ನಗರಸಭೆ-ಪಟ್ಟಣ ಪಂಚಾಯ್ತಿಗೆ 27 ರಂದು ಮತದಾನ

ಸಂಜೆವಾಣಿ ವಾರ್ತೆ
ಹೊಸಪೇಟೆ ಡಿ4:  ಹೊಸಪೇಟೆ ನಗರಸಭೆ ಮತ್ತು ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯ್ತಿಗೆ ಇದೇ 27ಕ್ಕೆ ಮತದಾನ ನಡೆಯಲಿದ್ದು ಚುನಾವಣೆಗೆ ನಿಯೋಜಿತರಾದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾರದರ್ಶಕ ಹಾಗೂ ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸಬೇಕು ಎಂದು  ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಹೇಳಿದರು.
ಪತ್ರಿಕಾ ಭವನದಲ್ಲಿ ಚುನಾವಣೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ನಗರಸಭೆಯ 35 ವಾರ್ಡ್‍ಗಳು, 167 ಮತಗಟ್ಟೆಗಳು, 06 ಚುನಾವಣಾಧಿಕಾರಿಗಳು, 06 ಸಹಾಯಕ  ಚುನಾವಣಾಧಿಕಾರಿಗಳು, 03 ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿಗೆ ಚುನಾವಣಾಧಿಕಾರಿಗಳು, 03  ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಡಿ. 08 ರಿಂದ ಡಿ.15ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ಡಿ.27ರಂದು ಮತದಾನ, ಡಿ.30ರಂದು ಮತ ಎಣಿಕೆ ನಡೆಯಲಿದೆ ಎಂದರು. ಚುನಾವಣಾಧಿಕಾರಿಗಳ/ ಸೆಕ್ಟೋರಲ್, ಅಧಿಕಾರಿಗಳ/ಮಾಸ್ಟರ್, ಟ್ರೇನರ್‍ಗಳ/ಚುನಾವಣಾ ಅಭ್ಯರ್ಥಿಗಳ ವೆಚ್ಚದ ನೋಡಲ್ ಅಧಿಕಾರಿಗಳಿಗೆ ಚುನಾವಣಾ ಸಂಬಂಧಿತ ಯಾವ ರೀತಿಯ ನೀತಿ ನಿಯಮಗಳನ್ನು ಪಾಲಿಸಬೇಕು ಎಂಬುದು ಕುರಿತು ವಿವರಿಸಿದರು.
ತಹಶೀಲ್ದಾರ ಹೆಚ್.ವಿಶ್ವನಾಥ್, ಪೌರಯುಕ್ತ ಮನ್ಸೂರು ಅಲಿ, ನಗರಾಭಿವೃದ್ದಿ ಪ್ರಾಧಿಕಾರ ಆಯುಕ್ತ ಈರಪ್ಪ ಬಿರಾದಾರ್ ಸೇರಿದಂತೆ ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಪಾಲ್ಗೊಂಡಿದ್ದರು.