ನಗರಸಭೆ : ಕಾಂಗ್ರೆಸ್-ಜೆಡಿಎಸ್‌ದಿಂದ ಮುಸ್ಲಿಂಮರಿಗೆ ಮೋಸ

ರಾಯಚೂರು.ನ.19- ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಬಿಜೆಪಿ ಮುಖಂಡ ಅಂಬಾಜಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಮೀಸಲಾತಿ ಮತ್ತು ಬಹುಮತ ವಿದ್ದರು ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದ ನಾಯಕರನ್ನು ಅಧ್ಯಕ್ಷರು ಮಾಡುವಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ವಿಫಲವಾಗಿದೆ ಎಂದರು.
ರವಿ ಬೋಸರಾಜು ಮತ್ತು ಬೋಸುರಾಜು ಅವರು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಅಂತಿಮ ಗಳಿಗೆವರಿಗೆ ಮುಸ್ಲಿಂ ಸಮುದಾಯ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡುವ ಸುಳ್ಳು ಭರವಸೆ ನೀಡಿ ಕೊನೆಕ್ಷಣದಲ್ಲಿ ಮೋಸ ಮಾಡಿದ್ದಾರೆ. ರವಿ ಬೋಸರಾಜು ಅವರಿಗೆ ಕಾಂಗ್ರೆಸ್ ಪಕ್ಷ ಮುಖ್ಯವಲ್ಲ ಕೇವಲ ಅವರ ಅಸ್ತಿತ್ವ ಮುಖ್ಯ ಎಂದು ಆರೋಪಿಸಿದರು.
ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳನ್ನು ನಿಲ್ಲಿಸಿ ಪಕ್ಷದ ಅಭ್ಯರ್ಥಿಗಳನ್ನು ಸೋಲುವಂತೆ ಮಾಡಿದರು.
ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ್ ಅವರು ಮುಸ್ಲಿಂ ಸಮುದಾಯದ ನಾಯಕರನ್ನು ನಗರಸಭೆ ಅಧ್ಯಕ್ಷರನ್ನಾಗಿ ಮಾಡುವ ಭರವಸೆ ನೀಡಿದರು. ಐದು ಜನ ಪಕ್ಷೇತರರು ಬಂದಲ್ಲಿ ಖಂಡಿತವಾಗಿ ಮುಸ್ಲಿಂ ಸಮುದಾಯದ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿದರು. ಆದರೂ ಕೂಡ ಕಾಂಗ್ರೆಸ್ ಪಕ್ಷ ಕೊನೆಯವರೆಗೆ ಮುಸ್ಲಿಂ ಸಮುದಾಯದ ಸಾಜಿದ್ ಸಮೀರ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಸುಳ್ಳು ಭರವಸೆ ನೀಡಿ ಮೋಸ ಮಾಡಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಪಕ್ಷ ಮುಸ್ಲಿಂ ವಿರೋಧಿ ಎಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನೈತಿಕತೆ ಇಲ್ಲ. ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮುದಾಯ ಜನತೆಗೆ ಮೋಸ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಸೈಯದ್ ಕೈಸರ್ ಹುಸೇನಿ, ಮೋಸಿನ್ ಬಾಬಾ, ಸೈಯ್ದ್ ಮಾಸೂಮ್ ಖಾದ್ರಿ, ಮೊಹಮ್ಮದ್ ಅಲಿ ಸಾಬ್, ಜಾಫರ್ ಬೇಗ್, ಗೋಪಿ ಜಗ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.