ನಗರಸಭೆಯ ಕಡತ ಕಳುವು ಪ್ರಕರಣ: ನಾಲ್ವರು ಸೇವೆಯಿಂದ ಅಮಾನತ್ತು

Bellary SanjevaniAttachments2:21 PM (35 minutes ago)
to me


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ2: ಹೊಸಪೇಟೆ ನಗರಸಭೆಯ 49 ಫೈಲುಗಳು ಕಾಣಿಯಾಗಿವೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಗರಸಭೆಯ ನಾಲ್ವರು ಸಿಬ್ಬಂದಿಗಳನ್ನು ಅಮಾನತ್ತು ಮಾಡಿ, ವ್ಯವಸ್ಥಾಪಕರ ಅಮಾನತಿಗೆ ಶಿಫಾರಸ್ತು ಮಾಡಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಆದೇಶ ನೀಡಿದ್ದಾರೆ.
ಈ ಕುರಿತು ಶುಕ್ರವಾರ ಸಂಜೆ ಆದೇಶ ಹೊರಡಿಸಿದ ಜಿಲ್ಲಾಧಿಕಾರಿಗಳು ಅಭಿಲೇಖಾಲಯದ ನಿರ್ವಾಹಕ ಸುರೇಶಬಾಬು ಡಿ.ಹೆಚ್, ದ್ವೀತಿಯ ದರ್ಚೆ ಸಹಾಯಕ ಸುರೇಶ್, ನೈರ್ಮಲ್ಯ ಮೇಲ್ವಿಚಾರಕ ಎನ್.ಯಲ್ಲಪ್ಪ, ಕರವಸೂಲಿಕಾರ ಹೆಚ್.ಶಂಕರ ಎಂಬುವವರನ್ನು ಸೇವೆಯಿಂದ ಅಮಾನತ್ತು ಮಾಡಿ ಆದೇಶಿಸಿದ್ದಾರೆ ಮತ್ತು ವ್ಯವಸ್ಥಾಪಕ ಬಿ.ಕೃಷ್ಣಮೂರ್ತಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1957 ರನ್ವಯ ಅಮಾನತ್ತು ಮಾಡುವ ಅಧಿಕಾರ ವ್ಯಾಪ್ತಿಗೆ ಒಳಪಡದ ಹಿನ್ನೆಲೆಯಲ್ಲಿ ಇವರನ್ನು ಅಮಾನತ್ತು ಮಾಡಿ ವಿಚಾರಣೆಗೆ ಒಳಪಡಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಶಿಫಾರಸ್ತು ಮಾಡಿ ಪತ್ರಬರೆದಿದ್ದಾರೆ.
ಹೊಸಪೇಟೆ ನಗರಸಭೆಯಲ್ಲಿ ಆ22 ರಂದು ಕೆ.ಎಂ.ಎಫ್‍ನ 14 ರಿಜೀಸ್ಟರ್‍ಗಳು, ಎಂ.ಆರ್‍ನ 19 ರಿಜೀಸ್ಟರ್‍ಗಳು ನಗರಸಭಯಲ್ಲಿ ಲಭ್ಯವಿಲ್ಲಾ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ 24 ಗಂಟೆಯೊಳಗಾಗಿ ವರದಿ ನೀಡಲು ತಿಳಿಸಿದಂತೆ ಸದ್ರಿ ಮೇಲಿನವರು ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ ಮತ್ತು ಸ್ಪಷ್ಟ ಮಾಹಿತಿ ನೀಡುತ್ತಿಲ್ಲಾ ಎಂಬ ಹಿನ್ನೆಲೆಯಲ್ಲಿ ಈ ಆದೇಶ ನೀಡಿದ್ದಾರೆ.
ಉಳಿದಂತೆ ಕಚೇರಿಯಲ್ಲಿ ಕಡತಗಳು ಇವೆಯೋ, ಇಲ್ಲವೂ ಎಂಬುದನ್ನು ಸಹ ಸ್ಪಷ್ಟಪಡಿಸಲು, ವಿಷಯ ಹೀಗೆಕೆ ಹರಡಿತು ಎಂಬ ಮಾಹಿತಿ ಸೇರಿದಂತೆ ಪತ್ರವ್ಯವಹಾರದ ಬಗ್ಗೆಯೂ ವರದಿಯನ್ನು ನೀಡಲು ತಿಳಿಸಿದ್ದು ಈ ಬಗ್ಗೆ ಬರುವ ಮಾಹಿತಿಯ ಹಿನ್ನೆಲೆಯಲ್ಲಿ ಮುಂದಿನ ಕ್ರಮಕ್ಕೆ ಮುಂದಾಗುವುದಾಗಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೌರಾಯುಕ್ತರು ಎರಡು ದಿನ ಮುಂಚೆ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಕಡತ ಕಾಣೆಯಾಗಿದೆಯೋ, ಇಲ್ಲವೂ, ಮಾಹಿತಿ ಸರಿಯೋ ತಪ್ಪೊ, ಎಂಬ ಸ್ಪಷ್ಟನೆಯನ್ನು ಪೌರಾಯುಕ್ತರು ನೀಡುವಂತೆಯೊ ಸೂಚಿಸಲಾಗಿದೆ ಅವರ ಪ್ರತಿಕ್ರೀಯೆ ನಂತರ ಮುಂದಿನ ಕ್ರಮಕ್ಕೆ ಮುಂದಾಗುವುದಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸಂಜೆವಾಣಿಗೆ ಮಾಹಿತಿ ನೀಡಿದರು.