ನಗರಸಭೆಯ ಆಸ್ತಿ ಕಬಳಿಕೆ – ಆರೋಪಿಗಳ ಬಂಧನಕ್ಕೆ ಒತ್ತಾಯ

ಕೋಲಾರ ನ,೨೩- ಮಹಿಳಾ ಸಮಾಜ ಶಾಲೆಯ ಸಿ.ಎ.ಒ. ನವೀನ, ನಂದನ ಮತ್ತು ಆರೋಪಿತ ಅಧಿಕಾರಿಗಳನ್ನು ಕೂಡಲೇ ಬಂಧಿಸಲು ನಗರಸಭಾ ಮಾಜಿ ಅಧ್ಯಕ್ಷ ವಿ.ಪ್ರಕಾಶ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ನವೆಂಬರ್ ೧೮ರಂದು ನಗರಸಭಾ ಸದಸ್ಯರಾದ ಮುರಳಿಗೌಡ ಮತ್ತು ಪ್ರವೀಣ್‌ಗೌಡರವರ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಮಾಜ ಶಾಲೆಯ ಸಿ.ಎ.ಒ. ನವೀನ, ಕಾರ್ಯದರ್ಶಿ ನಂದನ ಮತ್ತು ಉಪ ನೋಂದಣಾಧಿಕಾರಿಗಳ ಕಛೇರಿಯ ಅಧಿಕಾರಿಗಳ ಮೇಲೆ ಎಫ್.ಐ.ಆರ್. ದಾಖಲಾಗಿದ್ದು, ದೂರಿನನ್ವಯ ಆರೋಪಿಗಳ ವಿರುದ್ಧ ಗಂಭೀರವಾದ ಐ.ಪಿ.ಸಿ. ಸೆಕ್ಷನ್ ೧೦೯, ೩೪, ೧೨೦ಬಿ, ೪೦೭, ೪೦೮, ೪೧೯, ೪೨೦, ೪೬೫, ೪೬೭, ೪೬೮, ೪೭೦, ೪೭೧, ೪೭೨, ೪೭೩, ೪೭೪, ೪೭೭, ೪೬೩, ೪೬೪ ಅಡಿಯಲ್ಲಿ ೦೧೮೦/೨೦೨೨ರಂತೆ ಎಫ್.ಐ.ಆರ್. ದಾಖಲಾಗಿದೆ, ಈ ಆರೋಪಿಗಳು ೧೭,೫೦೦ ಚದರ ಅಡಿ ಸರ್ಕಾರಿ ಸ್ವತ್ತನ್ನು (ನಗರಸಭೆ ಸ್ವತ್ತು) ಅಕ್ರಮ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಸುಮಾರು ೨೦ ಕೋಟಿ ಬೆಲೆಬಾಳುವ ಸರ್ಕಾರದ ಆಸ್ತಿಯನ್ನು ಕಬಳಿಸಲು ಪ್ರಯತ್ನಿಸಿರುತ್ತಾರೆ.
ಎಫ್.ಐ.ಆರ್. ದಾಖಲಾಗಿ ಮೂರು ದಿನಗಳಾದರೂ ಈವರೆಗೆ ಆರೋಪಿಗಳನ್ನು ಬಂಧಿಸಿರುವುದಿಲ್ಲ. ಆದ್ದರಿಂದ ತಕ್ಷಣ ಇವರನ್ನು ಬಂಧಿಸಿ, ಮುಂದೆ ಇಂತಹ ನಗರಸಭೆಯ ಆಸ್ತಿಯನ್ನು ಕಬಳಿಸದಂತೆ ತಡೆಯುವಂತಹ ಕ್ರಮಕ್ಕೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿರುತ್ತಾರೆ. ೨೪ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಉಘ್ರವಾದ ಹೋರಾಟಕ್ಕೆ ಮುಂದಾಗವುದು ಅನಿವಾರ್ಯವೆಂದು ಎಚ್ಚರಿಕೆಯನ್ನು ನೀಡಿರುತ್ತಾರೆ.