
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.26: ವಿಜಯಮ್ಮ ಸೋಮಶೇಖರ ರೆಡ್ಡಿ ಅವರು ನಗರದ 22ನೇ ವಾರ್ಡ್ ನ ಮೋಕ ರೋಡ್ ಎಡಭಾಗ ಹಾಗೂ ಬ್ರಹ್ಮಯ್ಯ ಕಾಲೋನಿಯಲ್ಲಿ ಪತಿ ಸೋಮಶೇಖರ ರೆಡ್ಡಿ ಅವರಿಗೆ ಮತ ನೀಡುವಂತೆ ಚುನಾವಣಾ ಪ್ರಚಾರ ಮಾಡಿದರು.
ಕಳೆದ ಐದು ವರ್ಷಗಳಿಂದ ನಗರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು, 24×7 ಕುಡಿಯುವ ನೀರು ಪೂರೈಕೆ, ಬಳ್ಳಾರಿಯ ಬಡ ಜನತೆಯ ಎಷ್ಟೋ ದಿನಗಳ ಕನಸಾಗಿರುವಂತಹ ಪಟ್ಟ ಇಲ್ಲದ ನಿವಾಸಗಳಿಗೆ ಪಟ್ಟ ನೀಡಿರುವುದು, ಹಾಗೂ ನಗರದಲ್ಲಿ ಅತಿ ಹೆಚ್ಚು ಸಿಸಿ ರಸ್ತೆ ಕಾಮಗಾರಿಗಳು, ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುವ ಮೂಲಕ ಮತ್ತೊಮ್ಮೆ ಬಿಜೆಪಿಗೆ ಮತ ನೀಡಿ ಮತ್ತಷ್ಟು ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಕೆ. ಹನುಮಂತು, ಬಿಜೆಪಿ ಹಿರಿಯ ಮುಖಂಡರಾದ ರಾಮಚಂದ್ರಪ್ಪ, ಪ್ರತಾಪ್ ರೆಡ್ಡಿ, ರಾಮಾಂಜನಿ, ಕುಮಾರ್ ಸ್ವಾಮಿ, ದುರ್ಗೇಶ, ವಿಜಯಕುಮಾರ್, ಶ್ರೀನಿವಾಸ್, ಸುಮಾರೆಡ್ಡಿ, ರೇಣುಕಾ, ವಾಣಿ, ಉಷಾ, ಗೀತಾ, ರೂಪಶ್ರೀ, ಗೋವಿಂದ, ಶರಬಯಸ್ವಾಮಿ, ಚಂದ್ರು, ಅರ್ಜುನ್ ಮೊದಲಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.