ನಗರಭಿವೃದ್ಧಿ ಭ್ರಷ್ಟಾಚಾರ: ಆರೋಪ

ರಾಯಚೂರು,ಏ.೩೦- ನಗರಭಿವೃದ್ಧಿ ಪ್ರಾಧಿಕಾರದಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ಪ್ರಾಧಿಕಾರವನ್ನು ಸೂಪರ್ ಸಿಡ್ ಮಾಡುವಂತೆ ಹೈ ಕೋರ್ಟ್ ದೂರು ಸಲ್ಲಿಸಲಾಗುವುದೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಗರ ಕ್ಷೇತ್ರ ಅಭ್ಯರ್ಥಿ ರಾಮಣ್ಣ ಆರ್ ಹೆಚ್ ಜೆ ಅವರು ಹೇಳಿದರು. ಅವರಿಂದು ನಗರದ ಪತ್ರಿಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
೨೦೦೭-೦೮ ನೇ ಸಾಲಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಸಿದ್ರಾಂಪುರ ರಸ್ತೆಯಲ್ಲಿರುವ ಭೂಮಿಯನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ನಿವೇಶನ ಹಂಚಿಕೆಗೆ ೩೬ ಎಕರೆ ೩೪ ಗುಂಟೆ ಜಮೀನನ್ನು ಖರೀದಿ ಮಾಡಲು ಅಕ್ಟೋಬರ್ ೧೭, ೨೦೦೭ ರಂದು ತೀನ್ ಕಂದಿಲ್ ಬ್ರಾಂಚಿನ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಪ್ರಾಧಿಕಾರ ಶೇ.೧೪ ರ ಬಡ್ಡಿ ದರದಲ್ಲಿ ೨ ಕೋಟಿ ೨೩ ಲಕ್ಷ ರೂ ಸಾಲ ಪಡೆದಿರುತ್ತಾರೆ. ನಗರಭಿವೃದ್ಧಿ ಪ್ರಾಧಿಕಾರ ಕಾಯ್ದೆ ಅಡಿ ಸಾಲ ಪಡೆಯುವ ಮುಂಚೆ ಸರ್ಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಆದರೆ ನಗರಭಿವೃದ್ಧಿ ಪ್ರಾಧಿಕಾರವು ಸರ್ಕಾರದ ಗಮನಕ್ಕೆ ತರದೇ ಕಾನೂನು ಬಾಹಿರ ಸಾಲ ಪಡೆದಿದ್ದಾರೆ ಎಂದು ದೂರಿದರು. ಪ್ರಾಧಿಕಾರದ ಆಡಳಿತ ಮಂಡಳಿಯು ಸರಕಾರದ ನಿಯಮಗಳನ್ನು ಉಲ್ಲಂಘಿಸಿ ನೇರವಾಗಿ ಬ್ಯಾಂಕಿನವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸಾಲ ಪಡೆದು ೨೦೨೧-೨೨ ರವರೆಗೆ ಸಾಲದ ಅಸಲು ಮತ್ತು ಬಡ್ಡಿಯನ್ನು ಮರುಪಾವತಿ ಮಾಡಿರುವದಿಲ್ಲ. ಪ್ರಗತಿ ಗ್ರಾಮೀಣ ಬ್ಯಾಂಕ್ ಪಾಸ್ ಶೀಟ್ ಪ್ರಕಾರ ಜೂನ್.೮,೨೦೧೧ ರವರೆಗೂ ೧ ಕೋಟಿ ೪೮ ಲಕ್ಷ ೫೧ ಸಾವಿರ ೭೮೬ ಬಡ್ಡಿ ಆಗಿದೆ ಎಂದರು. ರೈತರು ಸಣ್ಣಪುಟ್ಟ ಸಾಲಗಳನ್ನು ಮಾಡಿದರೆ ಸಾಲ ಮರು ಪಾವತಿ ಮಾಡುವಂತೆ ಬ್ಯಾಂಕ್ ರೈತರಿಗೆ ನೋಟಿಸ್ ಜಾರಿ ಮಾಡುತ್ತದೆ. ಆದರೆ ೧೫ ವರ್ಷಗಳು ಕಳೆದರೂ ಪ್ರಗತಿ ಗ್ರಾಮೀಣ ಬ್ಯಾಂಕ್ ಪ್ರಾಧಿಕಾರದ ಮೇಲೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ದೂರಿಸಿದರು.
ವಸತಿ ಯೋಜನೆಯಡಿ ೧ ಮತ್ತು ೨ರ ಕ್ರಮವಾಗಿ
೫೨೮ ಮತ್ತು ೬೭ ಅರ್ಜಿಗಳೊಂದಿಗೆ ರೂ.೧ ಕೋಟಿ ೮೬ ಲಕ್ಷ ೧೨ ಸಾವಿರ ೪೫೦ ಹಣ ಪ್ರಾಧಿಕಾರಕ್ಕೆ ಪಾವತಿಯಾಗಿದೆ. ಈ ವಸತಿ ಯೋಜನೆಗಳ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಿದ್ದರೆ ಅರ್ಜಿದಾರರಿಂದ ಬಾಕಿ ಹಣ ಶೇ. ೯೦ ಮತ್ತು ೯೭ ರಷ್ಟು ಪಡೆದಿದ್ದರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ ಅಂದಾಜು ಮೌಲ್ಯ ರೂ. ೨೧ ಕೋಟಿ ೬೮ ಲಕ್ಷ ೪೫ ಸಾವಿರ ೩೦೦ ಪ್ರಾಧಿಕಾರದ ನಿಧಿಗೆ ಸಂದಾಯವಾಗುತ್ತಿತ್ತು. ಆದರೆ ನಗರಾಭಿವೃದ್ಧಿ ಪ್ರಾಧಿಕಾರದ ಕರ್ತವ್ಯ ಲೋಪ, ಬೇಜವಾಬ್ದಾರಿತನದಿಂದ ದಿವಾಳಿ ಆಗುವ ಹಂತಕ್ಕೆ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಐ ಕುಮಾರನಾಯಕ, ಕಂದೂರು ರಾಘವೇಂದ್ರ, ಆಂಜನೇಯ ಸೇರಿದಂತೆ ಉಪಸ್ಥಿತರಿದ್ದರು.