ನಗರಸಭೆಯನ್ನು ಸೂಪರ್ ಸೀಡ್ ಮಾಡಲು ಆಗ್ರಹ


ರಾಯಚೂರು, ಮೇ.೨೯- ನಗರಸಭೆಯನ್ನು ಸೂಪರ್ ಸೀಡ್ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ತಾಲ್ಲೂಕು ಸಮಿತಿಯ
ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈಚೆಗೆ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ನಗರಸಭೆ ಸದಸ್ಯರು ಪರಸ್ಪರ ತೆಲುಗು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಅನೇಕ ವಾರ್ಡುಗಳನ್ನು ಪ್ರತಿನಿಧಿಸುವ ಮಹಿಳಾ ಸದಸ್ಯೆಯರು ಸಭೆಗೆ ಬಾರದೇ ಅವರ ಪತಿಯಂದಿರು ಆಗಮಿಸುದ್ದಾರೆ, ಇದರಿಂದ ನಿಯಮಾವಳಿಗಳನ್ನು ಉಲ್ಲಂಘನೆಯಾಗಿದೆ.
ನಗರದ ಸರ್ವಾಂಗೀಣ ಅಭಿವೃದ್ಧಿ ಯ ನಿಟ್ಟಿನಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ಪರಸ್ಪರ ಬೈದಾಡಿಕೊಂಡಿರುವುದು ಸಮಂಜಸವಲ್ಲ. ಕೋವಿಡ್ ಮಹಾಮಾರಿಯನ್ನು ಮಟ್ಟಹಾಕಬೇಕಾದ ಸಂದರ್ಭದಲ್ಲಿ ಹೊಂದಾಣಿಕೆಯಿಂದಕೆಲಸ ಮಾಡದೇ ಒಬ್ಬರಿಗೊಬ್ಬರು ಕಚ್ಚಾಡಿಕೊಂಡಿರುವುದು ಶೋಚನೀಯ.
ನಗರಸಭೆಯ ಸದಸ್ಯರನ್ನು ಆಯ್ಕೆ ಕಾಂಗ್ರೆಸ್,ಬಿಜೆಒಇ ಜೆಡಿಎಸ್‌ಮೂರು ಪಕ್ಷಗಳು ಕುದುರೆ ವ್ಯಾಪಾರ ಮಾಡಿರುವುದು ಗೊತ್ತಿರುವ ವಿಷಯ. ಈಗ ಅದ್ಯಕ್ಷ ಹಾಗೂ ಸದಸ್ಯರ ನಡುವೆ ಮಾತಿನಚಕಮಕಿ ನಡೆದಿರುವುದ ಹಾಸ್ಯಾಸ್ಪದ.
ನಗರದಲ್ಲಿ ರಾಜಕಾಲುವೆಗಳ ದುರಸ್ತಿಯಿಲ್ಲ, ಬೀದಿದೀಪಗಳಿಲ್ಲ.ಅಭಿವೃದ್ಧಿ ಯಲ್ಲಿಪೂರ್ಣವಾಗಿ ಹಿಂದೆ ಬಿದ್ದಿದ್ದುನಗರಸಭೆ ಆಡಳಿತ ಮಂಡಳಿ ಈ ವೈಫಲ್ಯ ಕ್ಕೆ ಕಾರಣ ಎಂದು ದೂರಿದರು
ನಗರಸಭೆಯಲ್ಲಿನ ಇಂತಹ ದುರಾಡಳಿತಕ್ಕೆಬಕಡುವಾಣ ಹಾಕಲು ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರ ಮುಂದಾಗಬೇಕು.
ಪ್ರಸ್ತುತ ನಗರಸಭೆ ಗೆ ಆಯ್ಕೆಯಾದ ಸದಸ್ಯರ ಸದಸ್ಯತ್ವ ರದ್ದುಮಾಡಿ ನಗರಸಭೆ ಯನ್ನು ಸೂಪರ್ ಸೀಡ್ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಪಿ.ಯಲ್ಲಪ್ಪ.ಪದಾಧಿಕಾರಿಗಳಾದ ಹನುಮಂತು, ಭೀಮೇಶ ಭಂಡಾರಿ, ರವಿಕುಮಾರ, ರಾಜು, ಚನ್ನಪ್ಪ,ಪ್ರದೀಪಕುಮಾರ ಉಪಸ್ಥಿತರಿದ್ದರು.