ನಗರಸಭೆ ಚುನಾವಣೆ: ಶೇ. 51.25 ರಷ್ಟು ಮತದಾನ

ಬೀದರ:ಎ.28: ಇಲ್ಲಿಯ ನಗರಸಭೆಯ 32 ವಾರ್ಡ್‌ಗಳಿಗೆ ಮಂಗಳವಾರ ಚುನಾವಣೆಯಲ್ಲಿ ಶೇಕಡ 51.25 ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7 ರಿಂದ 9 ಗಂಟೆ ವರೆಗೆ ಶೇ 7.92ರಷ್ಟು. 11 ಗಂಟೆ ವರೆಗೆ ಶೇ 19.37ರಷ್ಟು, ಮಧ್ಯಾಹ್ನ 1 ಗಂಟೆ ವರೆಗೆ ಶೇ 30.02 ರಷ್ಟು, 3 ಗಂಟೆ ವರೆಗೆ 39.11 ರಷ್ಟು, ಸಂಜೆ 5 ಗಂಟೆ ವರೆಗೆ 48.09 ರಷ್ಟು ಹಾಗೂ ಸಂಜೆ 7 ಗಂಟೆ ವರೆಗೆ 51.25 ರಷ್ಟು ಮತದಾನವಾಗಿದೆ.

ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾರಣ ಮತದಾರರು ಮನೆಗಳಿಂದ ಹೊರಗೆ ಬರಲಿಲ್ಲ. ಹೀಗಾಗಿ ಮತದಾನ ಪ್ರಮಾಣ ಕಡಿಮೆ ಆಗಿದೆ.