ನಗರಸಭೆ ಅಧ್ಯಕ್ಷರಿಗೆ ಸನ್ಮಾನ

ಹಿರಿಯೂರು.ಜು.28-ಹಿರಿಯೂರಿನ ನಗರ ಸಭೆ ನೂತನ ಅಧ್ಯಕ್ಷರಾದ ಶ್ರೀಮತಿ ಶಿವರಂಜನಿ ಯಾದವ್ ರವರಿಗೆ ಇಲ್ಲಿನ ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ   ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು . ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷರಾದ ಬಿ ಲಕ್ಷ್ಮಿಕಾಂತ್ ರವರು ಮಾತನಾಡಿ ಹಿರಿಯೂರು ನಗರಸಭೆಯ ನೂತನ ಅಧ್ಯಕ್ಷರಾದ ಶ್ರೀಮತಿ ಶಿವರಂಜನಿ ಯಾದವ್ ಇವರು ತುಂಬಾ ಉತ್ಸಾಹ ಮತ್ತು ಸ್ಪೂರ್ತಿಯಿಂದ ನಗರದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ತುಂಬಾ ಸಂತೋಷದ ವಿಚಾರ ಎಂದು ಹೇಳಿದರು.  ನಗರದ ಅನೇಕ ಬಡಾವಣೆಗಳಲ್ಲಿ ಮುಖ್ಯ ರಸ್ತೆಯಲ್ಲಿ ರಸ್ತೆಗಳಿಗೆ ಮಣ್ಣು ಹಾಕಿಸಿ ರಿಪೇರಿ ಮಾಡಿಸಿದ್ದು ಅಲ್ಲದೆ ಕಸ ಹಾಕುವ ಸ್ಥಳಗಳಲ್ಲಿ  ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಇವರು ಮಾದರಿಯಾಗಿದ್ದಾರೆ ಇವರ ಅವಧಿಯಲ್ಲಿ ಹಿರಿಯೂರು ನಗರವು ಅಭಿವೃದ್ಧಿಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿದೆ. ಇವರು ಇನ್ನು ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಶುಭ ಹಾರೈಸಿದರು. ಶಿವರಂಜನಿ ಯಾದವ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.  ಸೇನೆಯ ತಾಲೂಕು ಅಧ್ಯಕ್ಷರಾದ ಬಿ ಲಕ್ಷ್ಮೀಕಾಂತ್ , ಉಪಾಧ್ಯಕ್ಷರಾದ ಶರೀಫ್ , ನಗರ ಉಪಾಧ್ಯಕ್ಷರಾದ ಮೋಹನ್ ಹಾಗೂ ಪವನ್ ಮತ್ತು ಮಹೇಶ್  ಮತ್ತಿತರರು ಉಪಸ್ಥಿತರಿದ್ದರು.

Attachments area