ನಗರಸಭೆ ಉಪಾಧ್ಯಕ್ಷೆ, ಸದಸ್ಯರಿಂದ ಪ್ರತಿಭಟನೆ

ನಂಜನಗೂಡು:ಮಾ:24: ನಗರಸಭೆ ಉಪಾಧ್ಯಕ್ಷೆ ಸಭಾತ್ಯಾಗ. ಆಯವ್ಯಯ ಮಂಡನೆ ವೇಳೆ ಸದಸ್ಯರಿಂದ ಪ್ರತಿಭಟನೆ.
2021 22 ನೇ ಸಾಲಿನ ಆಯವ್ಯಯ ಮಂಡನೆ ವೇಳೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ನಗರಸಭೆ ಉಪಾಧ್ಯಕ್ಷೆ ನಾಗಮಣಿ ಮಾತನಾಡಿ ಮಹಿಳೆಯೆಂದು ನನಗೆ ಅವಮಾನ ಮಾಡಿದ್ದಾರೆ ಆದ್ದರಿಂದ ಈ ಸಭೆಯನ್ನು ಬಹಿಷ್ಕಾರ ಮಾಡುತ್ತೇನೆ ಎಂದು ಹೊರಟರು ಈ ಸಂದರ್ಭದಲ್ಲಿ ಬಹುತೇಕ ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರು ಬೆಂಬಲಿಸಿ ಕೈಜೋಡಿಸಿದರು ಇದಕ್ಕೆ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ಬೆಂಬಲಿಸಿದರು. ಆಯವ್ಯಯದ ವಿಷಯವನ್ನು ಸಂಕ್ಷಿಪ್ತವಾಗಿ ಚರ್ಚಿಸುವ ಸಂದರ್ಭದಲ್ಲಿ ನನ್ನನ್ನು ಕಡೆಗಣಿಸಿ ಅವಮಾನ ಮಾಡಿದ್ದಾರೆ ಯಾವುದಕ್ಕೂ ನನಗೆ ಮಾಹಿತಿ ನೀಡದೆ ತಮಗೆ ಇಷ್ಟ ಬಂದ ರೀತಿ 2019-22ನೇ ಸಾಲಿನ ಆಯವ್ಯಯದ ಪಟ್ಟಿ ತಯಾರು ಮಾಡಿದ್ದಾರೆ ಉಪಾಧ್ಯಕ್ಷ ಎಂದರೆ ಈ ವಿಷಯವಾಗಿ ನನ್ನ ಪಾತ್ರವಿಲ್ಲ ವೇ ನಾನು ಏನೇನು ಕೇಳಬಾರದ ಒಬ್ಬ ಮಹಿಳೆಯೆಂದು ನನಗೆ ಅವಮಾನ ಮಾಡಿದ್ದಾರೆ ನಗರಸಭೆ ವಿಷಯವಾಗಿ ಯಾವುದಕ್ಕೂ ನನ್ನ ಗಣನೆಗೆ ತೆಗೆದುಕೊಳ್ಳದೆ ಅವರಿಗೆ ಇಷ್ಟ ಬಂದ ರೀತಿ ಕೆಲಸಗಳು ನಡೆಯುತ್ತಿವೆ ಆದ್ದರಿಂದ ಈ ಸಭೆಯಿಂದ ಬೈ ಕಟ್ ಮಾಡಿಕೊಂಡು ಸಭೆಯಿಂದ ಹೊರ ನಡೆದರು ನಂತರ ಎಲ್ಲಾ ಸದಸ್ಯರು ಅವರಿಗೆ ಬೆಂಬಲ ಸೂಚಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ನಮಗೆ ನ್ಯಾಯ ಬೇಕು ಅಧ್ಯಕ್ಷರಿಗೆ ಆಯುಕ್ತರಿಗೆ ಅಧಿಕಾರಿಗಳಿಗೆ ದಿಕ್ಕಾರ ಕೂಗುತ್ತಾ ಪ್ರತಿಭಟಿಸಿದರು.
ನಗರಸಭೆ ಆಯುಕ್ತ ಕರಿಬಸವಯ್ಯ ಅಧ್ಯಕ್ಷ ಮಹಾದೇವಸ್ವಾಮಿ ಪ್ರತಿಭಟನೆ ಮಾಡುತ್ತಿದ್ದ ಸದಸ್ಯರು ಮತ್ತು ಉಪಾಧ್ಯಕ್ಷೆ ಇವರಿಗೆ ಮನವರಿಕೆ ಮಾಡಿಕೊಟ್ಟು ಮುಂದೆ ಈ ರೀತಿ ಆಗೋದಿಲ್ಲ ಎಂದು ಪ್ರತಿಭಟನೆಯನ್ನು ಕೈ ಬಿಡಿಸಿದರು ನಂತರ ಸದಸ್ಯರುಗಳು ಸಭೆಗೆ ಹಾಜರಾದರು.
ಸದಸ್ಯರಾದ ಗಂಗಾಧರ ಗಾಯತ್ರಿ ಮಹೇಶ್ ಸಿದ್ದಿಕ್ ಪ್ರದೀಪ್ ಮತ್ತು ಸ್ವಾಮಿ ವಸಂತ ಸೇರಿದಂತೆ ಇತರ ಸದಸ್ಯರುಗಳು ಇದ್ದರು.