ಕೋಲಾರ, ಜೂ. ೧೪:ಕೋಲಾರ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ಜೂ ೧೪ ರಿಂದ ಜು ೫ರ ವರೆಗೆ ನಗರದ ೧೭ ವಾರ್ಡಗಳಲ್ಲಿ ಪ್ರಥಮ ಹಂತವಾಗಿ ಆಸ್ತಿ ತೆರಿಗೆ ವಸೂಲಾತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಆಸ್ತಿ ತೆರಿಗೆಗಳನ್ನು ಪಾವತಿಸುವ ಮೂಲಕ ಸಹಕಾರ ನೀಡ ಬೇಕೆಂದು ಎಂದು ನಗರಸಭೆ ಪೌರಾಯುಕ್ತ ಶಿವನಂದ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಸಭೆಗೆ ಪಾವತಿಸ ಬೇಕಾದ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪ್ರತಿ ವರ್ಷದ ಏಪ್ರಿಲ್ ಮಾಹೆಯೊಳಗೆ ಪಾವತಿಸಿದರೆ ಶೇ ೫ ರಷ್ಟು ತೆರಿಗೆ ರಿಯಾಯಿತಿ ನೀಡಲಾಗುವುದು, ಜುಲೈ ತಿಂಗಳಿಂದ ಶೇ ೨ ರಷ್ಟು ದಂಡದೊಂದಿಗೆ ತೆರಿಗೆ ಪಾವತಿಸ ಬೇಕಾಗುತ್ತದೆ. ಅದ್ದರಿಂದ ಆಸ್ತಿ ತೆರಿಗೆಗಳನ್ನು ಪಾವತಿಸದೆ ಬಾಕಿ ಉಳಿಸಿ ಕೊಂಡಿರುವ ಆಸ್ತಿ ಮಾಲೀಕರುಗಳಿಗೆ ಅನುಕೊಲವಾಗುವಂತೆ ನಗರಸಭೆ ವತಿಯಿಂದ ಎಲ್ಲಾ ವಾರ್ಡಗಳಿಗೆ ನಿಗಧಿತ ಸ್ಥಳಗಳಲ್ಲಿ ನಿಗಧಿ ಪಡೆಸಿದ ದಿನಾಂಕಗಳಂದು ಆಸ್ತಿ ತೆರಿಗೆ ವಸೂಲಾತಿ ಆಂದೋಲನ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದರು,
ಆಸ್ತಿ ತೆರಿಗೆ, ನೀರಿನ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ, ಉದ್ದಿಮೆ ಪರವಾನಿಗೆ ಶುಲ್ಕ, ಜಾಹಿರಾತು ತೆರಿಗೆ ಹಾಗೂ ಯುಜಿಡಿ ಶುಲ್ಕಗಳನ್ನು ಸ್ಥಳದಲ್ಲಿ ಪಾವತಿಸಿ ಕೊಂಡು ರಸೀದಿಗಳನ್ನು ನೀಡಲಾಗುವುದು. ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಿಸಿ ಕೊಳ್ಳ ಬೇಕೆಂದು ಮನವಿ ಮಾಡಿದರು,
ಜೂ ೧೪ ವಾರ್ಡ್ ಸಂಖ್ಯೆ ೧ ಟಮಕ ಸಾರ್ವಜನಿಕ ಗ್ರಂಥಾಲಯ, ಜೂ,೧೫ ವಾರ್ಡ ಸಂಖ್ಯೆ೨ ಗಾಂಧಿನಗರ ಸರ್ಕಾರಿ ಆಸ್ಪತ್ರೆ, ಜೂ, ೧೬ ವಾರ್ಡ್ ಸಂಖ್ಯೆ ೩ ಕೋಟೆ ಸೋಮೇಶ್ವರ ದೇವಾಲಯ ಸಮೀಪ, ಜೂ,೧೭ ವಾರ್ಡ್ ಸಂಖ್ಯೆ ೪ ಕುರುಬರ ಪೇಟೆ ಪಂಚಮುಖಿ ಅಂಜನೇಯ ಸ್ವಾಮಿ ದೇವಾಸ್ಥಾನ ಸಮೀಪ, ಜೂ,೧೯ ವಾರ್ಡ್ ಸಂಖ್ಯೆ ೫ ಅಂಬೇಡ್ಕರ್ ನಗರ ಬಂಗಾರಪೇಟೆ ಸರ್ಕಲ್, ಜೂ,೨೦ ವಾರ್ಡ್ ಸಂಖ್ಯೆ ೬ ಧರ್ಮರಾಯ ನಗರ ಮತ್ತು ಬೈರೇಗೌಡ ನಗರ ಶ್ರೀ ಕೃಷ್ಣ ದೇವಾಸ್ಥಾನದ ಬಳಿ, ಜೂ,೨೧, ವಾರ್ಡ್ ಸಂಖ್ಯೆ ೭, ಪಾಲಸಂದ್ರ ಲೇಔಟ್ ೩ನೇ ಮುಖ್ಯ ರಸ್ತೆ ಪಾಲಸಂದ್ರ ಬಡಾವಣೆ, ಜೂ,೨೨ ವಾರ್ಡ್ ಸಂಖ್ಯೆ ೮,ಗಲ್ ಪೇಟೆ ಚಾಮುಂಡೇಶ್ವರಿ ದೇವಸ್ಥಾನ ಸಮೀಪ,
ಜೂ೨೩, ವಾರ್ಡ್‌ಸಂಖ್ಯೆ ೯ ಫಕೀರ್ ವಾಡ ಮತ್ತು ಬ್ರಾಹ್ಮಣರ ಬೀದಿ, ಅಮ್ಮವಾರಿ ಪೇಟೆ ಸರ್ಕಲ್ ಸಮೀಪ, ಜೂ.೨೬ ವಾರ್ಡ್ ಸಂಖ್ಯೆ ೧೦ ಗೌರಿಪೇಟೆ, ಅಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ, ಜೂ.೨೭,ವಾರ್ಡ್ ಸಂಖ್ಯೆ ೧೧, ಅರಳೇ ಪೇಟೆ, ಮತ್ತು ಕಠಾರಿ ಪಾಳ್ಯ ಗಾಂಧಿವನ ಸರ್ಕಲ್ ಬಳಿ, ಜೂ,೨೮ ವಾಡ್ ಸಂಖ್ಯೆ ೧೨ ಪಿಸಿ ಬಡಾವಣೆ ಮತ್ತು ಹೊಸ ಬಡಾವಣೆ ಕನಕ ಮಂದಿರ ಹತ್ತಿರ ಕೆನರಾ ಬ್ಯಾಂಕ್ ರಸ್ತೆ ಹೊಸಬಡಾವಣೆ,ಜೂ,೩೦ ವಾರ್ಡ್ ಸಂಖ್ಯೆ ೧೩, ಪಿ.ಸಿ ಹಳ್ಳಿ ಬಡಾವಣೆ ಮತ್ತು ಜಯನಗರ ಶ್ರೀ ಕೋದಂಡ ರಾಮ ಮಂದಿರ ಹತ್ತಿರ ಪಿ.ಸಿ.ಬಡಾವಣೆ,
ಜುಲೈ ೧ ವಾರ್ಡ್ ಸಂಖ್ಯೆ ೧೪ ಬಾಪೂಜಿ ಸರ್ಕಾರಿ ಶಾಲೆ ಹತ್ತಿರ ಜಯನಗರ, ಜೂ ೩ ವಾರ್ಡ ಸಂಖ್ಯೆ ೧೫ ಹಾರೋಹಳ್ಳಿ ಗೋಕುಲ್ ಕಾಲೇಜು, ಜು,೪ ವಾರ್ಡ್ ಸಂಖ್ಯೆ ೧೬, ಮಹಾಲಕ್ಷ್ಮೀ ಲೇಔಟ್ ಪ್ರೆಸಿಡೆನ್ಸಿ ಶಾಲೆ ಹತ್ತಿರ, ಜು, ೫ ವಾರ್ಡ್ ಸಂಖ್ಯೆ ೧೬, ಷಾಹೀನ್ ಷ ನಗರ ಉರ್ದು ಪ್ರಾಥಮಿಕ ಶಾಲೆ ಹತ್ತಿರ ಷಹೀನ್ ಷಾ ನಗರದ ಸಮೀಪದಲ್ಲಿ ನಗರಸಭೆಯ ತಂಡ ಆಂದೋಲನ ತೆರಿಗೆಗಳ ಪಾವತಿಸಿ ರಸೀದಿಗಳನ್ನು ಪಡೆಯ ತಕ್ಕದ್ದು ಎಂದು ತಿಳಿಸಿದ್ದಾರೆ.