ನಗರಸಭೆ: ದಿನದ ಮಾರುಕಟ್ಟೆ ೨೦,೨೨,೦೦೦ ಸಾವಿರ ರೂ.ಗೆ ಹರಾಜು

ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೦೨- ನಗರಸಭೆ ವ್ಯಾಪ್ತಿಯಲ್ಲಿನ ದಿನದ ಮಾರುಕಟ್ಟೆ ,ವಾರದ ಮಾರುಕಟ್ಟೆ, ಮಾಂಸ ಮಾರಾಟ ಅಂಗಡಿಗಳು, ದನದ ಸಂತೆ ಇವುಗಳಿಗೆ ೨೦೨೪-೨೫ ನೇ ಸಾಲಿನ ಅವಧಿಯ ವಿವಿಧ ಮಾರುಕಟ್ಟೆ ಸುಂಕ ವಸೂಲಾತಿ ಇವುಗಳಿಗೆ ಬಹಿರಂಗ ಹರಾಜು ಪ್ರಕ್ರಿಯೆ ಇಂದು ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಒಂದು ವರ್ಷದ ಅವಧಿಗೆ ನಡೆಯಿತು.
ಸವಾಲಿನ ಅಂತಿಮ ಮೊತ್ತಕ್ಕೆ ಶೇ.೧೮% ರಷ್ಟು ಜಿ.ಎಸ್.ಟಿ ತೆರಿಗೆಯನ್ನು ಬಿಡ್ ದಾರರು ಹರಾಜು ಪ್ರಕ್ರಿಯೆ ದಿನದಂದು ಅಥವಾ ಮೂರು ದಿನಗಳ ಒಳಗೆ ಸಂದಾಯ ಮಾಡತಕ್ಕದ್ದು ಎಂಬ ನಿಯಮ ಹರಾಜು ಪ್ರಕ್ರಿಯೆಯಲ್ಲಿ ಒಳಗೊಂಡಿತ್ತು.
ಸಾರ್ವಜನಿಕ ಪ್ರಕಟಣೆ ಆಧರಿಸಿ ನಗರಸಭೆ ಕಾರ್ಯಾಲಯ ದಲ್ಲಿ ೨೦೨೪-೨೫ ನೇ ಸಾಲಿನ ಅವಧಿಗೆ ಏಪ್ರಿಲ್ ೨೦೨೪ ರಿಂದ ಮಾರ್ಚ್ ೨೦೨೫ ಅಂತ್ಯದವರೆಗೆ ಗುತ್ತಿಗೆ ನೀಡುವ ಸಲುವಾಗಿ ಬಹಿರಂಗ ಹರಾಜು ನಡೆಯಿತು ಇದರಲ್ಲಿ ಬಿಡ್ ದಾರರು ಪಾಲ್ಗೊಂಡಿದ್ದರು ಮತ್ತು ಹರಾಜು ಪಾಲುದಾರರು ನಗರಸಭೆ ಷರತ್ತುಗಳಿಗೆ ಬದ್ದರಾಗಿರಬೇಕು ಎಂದು ಪ್ರಕಟಣೆ ಯಲ್ಲಿ ತಿಳಿಸಿದರು.
ದಿನದ ಮಾರುಕಟ್ಟೆ ಹರಾಜಿನಲ್ಲಿ ಒಟ್ಟು ೨೬ ಬಿಡ್ ದಾರರು ಪಾಲ್ಗೊಂಡಿದ್ದರು. ದಿನದ ಮಾರುಕಟ್ಟೆ ೨೦,೨೨,೦೦೦ (ಇಪ್ಪತ್ತು ಲಕ್ಷ ಇಪ್ಪತ್ತೆರಡು ಸಾವಿರ ರೂ) ಬಿಡ್‌ದಾರ ಸುರೇಶ ಸುಕಾಲಪೇಟೆ (ಕಿಚ್ಚ) ಹಾಗೂ ವಾರದ ಸಂತೆ ಬಿಡ್ ದಾರ ವಿರೇಶ ಹಟ್ಟಿ ೬,೨೦,೦೦೦ (ಆರು ಲಕ್ಷ ಇಪ್ಪತ್ತು ಸಾವಿರ ರೂ.ಗೆ ಹರಾಜು ಆಯಿತು. ಧನದ ಸಂತೆ, ಬಿಡ್‌ದಾರ ನಾಗರಾಜ್ ೩,೯೦೦೦೦, ಮಾಂಸ ಮಾರಾಟ ಅಂಗಡಿಗಳ ಹರಾಜು ಶಿವಶಂಕರ್ ಬಾದರ್ಲಿ ೮೦೦೦೦ ರೂ, ಹರಾಜು ಆಗಿದೆ.
ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ನಗರಸಭೆ ಮಾಜಿ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸದಸ್ಯರಾದ ವಿರೇಶ ಹಟ್ಟಿ ಸುರೇಶ ಜಾಧವ್ ಸಿಬ್ಬಂದಿ ಗಳಾದ ಲಕ್ಷ್ಮೀಪತಿ,ಮಾಧುರಿ ಸೇರಿದಂತೆ ವೆಂಕಟೇಶ ಗಿರಿಜಾಲಿ, ವಿರೇಶ ಬಾವಿಮನಿ,ಶಂಬಣ್ಣ ಸುಕಾಲಪೇಟೆ, ಅಮರೇಶ ಗಿರಿಜಾಲಿ, ನಾಗರಾಜ ಕವಿತಾಳ, ಶರಣಬಸವ ಭಂಗಿ, ಪ್ರಶಾಂತ ಕಿಲ್ಲೆದ ಸೇರಿದಂತೆ ಅನೇಕ ಬಿಡ್ ದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.