ನಗರಸಭೆಯ ಪೂರ್ವಭಾವಿ ಸಭೆ ಜ16 ಕ್ಕೆ ಮುಂದೂಡಿಕೆ

ಹರಿಹರ.ಜ.6;  ನಗರಸಭೆಯಿಂದ ನಗರದ ನಾಗರಿಕರಿಗೆ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ 2021–2022  ನೇ ಸಾಲಿನ ಆಯವ್ಯಯ ತಯಾರಿಸಲು ಪೂರ್ವಭಾವಿ ಸಭೆಯನ್ನು ಜ.8 ರಂದು ನಗರಸಭೆಯ ಸಭಾಂಗಣದಲ್ಲಿ ಕರೆಯಲಾಗಿದ್ದ ಕಾರಣಾಂತರಗಳಿಂದ ಪೂರ್ವಭಾವಿ ಸಭೆಯನ್ನು ಮುಂದೂಡಲಾಗಿದೆ. ಜ16ರಂದು ಬೆಳಿಗ್ಗೆ 11 ಕ್ಕೆ ನಗರಸಭಾ ಸಭಾಂಗಣದಲ್ಲಿ ಸಭೆಯನ್ನು ಕರೆಯಲಾಗಿದ್ದು ಸದರಿ ಸಭೆಗೆ ನಗರದ ನಾಗರೀಕರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಲು ನಗರಸಭೆ ಪೌರಾಯುಕ್ತರಾದ ಉದಯ ಕುಮಾರ್ ಬಿ ತಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.