ನಗರಸಭೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳ ಕಪಿಮುಷ್ಟಿಗೆ ಸಿಲುಕಿ ನಲುಗಿರುವ ಖಾಯಂ ನೌಕರರು..!

ಸಂಜೆವಾಣಿ ವಾರ್ತೆ
ಹನೂರು ಫೆ 22 :- ಚಾಮರಾಜನಗರ ಜಿಲ್ಲೆಯ ನಗರ ಸಭೆಯ ಆಡಳಿತ ಕಾರ್ಯವೈಖರಿಯಲ್ಲಿ ಖಾಯಂ ನೌಕರ/ಸಿಬ್ಬಂದಿಗಳಿಗೆ ಬೆಲೆ ಇಲ್ಲದೆ ಹೊರಗುತ್ತಿಗೆ ಸಿಬ್ಬಂದಿಗಳ ಕಪಿಮುಷ್ಟಿಗೆ ಸಿಲುಕಿ ಬರಳುವಂತಾಗಿದೆ.
ಸರ್ಕಾರದಿಂದ ಮಂಜೂರಾಗಿರುವ ಸಿಬ್ಬಂದಿಗಳು ಇಲ್ಲದೆ ಬಹುಪಾಲು ಖಾಲಿ ಹುದ್ದೆಗಳಿವೆ. 31 ವಾಡ್9ಗಳಲ್ಲಿ ಕೆಲಸ ಮಾಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳಿಂದ ಕೆಲಸ ಮಾಡಲಾಗುತ್ತಿದೆ.ಈ ಸಿಬ್ಬಂದಿಗಳು ಎಷ್ಟರ ಮಟ್ಟಿಗೆ ಬಲಷ್ಟರಾಗಿದ್ದಾರೆ ಎಂದರೆ ನಗರಸಭೆಯ ಎಲ್ಲಾ ಶಾಖೆಯ ಖಾಯಂ ನೌಕರ ಮತ್ತು ಸಿಬ್ಬಂದಿಗಳು ಇವರುಗಳಿಗೆ ಸಲಾಂ ಹೊಡೆಯುವ ದುಸ್ಥಿತಿ ಬಂದಿದೆ.
ಹತ್ತು ವರ್ಷಗಳ ಹಿಂದೆ ಕೆ.ಎಸ್.ಆರ್. ಟಿ. ಸಿ ಬಸ್ ನಿಲ್ದಾಣದಲ್ಲಿ ಬಸ್ ಟಿಕೇಟ್ ಬುಕ್ ಮಾಡುತ್ತಿದ್ದ ಸಿದ್ದಪ್ಪಾಜಿ ಅಂದಿನ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳ ಕೃಪಾಕಟಾಕ್ಷದಿಂದ ಡಿಗ್ರಿ ಮಾಡಿದ್ದರಿಂದ ಹೊರಗುತ್ತಿಗೆ ನೌಕರರಾಗಿ ಬಂದು ಇಡೀ ನಗರಸಭೆಯ ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಪೆÇ್ರೀಗ್ರಾಂ ಆಫಿಸರ್ ಹುದ್ದೆಯಲ್ಲಿದ್ದಾರೆ.
ಗಣಕ ವಿಜ್ಞಾನದ ಪದವಿಯೇ ಇಲ್ಲದ ಈತ ನಗರ ಸಭೆಯ ಸುಪ್ರೀಂ ಹೊರಗುತ್ತಿಗೆ ಆಧಾರದ ನೌಕರ.ಕಾಟಾಚಾರಕ್ಕೆ ನಗರಸಭೆಯಲ್ಲಿ ಕುಳಿತುಕೊಂಡು ಕಛೇರಿಯಲ್ಲಿನ ಎಲ್ಲಾ ಕಡತಗಳನ್ನು ನೋಡುವುದು, ಪರಾಮರ್ಶೆ ಮಾಡುವುದು ತನಗೆ ಬೇಕಾದವರ ಕಂದಾಯ ಖಾತೆ. ಈ ಸ್ವತ್ತು ಇನ್ನಿತರ ಕೆಲಸ ಕಾರ್ಯ ಮಾಡುವರಿಂದ ಕಮಿಷನ್ ಪಡೆದುಕೊಂಡು ಕೆಲಸ ಮಾಡಿಸಲು ಎತ್ತಿದ ಕೈ ಈತ.
ಸಾರ್ವಜನಿಕರನ್ನು ನೈಸ್ ಮಾಡಿ ಎಷ್ಟು ಕೀಳಬೇಕೋ ಅಷ್ಟು ಕೀಳುವುದು ಈತನ ಖಯಾಲಿ. ಅಕೌಂಟ್ ಸೆಕ್ಷನ್‍ನಲ್ಲಿನ ರಘು ಈತನಿಗೆ ಸಾಥ್.
ಕೆಲ ತಿಂಗಳ ಹಿಂದೆ ಲೋಕಾಯುಕ್ತರ ದಾಳಿಗೆ ಸಿಲುಕಿದ್ದ ಹಿಂದಿನ ಇಂಜನಿಯರ್ ಸತ್ಯಮೂರ್ತಿ ಜೊತೆ ಹೊರಗುತ್ತಿಗೆ ನೌಕರರ ನಾಗರಾಜು ಕೂಡ ಸಿಲುಕಿಕೊಂಡು ಹೊರಗುತ್ತಿಗೆ ಕೆಲಸದಿಂದ ವಜಾಗೊಂಡಿದ್ದರು. ಆದರೆ ಈ ನಾಗರಾಜ ಎಂತ ಪ್ರಭಾವಿ ಎಂದರೆ ಹೊರಗುತ್ತಿಗೆ ನೀಡುವ ಏಜೆನ್ಸಿಯವರನ್ನು ಡೀಲ್ ಮಾಡಿಕೊಂಡು ತನ್ನ ಪತ್ನಿಗೆ ಹೊರ ಗುತ್ತಿಗೆ ಕೆಲಸ ಕೊಡಿಸಿ ಆ ಕೆಲಸವನ್ನು ತಾನು ಮಾಡುತ್ತಿರುವುದು ಗೌಪ್ಯವಾಗಿ ಉಳಿದಿಲ್ಲ. ಇದಕ್ಕೆ ಇಲ್ಲಿನ ಪೌರಾಯುಕ್ತ ರಾಮದಾಸ್ ಮೂಲ ಕಾರಣ.
ನಾಗರಾಜು ಹಲವಾರು ವರ್ಷಗಳಿಂದ ನಗರಸಭೆಯಲ್ಲಿ ಇಂಜನಿಯರ್ ವಿಭಾಗದಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡಿದ ವೇಳೆ ಗುತ್ತಿಗೆದಾರರಿಂದ ಕಮಿಷನ್ ಪಡೆದುಕೊಂಡು ಪೌರಾಯುಕ್ತರಿಗೆ ಪಾಲು ನೀಡುವುದು ಸಹಜವಾಗಿತ್ತು. ಇದನ್ನು ಅರಿತ ಈಗಿನ ಪೌರಾಯುಕ್ತ ರಾಮದಾಸ್ ನಾಗುವಿನ ನೆರವಿಗೆ ನಿಂತು ನಗರಸಭೆಯಲ್ಲೇ ಠಿಕಾಣಿ ಹೂಡುವಂತೆ ಮಾಡಿದ್ದಾರೆ.
ಕೆಲವು ನಗರಸಭೆ ಸದಸ್ಯರು ಇದನ್ನು ಪ್ರಶ್ನೆ ಮಾಡಿದ್ದಕ್ಕೆ, ಪೌರಾಯುಕ್ತರು ಜರೂರು ಕೆಲಸವಾಗಬೇಕಾದರೆ ನಾಗುವಿನ ಸೇವೆ ಬೇಕು ಎಂದು ಹೇಳಿ ಬಾಯಿ ಮುಚ್ಚಿಸಿದ್ದಾರೆ.
ಇನ್ನೂ ನಗರಸಭೆಯಲ್ಲಿ ಚೇತನ್ ಸಹ ಹೊರಗುತ್ತಿಗೆ ಆದಾರ ಮೇಲೆ ಆರೋಗ್ಯ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ.
ಆದರೆ ಖಾಯಂ ನೌಕರರು ಮತ್ತು ಸಿಬ್ಬಂದಿಗಳನ್ನು ಕ್ಯಾರೆ ಎನ್ನಲ್ಲ. ಎಲ್ಲಾ ವಿಷಯಕ್ಕೂ ತಲೆ ಹಾಕುವ ಚೇತನ್ ತನಗೆ ವಹಿಸಿರುವ ಶಾಖೆಯಲ್ಲಿ ಕುಳಿತುಕೊಳ್ಳದೇ ಎಲ್ಲಿ ವೈಯುಕ್ತಿಕ ಆದಾಯ ಬರಲಿದೆಯೋ ಆ ಶಾಖೆಯಲ್ಲಿ ತೂರಿಕೊಂಡು ಕೆಲಸ ಮಾಡುವುದರಲ್ಲಿ ನಿಸ್ಸೀಮಾ.
ಹೆಚ್ಚಾಗಿ ಆರೋಗ್ಯ ಶಾಖೆಯಲ್ಲಿನ ನಿರೀಕ್ಷಕ ಮಂಜು, ಪರಿಸರ ಅಭಿಯಂತರ ಗಿರಿಜಾರವರ ಕೊಠಡಿಯಲ್ಲಿ ಕುಳಿತು ಕೊಂಡು ಫೈಲ್‍ಗಳನ್ನು ನೋಡಿ ಕೆಲಸ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದವರ ಮೊಬೈಲ್‍ಗೆ ಪೆÇೀನ್ ಮಾಡಿ ಡೀಲ್‍ಗೆ ಇಳಿಯುವುದು ಮಾಮೂಲಾಗಿದೆ. ಇದಲ್ಲದೆ ತನ್ನ ಪತ್ನಿ ಹೆಸರಿಲ್ಲಿ ಮತ್ತೊಂದು ಹೊರಗುತ್ತಿಗೆ ಕೆಲಸ ಕೊಡಿಸಿದ್ದು, ಆದರೆ ಚೇತನ್ ನ ಪತ್ನಿ ಕಛೇರಿಯಲ್ಲಿ ಕೆಲಸ ಮಾಡದೇ ಇದ್ದರೂ ಪ್ರತಿ ತಿಂಗಳು ಅಡಿಬಿಟ್ಟಿಯಾಗಿ ವೇತನ ಪಡೆದುಕೊಳ್ಳುತ್ತಿದ್ದಾರೆ. ಹೊರ ಗುತ್ತಿಗೆ ನೌಕರ ಸಿಬ್ಬಂದಿಗಳು ಕನಿಷ್ಟ ಎಂದರೂ ದಿನವೊಂದಕ್ಕೆ ಸೆಲೆಕ್ಷನ್ ಪೈಲ್‍ಗಳ ಮೂಲಕ 2 ರಿಂದ 3 ಸಾವಿರ ಕಲೆಕ್ಷನ್ ಮಾಡಿಕೊಂಡು ಹೋಗುವರೆಂಬುದು ನೈಜಸಂಗತಿ.
ನಗರಸಭೆಯಲ್ಲಿ ಮಿತಿ ಮೀರಿದ ಭ್ರಷ್ಠಾಚಾರ ಲಂಚಗುಳಿತನಕ್ಕೆ ಈಗಿನ ಪೌರಾಯುಕ್ತ ರಾಮದಾಸ್ ನೇರವಾಗಿ ಪ್ರತಿ ಶಾಖೆಯಲ್ಲಿ ತಮ್ಮ ಪರವಾಗಿರುವ ನಂಬಿಕಸ್ಥ ಹೊರಗುತ್ತಿಗೆ ಭಂಟನೊಬ್ಬನನ್ನು ನೇಮಿಸಿಕೊಂಡು ವಸೂಲಿ ದಂಧೆಗಿಳಿದಿರುವುದಾಗಿ ವ್ಯಾಪಕ ಆರೋಪಗಳು ಕೇಳಿಬಂದಿವೆ.
ಆಡಳಿತಾಧಿಕಾರಿಯೂ ಆಗಿರುವ ಡಿಸಿ ಶಿಲ್ಪಾ ನಾಗ್ ರವರ ಪರೋಕ್ಷ ಕೃಪಕಟಾಕ್ಷ ಈ ಭ್ರಷ್ಟಕೂಟಕ್ಕಿರುವುದೇ ಅಕ್ರಮ ಅವ್ಯವಹಾರಗಳಿಗೆ ಮೂಲ ಕಾರಣ ಈಗಾಗಲೇ ಅತಿರೇಕಕ್ಕೆ ಹೋಗಿರುವ ನಗರಸಭೆ ದುರಾಳಿತ ಮುಂದೊಂದು ದಿನ ಸ್ಪೋಟಗೊಂಡು ಪಜ್ಞಾವಂತ ಜನತೆ ರೊಚ್ಚಿಗೆದ್ದು ಬೀದಿಗಳಿಯುವ ಮುನ್ನ ಪ್ರಸ್ತುತ ಮೌನಿಯಾಗಿರುವ ಆಡಳಿತಾಧಿಕಾರಿ/ಜಿಲ್ಲಾಧಿಕಾರಿ ಶಿಲ್ಪಾನಾಗ್ ಮೌನ ಮುರಿದು ನಗರಸಭೆಯತ್ತ ಜರೂರು ಗಮನಹರಿಸಿ ಅಕ್ರಮಕ್ಕೆ ಕಡಿವಾಣ ಹಾಕುವರೆ..? ಆಡಳಿತವನ್ನು ಸುಸ್ಥಿತಿಗೆ ತರುವರೆ..? ಕಾದು ನೋಡಬೇಕಾಗಿದೆ.