾ ವ್ಯಾಪ್ತಿಗೆ ಪೂರ್ಣವಾಗಿ ಒಳ ಪಡೆಸ ಬೇಕು, ಎ.ಪಿ.ಎಂ.ಸಿ.ಯನ್ನು ಸಹ ಒಳಪಡೆಸಬೇಕಾಗಿದೆ. ನಗರಸಭೆಯಿಂದ ಲಭ್ಯವಿರುವ ಸೌಲಭ್ಯಗಳನ್ನು ಕಲ್ಪಿಸ ಬೇಕು, ನಗರಕ್ಕೆ ಪ್ರವೇಶದ್ವಾರದಲ್ಲಿ ಸ್ವಾಗತದ ಕಮಾನುಗಳನ್ನು ಅಳವಡಿಸ ಬೇಕು, ಅಮ್ಮೇರಹಳ್ಳಿ ಕೋಲಾರಮ್ಮ ಕೆರೆಗಳಲ್ಲಿನ ಗಿಡಗಂಟಿಗಳನ್ನು ತೆರವು ಮಾಡಿಸಿ ಅಭಿವೃದ್ದಿ ಪಡೆಸುವ ಮೂಲಕ, ಲೈಟಿಂಗ್ ವ್ಯವಸ್ಥೆಗಳು ಮಾಡಿ ಪ್ರವಾಸಿ ತಾಣವಾಗಿ ಪರಿವರ್ತಿಸ ಬೇಕೆಂದು ಮನವಿ ಮಾಡಿದರು,
ಸಭೆಯಲ್ಲಿ ಉಪಸ್ಥಿತರಿದ್ದ ನೂತನ ಪೌರಾಯುಕ್ತ ಶಿವನಂದ ಅವರು ಸದಸ್ಯರ ಸಮಸ್ಯೆಗಳನ್ನು ಹಾಗೂ ಶಾಸಕರ ಸೂಚನೆಗಳನ್ನು ಅಲಿಸಿ ದಾಖಲಿಸಿ ಕೊಂಡು ಮುಂದೆ ಕಾನೂನು ಬದ್ದವಾಗಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಮಂಜುನಾಥ್, ಅಶ್ವಥಪ್ಪ, ಗುಣಶೇಖರ್, ಜಗ್ನು ಅಸ್ಲಾಂ. ಪೈರೋಜ್ ಮುಂತಾದವರು ಉಪಸ್ಥಿತರಿದ್ದರು,
ಶಾಸಕ ಕೊತ್ತೂರು ಮಂಜುನಾಥ್ ಅವರು ಮಧ್ಯ ಪ್ರವೇಶಿಸಿ ಇನ್ನು ೮-೧೦ ದಿನಗಳಲ್ಲಿ ಕೆ.ಯು.ಡಿ.ಎ. ಸಮಿತಿಯನ್ನು ರಚಿಸಲಾಗುವುದು ಹೊಸ ಸಮಿತಿ ರಚನೆಯಾದ ಮೇಲೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಕೈಗೆತ್ತಿ ಕೊಂಡು ಅಭಿವೃದ್ದಿ ಪಡೆಸೋಣ ಎಂದು ಹೇಳಿದರು,