ನಗರಸಭೆ ಪೌರ ಕಾರ್ಮಿಕರಿಗೆ ಕಿಟ್ ವಿತರಣೆ

ರಾಯಚೂರು.ಜೂ.೦೮- ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ, ನವರತ್ನ ಯುವಕ ಸಂಘ, ಅಜೀಮ್ ಪ್ರೇಮ್‌ಜೀ ಸಂಸ್ಥೆಯಿಂದ ನಗರಸಭೆಯ ೨೦೦ ಪೌರ ಕಾರ್ಮಿಕರಿಗೆ ಇಂದು ಕಿಟ್ ವಿತರಿಸಲಾಯಿತು.
ನಗರಸಭೆ ಆವರಣದಲ್ಲಿ ಪೌರಾಯುಕ್ತ ವೆಂಕಟೇಶ ಅವರ ನೇತೃತ್ವದಲ್ಲಿ ಈ ಕಿಟ್ ವಿತರಣಾ ಕಾರ್ಯಕ್ರಮ ನಡೆಸಲಾಯಿತು. ಪೌರ ಕಾರ್ಮಿಕರಿಗೆ ದಿನಸು ನೀಡುವ ಮೂಲಕ ಮೂರು ಸಂಸ್ಥೆಗಳು ಮಾನವೀಯತೆ ಮೆರೆದವು. ಈ ಸಂದರ್ಭದಲ್ಲಿ ಅನಿಲ್ ಕುಮಾರ, ಆಂಜಿನೇಯ್ಯ, ಜನಾರ್ಧನ ಹಳ್ಳಿಬೆಂಚಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.