ನಗರಸಭೆಯ ಟ್ವೆಂಟಿ-ಟ್ವೆಂಟಿ ಆಡಳಿತದಿಂದಅಭಿವೃದ್ಧಿ ಕುಂಠಿತ; ಆರೋಪ

ಹರಿಹರ.ನ.೭ : ನಗರಸಭೆಯಲ್ಲಿ ಅಧಿಕಾರಿ ಮತ್ತು ಸದಸ್ಯರುಗಳು ಟ್ವೆಂಟಿ-20 ಆಡಳಿತ ನಡೆಸುತ್ತಾ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದ್ದಾರೆ ಎಂದು ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಗೌರವ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಆರೋಪಿಸಿದರು.  ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರಸಭೆಯಲ್ಲಿ ಅಧಿಕಾರಿ ಗಳು ಮತ್ತು ಸದಸ್ಯರುಗಳು ಕ್ಷುಲ್ಲಕ ಸಬೂಬಗಳನ್ನು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.ಇದು ನಗರದ ಅಭಿವೃದ್ಧಿ ಕುಂಠಿತವಾಗಲು ಕಾಣವಾಗಿ ರಸ್ತೆಗಳು,ಚರಂಡಿಗಳು ಹಾಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.ಕಳೆದ ಒಂದುವರೆ ವರ್ಷದಿಂದ ಒಳಚರಂಡಿ ಮತ್ತು ಜಲಸಿರಿ ಯೋಜನೆಯ ಪರಿಣಾಮವಾಗಿ ನಗರದ ಎಲ್ಲಾ ರಸ್ತೆಗಳು ಗುಂಡಿ ಮತ್ತು ತಗ್ಗುಗಳಾಗಿ ಸಾರ್ವಜನಿಕರು,ರೈತರು,ಶಾಲಾ ಮಕ್ಕಳು ಮತ್ತು ವಯೋ ವೃದ್ಧರು ರಸ್ತೆಯಲ್ಲಿ ಓಡಾಡಲು ಸರ್ಕಸ್ ಮಾಡಬೇಕಾದ ಪರಿಸ್ಥಿತಿ ಇದೆ.ಇದನ್ನು ಶೀಘ್ರವಾಗಿ ಸರಿಪಡಿಸುವಲ್ಲಿ ನಗರಸಭೆಯ ಅಧಿಕಾರಿಗಳು ಕೇವಲ ಸಬೂಬು ಹೇಳುತ್ತಾ ಬಂದಿದ್ದಾರೆ ನಮ್ಮ ಸಂಘದ ವತಿಯಿಂದ ಮನವಿ ನೀಡಿ ಸರಿಪಡಿಸದಿದ್ದರೆ ಮುಂದಿನ ದಿನ ಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದೆವು.ಆದರೆ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ನಮ್ಮ ಮನವೊಲಿಸುವ ನಾಟಕ ಮಾಡಿ ನಮಗೆ ಸುಳ್ಳು ಭರವಸೆ ಹೇಳಿ 10- 15 ದಿನಗಳಲ್ಲಿ ಸರಿಪಡಿಸುತ್ತೇವೆ ಎಂದು ಹುಸಿ ಭರವಸೆ ನೀಡಿ ನಮ್ಮನ್ನು ಮೂರ್ಖರನ್ನಾಗಿಸಿದ್ದಾರೆ.ಕೂಡಲೇ ರಸ್ತೆಗಳಲ್ಲಿ ಬಿದ್ದಿರುವ ತಗ್ಗು, ಗುಂಡಿ ಗಳನ್ನು ಮುಚ್ಚದೆ ಇದ್ದ ಪಕ್ಷದಲ್ಲಿ ನಾವೆಲ್ಲರೂ ಕನ್ನಡ ಪರ ಸಂಘಟನೆಯ ಹೋರಾಟಗಾರರೊಂದಿಗೆ ಒಗ್ಗೂಡಿ ನ.10 ರಂದು ಬೆಳಗ್ಗೆ 10.00 ಗಂಟೆಗೆ ನೀರಾವರಿ ಇಲಾಖೆಯಿಂದ ಬೃಹತ್ ಮೆರವಣಿಗೆ ಯೊಂದಿಗೆ ಪ್ರಮುಖ ಬೀದಿಗಳ ಮೂಲಕ ಆಗಮಿಸಿ ನಗರಸಭೆ ಮುಂಭಾಗದಲ್ಲಿ ದೊಡ್ಡದಾದ ಬೃಹತ್ ಪ್ರತಿಭಟನೆಯನ್ನು ನಗರಸಭೆ ಸದಸ್ಯರ ವಿರುದ್ಧ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಸಂಘದ ಅಧ್ಯಕ್ಷ ಮೋಹನ್ ಗೌಡ ಗೋಷ್ಠಿಯಲ್ಲಿ ಮಾತನಾಡಿ ನಗರದಲ್ಲಿರುವ ರಸ್ತೆಗಳೆಲ್ಲ ಒಳಚರಂಡಿ ಮತ್ತು ಜಲಸಿರಿ ಯೋಜನೆಯ ಪರಿಣಾಮವಾಗಿ ಗುಂಡಿಗಳಾಗಿದ್ದು ಇದರಿಂದ ಸಾರ್ವಜನಿಕರಿಗೆ ವಯೋವೃದ್ಧರಿಗೆ ಶಾಲಾ ಮಕ್ಕಳಿಗೆ ಬಡವರಿಗೆ ಹಾಗೂ ಮುಖ್ಯವಾಗಿ ಆಟೋ ಚಾಲಕರುಗಳಿಗೆ ತುಂಬಾ ತೊಂದರೆಯಾಗುತ್ತಿದೆ  ಕೂಡಲೇ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿದರುಗೋಷ್ಠಿಯಲ್ಲಿ  ಎಸ್.ಗೋವಿಂದ,  ಪ್ರೀತಮ್ ಬಾಬು,  ಎಮ್. ಇಲಿಯಾಸ್ ಅಹಮದ್  ಎ.ಕೆ. ಹನುಮಂತಪ್ಪ ಆಟೋ, ನಾಗರಾಜ್, ಎಸ್.ಕೇಶವ, ಎಲ್.ತಿಪ್ಪೇಶ್, ಅಲ್ತಾಫ್, ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.