ನಗರಪಾಲಿಕೆ ಆಯುಕ್ತರಾಗಿ ಲಕ್ಷ್ಮೀಕಾಂತ್ ಅಧಿಕಾರ ಸ್ವೀಕಾರ

ಮೈಸೂರು:ಜೂ.06: ಮಹಾನಗರ ಪಾಲಿಕೆ ಆಯುಕ್ತರಾಗಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರು ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು.
ಶಿಲ್ಪಾ ನಾಗ್ ಅವರು ಲಕ್ಷ್ಮೀಕಾಂತ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಲಿ.ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಇಂದು ಅಧಿಕಾರ ಹಸ್ತಾಂತರಿ ಮೈಸೂರು ಜನರಿಗೆ ನಮಸ್ಕಾರ ಎಂದು ಮಾತು ಆರಂಭಿಸಿದ ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಆರ್ ಡಿಪಿಆರ್ ಇಲಾಖೆಗೆ ಹೋಗಿ ಸೋಮವಾರ ಅಧಿಕಾರ ಸ್ವೀಕಾರ ಮಾಡ್ತೀನಿ. ಕೆಲಸ ಒಬ್ಬರು ಅಲ್ಲದಿದ್ರೆ ಮತ್ತೊಬ್ಬರು ಮಾಡ್ತಾರೆ ಎಂದು ತಿಳಿಸಿದರು.
ಎಲ್ಲರ ಒಡನಾಟದೊಂದಿಗೆ ಕೆಲಸ ಮಾಡಿದ್ದೇನೆ. ಮೈಸೂರಿನಲ್ಲಿ ಒಳ್ಳೆಯ ಅನುಭವವಿರುವ ಅಧಿಕಾರಿಗಳಿದ್ದಾರೆ. ಉದಾರ ಮನಸ್ಸಿಂದ ಹಲವರು ದಾನ ಮಾಡಿದ್ದಾರೆ. ಮೆಡಿಕಲ್ ಕಿಟ್ ಕೂಡ ನೀಡಿದ್ದಾರೆ. ಇದಕ್ಕೆ ಸಂಘ ಸಂಸ್ಥೆಗಳಿಗೆ ಶಿಲ್ಪಾ ನಾಗ್ ಧನ್ಯವಾದ ಎಂದರು.