ನಗರಸಭೆ ಅಧ್ಯಕ್ಷ ಡಿ.ನಾಗರಾಜ ಅವರಿಂದ ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ

ಸಿರುಗುಪ್ಪ, ನ.15: ನಗರಸಭೆ ಕಾರ್ಯಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಗರಸಭೆ ಅಧ್ಯಕ್ಷ ಡಿ.ನಾಗರಾಜ ಅವರು ಪೌರ ಕಾರ್ಮಿಕರಿಗೆ ಬಟ್ಟೆ ಮತ್ತು ಸಹಿ ವಿತರಿಸಿದರು.
ನಂತರ ಮಾತನಾಡಿದ ಅವರು ನಗರದ ಎಲ್ಲಾ ವಾರ್ಡಗಳಲ್ಲಿ ಸ್ವಚ್ಚತೆಯನ್ನು ನಿತ್ಯ ಕೈಗೊಳ್ಳುವ ಪೌರಕಾರ್ಮಿಕರನ್ನು ನಾವು ಸ್ಮರಿಸಬೇಕು, ಅವರು ಸ್ವಚ್ಚಗೊಳಿಸದೆ ಇದ್ದರೆ ಅನೇಕ ರೋಗಗಳು ಬರುತ್ತಿದ್ದವು, ಪೌರಕಾರ್ಮಿಕರು ನಗರಪ್ರದೇಶವನ್ನು ಸ್ವಚ್ಚವಾಗಿ ಶುಚಿಯಾಗಿ ಕಾಪಡುವುದರಿಂದ ರೋಗಗಳು ಬರುವುದು ಕಡಿಮೆಯಾಗಿವೆ. ರಸ್ತೆಯ ಅಕ್ಕಪಕ್ಕದಲ್ಲಿ ದೂಳು ನಿಯಂತ್ರಣಕ್ಕಾಗಿ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿರುವ ಪೌರಕಾರ್ಮಿಕರು ನಿಜವಾದ ಶ್ರಮಿಕರು. ನಗರದ ಸಾರ್ವಜನಿಕರು ತಮ್ಮ ತ್ಯಾಜ್ಯವನ್ನು ನಿಗದಿತವಾಹನಕ್ಕೆ ನೀಡಬೇಕು, ಎಲ್ಲಂದರೆ ಅಲ್ಲಿ ಕಸವನ್ನು ಬಿಸಾಡುವುದನ್ನು ನಿಲ್ಲಿಸಬೇಕು, ಹೀಗೆ ಮಾಡಿದರೆ ನಗರವು ಸ್ವಚ್ಚ ಸುಂದರವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಸದಸ್ಯರಾದ ಕೆ.ನಾಗರಾಜ, ಮಲ್ಲಿಕಾರ್ಜುನ, ಮೀರಹುಸೇನ್, ಹನುಮಂತ, ಚಿದಾನಂದ ರಾಯುಡು, ಮುಖಂಡರಾದ ವೆಂಕಟರಾಮರೆಡ್ಡಿ, ಮೋದಿನ್, ಬಗ್ಗೂರು ವೆಂಕಟೇಶ, ಕಮಾಲ್, ಮುಲ್ಲಬಾಬು ಸೇರಿದಂತೆ ನಗರಸಭೆಯ ಸಿಬ್ಬಂದಿ ಪೌರಕಾರ್ಮಿಕರು ಇದ್ದರು.