ನಗರಸಭೆ ಆಡಳಿತ ಬಿಜೆಪಿ ತೆಕ್ಕೆಗೆ

ತಿಪಟೂರು, ನ. ೨- ಇಲ್ಲಿನ ನಗರಸಭೆಯ ಅಧಿಕಾರ ಗದ್ದುಗೆಯನ್ನು ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಅಧ್ಯಕ್ಷರಾಗಿ ಪಿ.ಜೆ. ರಾಮಮೋಹನ್, ಉಪಾಧ್ಯಕ್ಷರಾಗಿ ಸೊಪ್ಪು ಗಣೇಶ್ ಆಯ್ಕೆಯಾಗಿದ್ದಾರೆ.
ಬಹುದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ೨೨ ಮತಗಳನ್ನು ಪಡೆಯುವ ಮೂಲಕ ಬಹುಮತಗಳಿಂದ ಅಧ್ಯಕ್ಷರಾಗಿ ಪಿ.ಜೆ.ರಾಮಮೋಹನ್, ಉಪಾಧ್ಯಕ್ಷರಾಗಿ ಸೊಪ್ಪು ಗಣೇಶ್ ಆಯ್ಕೆಯಾಗಿದ್ದು, ಕಾಂಗ್ರೆ???ನಿಂದ ಅಧ್ಯಕ್ಷ ಸ್ಥಾನಕ್ಕೆ ಮಹೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೇಘಶ್ರೀ ಭೂಷಣ್ ಸ್ಪರ್ಧಿಸಿ ೧೦ ಮತಗಳನ್ನು ಪಡೆದುಕೊಂಡರು.
ನಗರಸಭೆ ಚುನಾವಣೆಯಲ್ಲಿ ಒಟ್ಟು ೩೧ ಸ್ಥಾನಗಳಲ್ಲಿ ಒಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಒಟ್ಟು ೩೦ ಸ್ಥಾನ ಜತೆಗೆ ಶಾಸಕರು ಮತ್ತು ಸಂಸದರ ಮತಗಳು ಸೇರಿ ಒಟ್ಟು ೩೨ ಮತಗಳಿದ್ದವು. ಶಾಸಕ ಬಿ.ಸಿ. ನಾಗೇಶ್ ಮತ್ತು ಲೋಕೇಶ್ವರ್ ನಡುವಿನ ಹೊಂದಾಣಿಕೆಯಿಂದಾಗಿ ಹೆಚ್ಚಿನ ಮತಗಳು ಬಿಜೆಪಿಗೆ ದೊರೆತು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಚುನಾವಣೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಭಾಗವಹಿಸಿ ಬಿಜೆಪಿ ಅಭ್ಯರ್ಥಿ ಪರ ಮತಚಲಾವಣೆ ಮಾಡಿದ್ದಾರೆ.
ತಿಪಟೂರಿನ ಅಭಿವೃದ್ಧಿ ಸಲುವಾಗಿ ನಗರಸಭೆಯಲ್ಲಿ ಒಂದಾಗಿ ಅಧಿಕಾರದ ಗದ್ದುಗೆ ಹಿಡಿದಿದ್ದೇವೆ. ಬಹುಳ ವರ್ಷಗಳ ನಂತರದಲ್ಲಿ ಬಿಜೆಪಿಗೆ ಬಹುಮತವನ್ನು ನೀಡಿದ್ದರೂ ಲೋಕೇಶ್ವರ್ ಹಾಗೂ ಪಕ್ಷೇತರರ ಸಹಕಾರದಿಂದಾಗಿ ಸುಲಭವಾಗಿ ಅಧಿಕಾರದ ಗದ್ದುಗೆ ಹಿಡಿದಿದ್ದೇವೆ. ಇನ್ನೂ ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿದ್ದು ೬ ತಿಂಗಳ ಒಳಗಾಗಿ ಸಂಪೂರ್ಣ ರಸ್ತೆಗಳ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಶಾಸಕ ಬಿ.ಸಿ. ನಾಗೇಶ್ ಹೇಳಿದರು.
ಬಿಜೆಪಿ ಮುಖಂಡರು
ಬಹಳ ವರ್ಷಗಳ ನಂತರದಲ್ಲಿ ನಗರಸಭೆಯಲ್ಲಿ ಬಹುಮತ ಪಡೆದುಕೊಂಡು ಅಧಿಕಾರದ ಗದ್ದುಗೆ ಹಿಡಿದಿದ್ದು, ಒಮ್ಮತದಿಂದ ನಗರದ ಅಭಿವೃದ್ಧಿಗೆ ಶ್ರಮಿಸುವ ಗುರಿಯನ್ನು ಹೊಂದಿದ್ದೇವೆ. ಆಯ್ಕೆಯಾಗಿರುವವರಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಲೋಕೇಶ್ವರ್ ಹೇಳಿದರು.
ಕೋಟ್-೩: ಪಿ.ಜೆ.ರಾಮಮೋಹನ್, ನಗರಸಭೆ ಅಧ್ಯಕ್ಷ
ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಕ್ಕೆ ಪಕ್ಷ ನಗರಸಭೆ ಅಧ್ಯಕ್ಷ ಸ್ಥಾನದ ಅಧಿಕಾರ ನೀಡಿದೆ. ಈ ಅಧಿಕಾರವನ್ನು ನಗರದ ಅಭಿವೃದ್ಧಿಗಾಗಿ ಬಳಸುವ ಮೂಲಕ ನಗರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ಅಧ್ಯಕ್ಷ ಪಿ.ಜೆ. ರಾಮಮೋಹನ್ ತಿಳಿಸಿದ್ದಾರೆ.
ಫಲಿತಾಂಶ ಹೊರ ಬಿದ್ದ ನಂತರ ಬಿಜೆಪಿಯ ನೂರಾರು ಕಾರ್ಯಕರ್ತರು ತೆರೆದ ವಾಹನದಲ್ಲಿ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗ್ರಾಮದೇವತೆ ಕೆಂಪಮ್ಮದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.