ಬೀದರ ಜೂ.20: ನಗರೋತ್ತಾನ, ಕುಡಿಯುವ ನೀರು, ಯುಜಿಡಿ, ಅಮೃತ, ವಸತಿ ಯೋಜನೆ ಸೇರಿದಂತೆ ನಗರಸಭೆಯಿಂದ ನಡೆಯುತ್ತಿರುವ ಎಲ್ಲಾ ಯೋಜನೆಗಳಿಗೆ ವೇಗ ನೀಡಬೇಕು ಈಗಾಗಲೇ ಟೆಂಡರ್ ಪಡೆದಿರುವ ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದಾರೇ ಎಂಬ ಮಾಹಿತಿಯನ್ನು ಪಡೆಯಬೇಕು ಎಂದು ಪೌರಾಡಳಿ ಹಾಗೂ ಹಜ್ ಸಚಿವ ರಹೀಮ ಖಾನ್ ಹೇಳಿದರು.
ಅವರು ಸೋಮವಾರ ಬೀದರ ನಗರಸಭೆ ಕಾರ್ಯಲಯ ಸಭಾಂಗಣದಲ್ಲಿ ಬೀದರ ಜಿಲ್ಲಾ ವ್ಯಾಪ್ತಿಯ ನಗರಸ್ಥಳಿಯ ಸಂಸ್ಥೆಗಳ ಅಧಿಕಾರಿ ಹಾಗೂ ನೌಕರರೊಂದಿಗೆ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪರವಾನಗಿ ನವೀಕರಣ ಮಾಡಿಕೊಳ್ಳದ ಅಂಗಡಿ ಮಾಲಿಕರಿಗೆ ನವೀಕರಣ ಮಾಡಿಕೊಳ್ಳುವಂತೆ ಸೂಚಿಸಬೇಕು ಯಾರು ಮಾಡಿಕೊಳ್ಳವುದಿಲ್ಲ, ಅವರಿಗೆ ಗಡುವು ನೀಡಿ ಕ್ರಮ ತೆಗೆದುಕೊಳ್ಳಬೇಕು ಹಾಗೂ ಯಾರು ಪರವಾನಗಿ ಹೊಂದದೆ ಮಳಿಗೆ ನಡೆಸುತ್ತಿದಾರೋ ಅವರಿಗೆ ಪರವಾನಗಿ ಪಡೆಯುವಂತೆ ಸೂಚಿಸಬೇಕು ಮತ್ತು ಅವರು ಪರವಾನಗಿ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೆಲವೆಡೆ ಅನದಿಕೃತವಾಗಿ ಬ್ಯಾನರ ಅಳವಡಿಸುತ್ತಿದ್ದಾರೆ ಅವರ ವೀರುದ್ದ ಕ್ರಮ ತೆಗೆದುಕೊಳ್ಳಬೇಕು. ನಗರಸಭೆಯ ಅಡಿಯಲ್ಲಿ ಕೊರೆಸಿದ ಬೋರವೆಲ್‍ಗಳಿಗೆ ಗುಣಮಟ್ಟದ ಮೋಟರ್ ಅಳವಡಿಸದೆ ಇದ್ದ ಕಾರಣ ದುರಸ್ತಿ ಕೆಲಸ ಜಾಸ್ತಿಯಾಗಿದೆ ಆದರಿಂದ ಟೇಂಡರ್ ಕರೇಯುವಾಗಿ ಅದರಲ್ಲಿ ನಿಯಮಗಳನ್ನು ಅಳವಡಿಸಬೇಕು ಎಂದರು.
ಬೀದರ ಜಿಲ್ಲೆಯ ನಗರಸಭೆಯು ಅಕ್ರಮದ ಜಾಲ ಎಂಬಂತಹ ಸುದ್ದಿಯು ಇತ್ತಿಚೇಗೆ ಇಡಿ ರಾಜ್ಯ ವ್ಯಾಪ್ತಿಯಲ್ಲಿ ಹರಿದಾಡಿದೆ. ಈ ಹಿಂದೆ ನಾನು ಕೂಡ ಬೀದರ ನಗರಸಭೆಯ ಅಕ್ರಮದ ವಿರುದ್ದ ಹೋರಾಟ ಮಾಡಿದ್ದೇನೆ ಆದರೆ ಪ್ರಸ್ತುತ ನಾನೆ ಇದರ ಮಂತ್ರಿಯಾಗಿದ್ದು ಈ ಇಲಾಖೆಯನ್ನು ಶುದ್ಧಿಕರಣ ಮಾಡುವ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿದ್ದಿದೆ ಆದರಿಂದ ಎಲ್ಲರೂ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಯಾರು ಸರಿಯಾದರ ರೀತಿಯಲ್ಲಿ ಕಾರ್ಯನಿರ್ವಹಿಸುದಿಲ್ಲವೋ ಅವರ ವಿರುದ್ದ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಹೇಳಿದರು
ಈ ಹಿಂದೆ ಅರ್ಹತೆಗು ಮೀರಿ ಯಾರು ಬೆರೆ ಹುದ್ದೆಗೆ ನಿಯೋಜನೆಗೊಂಡಿದ್ದಾರೋ ಅವರಿಗೆ ಮತ್ತೆ ಅದೆ ಸ್ಥಾನಕ್ಕೆ ನಿಯೋಜನೆ ಮಾಡಬೇಕು. ಮತ್ತು ಒಂದೆ ಸ್ಥಾನದಲ್ಲಿ ಯಾರು ಹೆಚ್ಚಿನ ವರ್ಷ ಕೆಲಸ ಮಾಡಿದ್ದಾರೆ ಅವರಿಗೆ ಬೆರೆ ಕಡೆ ವರ್ಗಾವಣೆ ಮಾಡಬೇಕು ಒಟ್ಟಾರೆಯಾ ಬೀದರ ನಗರಸಭೆ ಹೊಂದಿರುವ ಕಳಂಕವನ್ನು ಸರಿಪಡಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಬೀದರ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳಾದ ಮೋತಿಲಾಲ್ ಲಮಾಣಿ, ಬೀದರ ನಗರಸಭೆ ಆಯುಕ್ತ ಶಿವರಾಜ ರಾಠೋಡ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.