ನಗರಸಭೆಯಲ್ಲಿ ಮುಸ್ಲಿಂರಿಗೆ ಅನ್ಯಾಯವಾಗಿದೆ

 • ದೇವರ ಕೃಪೆಗೆ ನೈವೇಧ್ಯದಂತೆ ಹೇಳಿಕೆ – ಬಷೀರುದ್ದೀನ್ ವ್ಯಂಗ್ಯ
  ರಾಯಚೂರು.ನ.12- ನಗರಸಭೆಯಲ್ಲಿ ಮುಸ್ಲೀಂರಿಗೆ ಅನ್ಯಾಯವಾಗಿದೆಂದು ನಾನು ಕೇವಲ ನಗರಸಭೆ ಸಂಬಂಧಿಸಿ ಮಾತ್ರ ಹೇಳಿಕೆ ನೀಡಿದ್ದೇನೆ.
  ಇದನ್ನು ಅರ್ಥಮಾಡಿಕೊಂಡು ಪ್ರತಿಕ್ರಿಯೆ ನೀಡುವವರು ಹೇಳಿಕೆ ನೀಡಬೇಕೆಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಬಷೀರುದ್ದೀನ್ ಅವರು ಹೇಳಿದ್ದಾರೆ.
  ಹೇಳಿಕೆ ನೀಡುವವರು ತಮ್ಮ ದೇವರುಗಳಿಗೆ ಹೇಳಿಕೆಯ ನೈವೇಧ್ಯ ಕೊಟ್ಟು, ದೇವರ ವರ ಮತ್ತು ಕೃಪೆಗೆ ಪಾತ್ರರಾಗುವ ರೀತಿಯಲ್ಲಿ ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆ. ಇಲ್ಲವಾದರೇ, ದೇವರ ಕೃಪೆ ನಿಂತು ಉಪ ಜೀವನ ಸಾಗಿಸಲು ಕಷ್ಟವಾಗುತ್ತದೆ ಎನ್ನುವ ಆತಂಕ ಅವರದ್ದು. ಹೇಳಿಕೆ ನೀಡುವಾಗ ವಾಸ್ತವಾಂಶ ಅರ್ಥ ಮಾಡಿಕೊಂಡು ತಮ್ಮ ಹೇಳಿಕೆ ನೀಡಬೇಕು. ನಾನು ಕೇವಲ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಮಾತ್ರಕ್ಕೆ ಅಲ್ಪಸಂಖ್ಯಾತರಿಗೆ ಅವಕಾಶ ಕೇಳುವುದರ ಬಗ್ಗೆ ಹೇಳಿದ್ದೇನೆ.
  ಕೆಲ ವ್ಯಕ್ತಿಗಳು ತಮ್ಮ ಹೇಳಿಕೆಯಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಧ್ವನಿಯೆತ್ತಬೇಕೆಂದು ಹೇಳಿಕೆ ನೀಡಿದ್ದಾರೆ. ಖಂಡಿತ, ಯಾರಿಗೆ ಅನ್ಯಾಯವಾಗಲಿ ಎಲ್ಲರ ಪರವಾಗಿ ಧ್ವನಿಯೆತ್ತಬೇಕು. ಅದನ್ನೇ ಮುಂದುವರೆಸುತ್ತೇನೆ. ನಾನು ಕೇವಲ ನಮ್ಮ ಪಕ್ಷದ ಮುಖಂಡರಿಗೆ ಮಾತ್ರ ಟೀಕೆ ಮಾ‌ಡಿದ್ದು, ಇತರೆ ಪಕ್ಷದವರು ಇದರಲ್ಲಿ ಮೂಗು ತೂರಿಸುವುದು ಸರಿಯಲ್ಲ. ಇನ್ನೂ ಮುಂದೆ ಹೇಳಿಕೆ ನೀಡುವಾಗ ಜಾಗೃತರಾಗಿರಬೇಕು. ವಾಸ್ತವಾಂಶ ತಿಳಿಯದೇ, ಶಬ್ಬಾಷ್‌ಗಿರಿ ಪಡೆದುಕೊಳ್ಳುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ.
  ಕೇವಲ ನಗರಸಭೆಗೆ ಸೀಮಿತವಾದ ವಿಷಯವಾಗಿದೆ. ಕೆಲವೊಬ್ಬರು ಹೇಳಿಕೆಕೊಟ್ಟು ಅಲ್ಪಸಂಖ್ಯಾತರ ಜನಾಂಗ ಕಾಂಗ್ರೆಸ್ಸಿನಿಂದ ಸಾಕಷ್ಟು ಲಾಭ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದೇಶ, ರಾಜ್ಯ, ಜಿಲ್ಲೆಯಲ್ಲಿ ಲಾಭ ಪಡೆದಿರುವ ಬಗ್ಗೆ ಎಲ್ಲಾರಿಗೂ ಗೊತ್ತಿರುವ ಸಂಗತಿ. ಸಾಜೀದ್ ಸಮೀರ್, ಅಸ್ಲಾಂ ಪಾಷಾ ಮತ್ತು ಇನ್ನಿತರರು ಹೇಳಿಕೆ ಕೊಟ್ಟಿದ್ದು, ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ. ಕೆಲ ತಾಂತ್ರಿಕ ದೋಷದಿಂದ ಮತ್ತು ಎರಡು ಸ್ಥಾನ ಪಡೆದುಕೊಳ್ಳುವ ಉದ್ದೇಶದಿಂದ ನಾವು ನಮ್ಮ ಸ್ಥಾನ ತ್ಯಾಗ ಮಾಡಲಾಗಿದೆಂದಿದ್ದಾರೆ.
  ಯಾವ ರೀತಿಯಲ್ಲಿ ತ್ಯಾಗ, ಬಲಿದಾನ ಬಗ್ಗೆ ಸ್ವವಿಸ್ತಾರವಾಗಿ ಯಾವೊಬ್ಬರು ಹೇಳಿಕೆ ನೀಡಿಲ್ಲ. ಯಾವ ಸದಸ್ಯರು ಮತ ಚಲಾವಣೆ ನಿರಾಕರಿಸಿದರು. ಮತ ಚಲಾವಣೆ ಸಂದರ್ಭದಲ್ಲಿ ಯಾರು ಮೋಸ ಸಂಚು ರೂಪಿಸುರುವ ಬಗ್ಗೆ ಬಹಿರಂಗವಾಗಿ ಧೈರ್ಯವಿದ್ದರೇ, ಹೇಳಲಿ. ತಮ್ಮ ದೇವರು ಹೇಳಿದಂತೆ ಹೇಳಿಕೆ ನೀಡುವುದು ಸರಿಯಲ್ಲ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಯಾವವ ಸದಸ್ಯರ ಪಾತ್ರ ಏನು ಎನ್ನುವುದರ ಬಗ್ಗೆ ಪತ್ರಿಕಾ ಹೇಳಿಕೆ ನೀಡಲಿ. ಏನು ಗೊತ್ತಿಲ್ಲದ ವ್ಯಕ್ತಿಗಳು ತಮ್ಮ ದೇವರುಗಳಿಗೆ ನೈವೇಧ್ಯ ಕೊಟ್ಟು ಕೃಪೆಗೆ ಪಾತ್ರರಾಗುವ ಉದ್ದೇಶದಿಂದ ಹೇಳಿಕೆ ಕೊಡುವುದು ಸರಿಯಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.