ನಗರಸಭೆ,ತಹಶೀಲ್ ಕಛೇರಿಯಲ್ಲಿ ಶೌಚಾಲಯ ವ್ಯವಸ್ಥೆ ಮಾಡದಿದ್ದರೆ ಹೋರಾಟ – ಜಂಬಣ್ಣ ಜಲ್ದಾಲ್

ರಾಯಚೂರು,ಆ.೪- ನಗರದ ತಹಶೀಲ್ ಕಛೇರಿ ಮತ್ತು ನಗರಸಭೆ ಕಛೇರಿಗಳಿಗೆ ಪ್ರತಿ ನಿತ್ಯ ಸಾರ್ವಜನಿಕರು ಬರುತ್ತಿರುವುದರಿಂದ ಸಾರ್ವಜನಿಕ ಶೌಚಲಯ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಪರದಾಡುತ್ತಿದ್ದಾರೆ ಕೂಡಲೇ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಜಂಬಣ್ಣ ಜಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದದ ತಹಶೀಲ್ ಕಛೇರಿ ಮತ್ತು ನಗರಸಭೆ ಕಛೇರಿಗಳಿಗೆ ದಿನನಿತ್ಯ ಸಾವಿರಾರು ಜನರು ತಮ್ಮ ಕೆಲಗಳಿಗೆ ಬರುತ್ತಿದ್ದು ಸಾರ್ವಜನಿಕರಿಗೆ ಮೂತ್ರ ವಿಸರ್ಜನೆ ಮಾಡಲು ಶೌಚಾಲಯ ಇಲ್ಲದೆ ಇರುವುದರಿಂದ ಬಸ್ ನಿಲ್ದಾಣ, ಏಕ್ ಮಿನರ್ ಪಕ್ಕದಲ್ಲಿರುವ ಶೌಚಾಲಯಕ್ಕೆ ಹೋಗಬೇಕಾದ ಪರಿಸ್ಥಿ ನಿರ್ಮಾಣವಾಗಿದೆ
ತಹಶೀಲ್ ಕಛೇರಿ ಹಾಗೂ ನಗರಸಭೆ ಕಛೇರಿಗಳಲ್ಲಿ ಶೌಚಾಲಯ ಇಲ್ಲದೆ ಇರುವುದರಿಂದ ಮೂತ್ರ ವಿಸರ್ಜನೆಯನ್ನು ಕಛೇರಿಗಳ ಅವರಣದಲ್ಲಿ ಮಾಡುತ್ತಿದ್ದಾರೆ
ಎಂದು ದೂರಿದರು.
ತಹಶೀಲ್ ಕಛೇರಿ ಹಾಗೂ ನಗರಸಭೆಯಲ್ಲಿ ಕೂಡಲೇ ಸಾರ್ವಜನಿಕ ಶೌಚಲಯ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಸಂಘಟನೆ ವತಿಯಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.