ಚಿಂತಾಮಣಿ,ಜೂ.೭-ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಮಾಡದಿದ್ದಲ್ಲಿ ಪ್ರಪಂಚವೇ ಬರಡಾಗಲಿದೆ, ಕಾಲಕಾಲಕ್ಕೆ ತಕ್ಕಂತೆ ಬೆಳೆಗಳು ಅಗಬೇಕಾಗಿದ್ದಲ್ಲಿ, ಪರಿಸರ, ನೀರು, ಅಂತರ್ಜಲವನ್ನು ಕಾಪಾಡಬೇಕಾಗಿರುವುದು ನಮ್ಮೆಲ್ಲರ ಅದ್ಯ ಕರ್ತವ್ಯವೆಂದು ನಗರಸಭೆ ಪೌರಾಯುಕ್ತ ರಾಘವೇಂದ್ರಗುರು ಅಭಿಪ್ರಾಯಪಟ್ಟರು.
ಅವರು ಇಂದು ಪರಿಸರ ದಿನಾಚರಣೆ ಪ್ರಯುಕ್ತ ನಗರದ ಮಾಳಪಲ್ಲಿ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಕಛೇರಿ ಹತ್ತಿರ ರಸ್ತೆಬದಿ ಗಿಡಗಳನ್ನು ನೆಟ್ಟು ಮಾತನಾಡಿದರು.
ಆಧುನೀಕರಣ ಮತ್ತು ನಗರೀಕರಣದ ಭರಾಟೆಗೆ ಸಿಲುಕಿ ಹಳ್ಳಿಗಳು ನಾಶವಾಗುತ್ತಿವೆ, ಹಾಗೂ ಪರಿಸರಕೂಡ ನಾಶವಾಗುತ್ತಿದೆ. ಅಲ್ಲಿ ಇರುವ ಬೆಟ್ಟ-ಗುಡ್ಡ ಕೆರೆ,ಕುಂಟೆಗಳು, ಕಾಡುಏಲ್ಲಾ ನಾಶವಾಗುತ್ತಿವೆ. ಬದುಕು ಬರಿದಾಗುತ್ತಿದೆ, ಇದರಿಂದ ಮರ-ಗಿಡಗಳನ್ನು ನಾಟಿಮಾಡಿ ನಮ್ಮ ಪರಂಪರಿಕ ಕೃಷಿ ಪರಿಸರವನ್ನು ನಿರ್ಮಾಣ ಮಾಡಬೇಕು. ಪರಿಸರ ನಾಶದಿಂದಾಗಿ ಹವಾಮಾನ ವೈಪರಿತ್ಯ ಪ್ರವಾಹಗಳಂತಹ ಅನೇಕ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ ಹಸಿರು ಉಳಿದರೆ ಮಾತ್ರ ನಮ್ಮೆಲ್ಲರ ಉಸಿರು ಉಳಿದೀತು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಸುಭಾಷಿಣಿ, ಲೋಕೋಪಯೋಗಿ ಇಂಜಿನಿಯರ್ ಸುಬ್ಬಾರೆಡ್ಡಿ, ನಗರಸಭೆ ಹಿರಿಯ ನಿರೀಕ್ಷಕಿ ಆರತಿ, ಕಿರಿಯ ನಿರೀಕ್ಷಕ ವಿಜಯ್ ಮತ್ತು ಪೌರಕಾರ್ಮಿಕರು ಹಾಜರಿದ್ದರು.