ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ರಾಜೀನಾಮೆ: ಯಾರಿಗೆ ಸಿಗುತ್ತೇ ಖುರ್ಚಿ!


(ಸಂಜೆವಾಣಿ ಪ್ರತಿನಿಧಿಯಿಂದ)
ಹೊಸಪೇಟೆ ಜೂ7: ಹೊಸಪೇಟೆ ನಗರಸಭೆಯ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಎಲ್.ಎಸ್ ಆನಂದ ತಮ್ಮ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದು ಬಹುಮತ ಹೊಂದಿರುವ ಬಿಜೆಪಿ ಆಂತರಿಕವಾಗಿ ಯಾರನ್ನು ಕೂಡಿಸಲಿದೆ ಎಂಬ ಕುತುಹಲ ಸಾರ್ವಜನಿಕರಲ್ಲಿ ಮೂಡಲಾರಂಭಿಸಿದೆ. 
ಹೌದು!ಬದಲಾದ ರಾಜಕೀಯ ಸನ್ನಿವೇಶದಲ್ಲಿ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎಚ್.ಆರ್.ಗವಿಯಪ್ಪ ಶಾಸಕರಾಗುತ್ತಿಂದತೇ ಇತ್ತ ನಗರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಬದಲಾವಣೆಗೆ ಕೆಲ ಸದಸ್ಯರು, ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಸದಸ್ಯರು ಸಹ ಈ ವಿಷಯವನ್ನು ಮಾಜಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಚೆರ್ಚಿಸಿದ್ದರು. ಇದೀಗ ಈ ಚೆರ್ಚೆಗೆ ಜೀವ ಬಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಸುಂಕಮ್ಮ ಮತ್ತು ಉಪಾಧ್ಯಕ್ಷ ಆನಂದ ಅವರು, ವೈಯಕ್ತಿಯ ಕಾರಣ ಹಿನ್ನೆಲೆ ಮತ್ತು ಯಾರ ಒತ್ತಡ ಇಲ್ಲದೇ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವೆ ಎಂದು ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಧ್ಯಕ್ಷ ಗಾದಿ ಯಾರಿಗೆ?
ಎಸ್‍ಸಿ ಮಹಿಳೆಗೆ ಮೀಸಲಿರುವ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ 7 ವಾರ್ಡು ಸದಸ್ಯೆ (ಕಾಂಗ್ರೆಸ್) ಕನಕಮ್ಮ, 23 ನೇ ವಾರ್ಡು ಸದಸ್ಯೆ (ಬಿಜೆಪಿ) ಗಂಗಮ್ಮ ಹಾಗೂ 30 ನೇ ವಾರ್ಡ್ (ಪಕ್ಷತೇರ) ಸದಸ್ಯೆ ಕುಮಾರಿ ಎ.ಲತಾ ಅಧ್ಯಕ್ಷರ ಸ್ಥಾನದ ರೇಸಿನಲ್ಲಿದ್ದಾರೆ. ಈ ಮೂರು ಜನರಲ್ಲಿ ಬಿಜೆಪಿ ಸದಸ್ಯೆ ಗಂಗಮ್ಮ ಮತ್ತು ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಎ.ಲತಾ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ ಕನಕಮ್ಮ ಕಾಂಗ್ರೆಸ್ ಸದಸ್ಯರಾಗಿರುವುದರಿಂದ ಕಷ್ಟಸಾಧ್ಯವೂ ಸಹ.  
2 ವರ್ಷ 6 ತಿಂಗಳ ಅವಧಿಯಲ್ಲಿ ಹಾಲಿ ಅಧ್ಯಕ್ಷೆ ಸುಂಕಮ್ಮ ಅವರು ಈಗಾಗಲೇ 16 ತಿಂಗಳ ಅವಧಿಯನ್ನು ಪೂರೈಸಿದ್ದಾರೆ. ಉನ್ನುಳಿದ ತಿಂಗಳ ಅವಧಿಯಲ್ಲಿ ಇಬ್ಬರಿಗೆ ಆರು ತಿಂಗಳು ನೀಡಬೇಕು ಎಂಬ ಒಪ್ಪಂದ ನಡೆದಿದೆ ಹೇಳಲಾಗತ್ತಿದೆ. 29 ನೇ ವಾರ್ಡಿನ ರಮೇಶ್ ಗುಪ್ಪಾ, 5 ನೇ ವಾರ್ಡಿನ ಸದಸ್ಯ ರೂಪೇಶ್ ಕುಮಾರ್ ಹಾಗೂ 2 ನೇ ವಾರ್ಡಿನ ಸದಸ್ಯ ಜೀವರತ್ನಂ ಅವರ ಹೆಸರುಗಳು ಉಪಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದೆ. ಈ ಮೂವರಲ್ಲಿ ಯಾರಿಗೆ ಸಿಗಲಿದೆ ಎಂಬುದು ಕಾದು ನೋಡಬೇಕಿದೆ. ಮಾಜಿ ಸಚಿವ ಆನಂದಸಿಂಗ್ ಯಾರಿಗೆ ಹೇಳುತ್ತಾರೊ ಅವರು ಅಂತಿಮ ಎನ್ನಲಾಗುತ್ತಿದೆ.
ಶಾಸಕರನ್ನು ಭೇಟಿಮಾಡಲು ತೀರ್ಮಾನ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲಯಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿ ದೃಷ್ಠಿಯಿಂದ ಎಲ್ಲರೂ ಪಕ್ಷತೀತವಾಗಿ ಮಾಜಿ ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್ ಅವರ ನೇತೃತ್ವದಲ್ಲಿ ಸದಸ್ಯರೆಲ್ಲರೂ ಶಾಸಕ ಗವಿಯಪ್ಪ ಅವರನ್ನು ಭೇಟಿ ಮಾಡಿ ನಗರ ಅಭಿವೃದ್ಧಿಗೆ ಸಹಕಾರ ಕೋರಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್ ಅವರ ಮಾರ್ಗದರ್ಶನದಲ್ಲಿ ನಗರಸಭೆ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡೆ. ಬೇರೊಬ್ಬರಿಗೆ ಅವಕಾಶ ನೀಡಬೇಕು ಎಂದು ರಾಜೀನಾಮೆ ಸಲ್ಲಿಸುತ್ತಿರುವೆ. ಮುಂದೆ ಹೈಕಮಾಂಡ್ ತೀರ್ಮಾನದಂತೆ ಯಾರೇ ಅಧಿಕಾರ ವಹಿಸಿಕೊಂಡರು ಸಹಕಾರ ನೀಡುವೆ.
ಸುಂಕಮ್ಮ, ನಗರಸಭೆ, ಅಧ್ಯಕ್ಷೆ ಹೊಸಪೇಟೆ.

One attachment • Scanned by Gmail