ನಗರಸಭೆ, ಕಂದಾಯ, ತಾ.ಪಂ ಇಲಾಖೆಗಳು ಜಿಡ್ಡುಗಟ್ಟಿವೆ : ಶಾಸಕ ಬಿ.ಪಿ.ಹರೀಶ್ 

ಹರಿಹರ.ಜೂ.೪: ಜಿಡ್ಡುಗಟ್ಟಿದ ಆಡಳಿತದಿಂದ ನಗರಸಭೆ, ಕಂದಾಯ ಮತ್ತು ತಾ.ಪಂ ಇಲಾಖೆಗಳಿಂದ ಜನರು ಬೇಸತ್ತಿದ್ದು ಹತ್ತು ದಿನಗಳೊಳಗೆ ಪೆಂಡಿಂಗ್ ಇರುವ ಎಲ್ಲಾ ಫೈಲ್‌ಗಳನ್ನು ಕ್ಲಿಯರ್ ಮಾಡಬೇಕು ಎಂದು ನೂತನ ಶಾಸಕರಾದ ಬಿ.ಪಿ.ಹರೀಶ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ  ತಾಲೂಕು ಮಟ್ಟದ ಅಧಿಕಾರಿಗಳ ಪರಿಚಯ ಸಭೆಯಲ್ಲಿ ವಿವಿಧ ಇಲಾಖೆಗಳ ಕಾರ್ಯವೈಕರಿಗಳ ಬಗ್ಗೆ ಎಚ್ಚರಿಕೆ ನೀಡಿದರು. ಹರಿಹರ ಮಾಧ್ಯಮ ವರ್ಗ ಹಾಗೂ ಕೆಳವರ್ಗದ ಜನರು ವಾಸಿಸುವ ನಗರವಾಗಿದ್ದು ಈಗಾಗಲೇ ನಗರದ ರಸ್ತೆಗಳು ಯುಜಿಡಿ ಹಾಗೂ ಜಲಸಿರಿ ಯೋಜನೆಗಳಿಂದ ಸಂಪೂರ್ಣ ಹಾಳಾಗಿವೆ.ನಗರಸಭೆಗೆ ಜನರು ತಮ್ಮ ಖಾತೆ ಬದಲಾವಣೆ ಹಾಗೂ ಖಾತೆ ಉತಾರ ಪಡೆಯಲು ಅಲೆದಾಡುವ ಪರಿಸ್ಥಿತಿ ಬಂದೊದಗಿದೆ, ಇಂತಹ ಪರಿಸ್ಥಿತಿಗೆ ಜನರೇ ಹೊಂದಿಕೊAಡು ಹೋಗುವಂತಹ ವ್ಯವಸ್ಥೆ ನಿರ್ಮಾಣವಾಗಿರುವುದು ಬೇಸರ ಮೂಡಿಸುತ್ತದೆ ಎಂದರು.ಕೂಡಲೆ ಪೌರಾಯುಕ್ತರು ಜಿಡ್ಡುಗಟ್ಟಿದ ನಗರಸಭೆಯ ಆಡಳಿತವನ್ನು ಚುರುಕುಗೊಳಿಸಿ ಇನ್ನು ಹತ್ತು ದಿನದೊಳಗೆ ಬಾಕಿ ಉಳಿಸಿಕೊಂಡಿರುವ ಕೆಲಸಗಳನ್ನು ಮುಗಿಸಬೇಕು ನಾನು ಹತ್ತು ದಿನದ ನಂತರ ತಮ್ಮ ಕಚೇರಿಗೆ ಭೇಟಿ ನೀಡುತ್ತೇನೆ ಆ ಸಂದರ್ಭದಲ್ಲಿ ಯಾವುದೇ ದೂರುಗಳು ಇರಬಾರದು ಎಂದು ಪೌರಾಯುಕ್ತ ಬಸವರಾಜ್ ಐಗೂರ್‌ಗೆ ತಾಕೀತು ಮಾಡಿದರು.ತಾಲೂಕಿನ ಗ್ರಾಮೀಣ ಭಾಗದಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಂಕ್ರೀಟ್ ರಸ್ತೆಗಳನ್ನು ಒಡೆದು ಪೈಪ್ ಅಳವಡಿಸಲಾಗುತ್ತಿದೆ ಇದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗುತ್ತಿವೆ. ತಾಲೂಕಿನಲ್ಲಿ 2008ರಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಇಂದಿಗೂ ನಾವು ನೋಡುತ್ತಿದ್ದೇವೆ. ಜನರು ನನ್ನಿಂದ ಅಭಿವೃದ್ಧಿ ಬಯಸುತ್ತಾರೆ, ಹಾಗಾಗಿ ಅಧಿಕಾರಿಗಳ ಸಹಕಾರ ನನಗೆ ಅತ್ಯಗತ್ಯ. ನಾನು ಮೊದಲು ಆದ್ಯತೆ ಕೊಡುವುದು ಸ್ವಚ್ಛತೆ, ರಸ್ತೆಗಳ ಅಭಿವೃದ್ಧಿಗೆ. ತಹಸೀಲ್ದಾರ್ ಹಾಗೂ ತಾ.ಪಂ.ಇ.ಓ ರವರು ಯುವಕರಿದ್ದು ತಮ್ಮ ಇಲಾಖೆಗಳ ಆಡಳಿತವನ್ನು ಚುರುಕುಗೊಳಿಸಬೇಕು ಎಂದರು.ತಮ್ಮ ಇಲಾಖೆಗಳಿಗೆ ಬರುವ ಗ್ರಾಮೀಣ ಜನರನ್ನು ಓಡಾಡಿಸದಿರಿ, ನಮ್ಮ ಬಳಿ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಿ. ನನ್ನ ಅವಧಿಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ನಂಬಿಕೆ ಕ್ಷೇತ್ರದ ಜನರಲ್ಲಿ ಬರಬೇಕು. ತಾವುಕೂಡ ಮುಂದಿನ ದಿನಗಳಲ್ಲಿ ನಡೆದುಕೊಳ್ಳುತ್ತಿರಿ ಎಂಬ ವಿಶ್ವಾಸವನ್ನು ಹೊಂದಿದ್ದೇನೆ ಎಂದರು.ವ್ಯವಸ್ಥೆಯನ್ನ ಸರಿಪಡಿಸುವ ಸಂದರ್ಭದಲ್ಲಿ ತಮ್ಮಲ್ಲಿಯ ಕೆಲವು ಅಧಿಕಾರಿಗಳು ತಮ್ಮನ್ನು ವರ್ಗಾವಣೆ ಮಾಡುತ್ತಾರೆ ಎಂಬ ವಿವಿಧ ರೀತಿಯಲ್ಲಿ ಭಯದ ತಂತ್ರಗಾರಿಕೆಯನ್ನು ಉಪಯೋಗಿಸುತ್ತಾರೆ ಇಂಥವರಿAದ ಎಚ್ಚರ ವಹಿಸಿ, ನನ್ನ ಆಡಳಿತ ವ್ಯವಸ್ಥೆಯಲ್ಲಿ ಯಾರಿಗೂ ಹೆದರಬೇಕಿಲ್ಲ ನಾನು ಕೂಡ ಯಾರಿಗೂ ಹೆದರುವುದಿಲ್ಲ ಕ್ಷೇತ್ರದ ಜನರ ನೆಮ್ಮದಿ ಹಾಗೂ ಅಭಿವೃದ್ಧಿ ನನ್ನ ಮುಖ್ಯ ಧ್ಯೇಯವಾಗಿದೆ ಎಂದರು.ಮುAದಿನ ದಿನಗಳಲ್ಲಿ ಪ್ರತಿ ಇಲಾಖೆಗೂ ಭೇಟಿ ನೀಡಿ ಅಲ್ಲಿನ ನ್ಯೂನ್ಯತೆಗಳ ಬಗ್ಗೆ ಚರ್ಚಿಸುತ್ತೇನೆ ಈ ಸಂದರ್ಭದಲ್ಲಿ ತಮ್ಮ ಇಲಾಖೆಯ ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಬೇಕು ತಪ್ಪಿದಲ್ಲಿ ಮುಂದಾಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು.ಸಾರ್ವಜನಿಕ ಆಸ್ಪತ್ರೆಯ ವ್ಯವಸ್ಥೆಯುಕೂಡ ಕಲುಷಿತಗೊಂಡಿದ್ದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಕೂಡಲಿ ಆಸ್ಪತ್ರೆಯ ಆರೋಗ್ಯವನ್ನ ಸರಿಪಡಿಸಿಕೊಳ್ಳಬೇಕೆಂದು ತಾಕೀತು ಮಾಡಿದರು.ಸಭೆಯಲ್ಲಿ ತಹಸೀಲ್ದಾರ್ ಪೃತ್ವಿ ಸಾನಿಕಂ, ತಾ.ಪಂ.ಇ.ಓ. ಎನ್.ರವಿ, ತೋಟಗಾರಿಕೆ ಇಲಾಖೆಯ ರೇಖಾ, ಕೃಷಿ ಇಲಾಖೆಯ ನಾರನಗೌಡ, ಟಿಎಚ್‌ಓ ಚಂದ್ರಮೋಹನ್, ಬಿಇಓ ಹನುಮಂತಪ್ಪ, ಸಮಾಜ ಕಲ್ಯಾಣ ಇಲಾಖೆ ನಸುರುದ್ದೀನ್, ಬಿಸಿಎಂ ಇಲಾಖೆ ನಸುರುತ್, ಬೆಸ್ಕಾಂ ಇಲಾಖೆ ನಾಗರಾಜ್‌ನಾಯ್ಕ್, ಹನುಮಾನಾಯ್ಕ್, ತಾ.ಪಂ.ಸಹಾಯಕ ಲೆಕ್ಕಾಧಿಕಾರಿ ಲಿಂಗರಾಜ್, ವ್ಯವಸ್ಥಾಪಕಿ ಪೂಜಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

,,,,,,,,,,,,,,,,,,,,,