ನಗರಸಭೆಗೆ ಪೌರಾಯುಕ್ತರು ಯಾರು?

ಕೆಜಿಎಫ್:ಜು:೭:ರಾಬರ್ಟ್‌ಸನ್ ಪೇಟೆ ನಗರಸಭೆಗೆ ಯಾರು ಪೌರಾಯುಕ್ತರು ಎಂಬ ಗೊಂದಲ ಮತ್ತು ಚರ್ಚೆಗಳು ನಗರಾಧ್ಯಂತ ನಡೆಯುತ್ತಿದೆ .
ಪೌರಾಡಳಿತ ಇಲಾಖೆಯು ಪೌರಾಯುಕ್ತೆ ಅಭಿಕ ರನ್ನು ವರ್ಗಾವಣೆಗೊಳಿಸಿ ಪವನ್‌ಕುಮಾರ ರನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿತ್ತು ಅದರಂತೆ ಪವನ್‌ಕುಮಾರ ನಗರಸಭೆ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು.
ಆದರೆ ಪೌರಾಯುಕ್ತೆ ಅಭಿಕ ರವರು ಕೆಎಟಿಯಲ್ಲಿ ದಾವೆ ಹೊಡಿ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಲಾಗುತ್ತಿದ್ದು ಕಳೆದ ೪ ದಿನಗಳಿಂದ ಹಿಂದಿನ ಪೌರಾಯುಕ್ತೆ ಅಂಬಿಕ ರವರು ಕಚೇರಿಗೆ ಆಗಮಿಸಿಲ್ಲ ಹಾಗೂ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಪವನ್‌ಕುಮಾರ ಸಹ ಕಚೇರಿಯತ್ತ ಸುಳಿದಿಲ್ಲ ಈ ಬೆಳವಣಿಗೆಯಿಂದ ನಗರಸಭೆಯಲ್ಲಿ ಕಡತಗಳ ರಾಷಿ ತುಂಬಿ ತುಳುಕುತ್ತಿದೆ ಆಡಳಿತಾಧಿಕಾರಿಯಾಗಿರುವ ಉಪವಿಭಾಗಧಿಕಾರಿ ಸಹ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಮುಂದಾಗದಿರುವುದರಿಂದ ಹೇಳುವರು ಕೇಳುವರು ಯಾರು ಇಲ್ಲದಂತೆ ಆಗಿದೆ .
ನಗರಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಅವದಿ ಮುಗಿದಿರುವುದರಿಂದ ೨ ನೇ ಅವದಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಮೀಸಲಾತಿಯನ್ನು ಸರ್ಕಾರ ನಿಗದಿಪಡಿಸಿಲ್ಲ ಆದ್ದರಿಂದ ಒಂದು ಕಡೆ ಅಧ್ಯಕ್ಷ ಉಪಾಧ್ಯಕ್ಷರು ಇಲ್ಲ ಮತ್ತೋಂದು ಕಡೆ ಪೌರಾಯುಕ್ತರು ಇಲ್ಲದಂತ ಪರಿಸ್ಥಿತಿ ಇದ್ದು ನಗರಸಭೆ ಸದಸ್ಯರು ಯಾರ ಬಳಿ ಹೋಗಿ ಸಮಸ್ಯೆಗಳನ್ನು ಕೇಳಬೇಕು ಎಂದು ತಿಳಿಯದಂತೆ ತಲೆ ಮೇಲೆ ಕೈಹೋತು ಕುಳಿತ್ತಿದ್ದಾರೆ .ಬಗೆಹರಿಯದ ಕಸದ ಸಮಸ್ಯೆದಿನ ನಿತ್ಯ ಸಾವಿರಾರು ಟನ್ ಕಸದ ರಾಷಿ ನಗರದಲ್ಲಿ ಬೀಳುತ್ತಿದ್ದು ಅವುಗಳನ್ನು ಸರ್ಮಪಕವಾಗಿ ವಿಲೇವರಿ ಮಾಡುವಲ್ಲಿ ಉಸ್ತುವರಿವಹಿಸಿಕೊಂಡಿರುವ ಆರೋಗ್ಯ ನಿರೀಕ್ಷಕರು ಕಾಟಚಾರಕ್ಕೆ ಕಚೇರಿಯತ್ತ ಆಗಮಿಸಿ ಸಹಿ ಹಾಕಿ ಎಲ್ಲಿ ಹೋಗುತ್ತರೋ ತಿಳಿಯದಂತೆ ಆಗಿದೆ ಎಂಬ ಟೀಕೆಗಳು ನಗರಸಭೆ ಹಾಗೂ ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ ಇನ್ನಾದರು ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವರೇ ಕಾದು ನೋಡಬೇಕಿದೆ.