ನಗರದ 5ನೇ ವಾರ್ಡಿನಲ್ಲಿ ಸಚಿವ, ಶಾಸಕರಿಂದ ಸಂಜೆ ಬಿಜೆಪಿ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ

ಬಳ್ಳಾರಿ,ಮಾ.30- ಮುಂದಿನ ತಿಂಗಳ 27 ರಂದು ನಡೆಯುವ ಮಹಾನಗರ ಪಾಲಿಕೆಯ 39 ವಾರ್ಡ್ ಗಳಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧೆ ಬಯಸುವ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅವರವರ ವಾರ್ಡಿನಲ್ಲಿಯೇ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ ರೆಡ್ಡಿ ಅವರು ಸ್ವೀಕರಿಸಲಿದ್ದಾರೆ.
ಇಂದು ಸಂಜೆ 1, 19, 21, 22, 24ನೇ ವಾರ್ಡಿನಲ್ಲಿ ಸಭೆ ನಡೆಸಿ ಅರ್ಜಿ ಸ್ವೀಕರಿಸಲಿದ್ದಾರಂತೇ. ಇದೇ ರೀತಿ ಪ್ರತಿದಿನ 5 ವಾರ್ಡಗಳಲ್ಲಿ ಸಂಚರಿಸಿ ಅರ್ಜಿ ಸ್ವೀಕರಿಸಲಿದ್ದು ನಂತರ ಸಚಿವರು, ಶಾಸಕರು, ಪಕ್ಷದ ಮುಖಂಡರು ಸೇರಿ ಚರ್ಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರಂತೆ.
ಸಧ್ಯ ಮಸ್ಕಿ ವಿಧಾನಸಭಾ ಚುನಾವಣೆಯಲ್ಲಿ ತೊಡಗಿಸಿಕೊಂಡಿರುವ ಶ್ರೀರಾಮುಲು ಅವರು ಎ. 14 ರವರೆಗೆ ಹಗಲು ವೇಳೆಯಲ್ಲಿ ಅಲ್ಲಿ, ಸಂಜೆ, ರಾತ್ರಿ ಬಳ್ಳಾರಿಗೆ ಬಂದು ಪಾಲಿಕೆ ಚುನಾವಣೆಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲ್ಲಿದ್ದಾರಂತೆ. ಕಳೆದ ಬಾರಿ ತಮ್ಮ ಕೈನಿಂದ ತಪ್ಪಿದ ಪಾಲಿಕೆಯ ಅಧಿಕಾರದ ಚುಕ್ಕಾಣಿಯನ್ನು ಈ ಬಾರಿ ಹೇಗಾದರೂ ತಮ್ಮ ವಶಕ್ಕೆ ತೆಗೆದುಕೊಳ್ಳಲು ಶ್ರೀರಾಮುಲು ಮತ್ತು ಸೋಮಶೇಖರ ರೆಡ್ಡಿ ಅವರು ಕಾರ್ಯತಂತ್ರ ರೂಪಿಸಿದ್ದಾರೆ. ಸಧ್ಯದ ಪರಿಸ್ಥಿತಿಯಲ್ಲಿ ಮಾತ್ರ ಯಾವೊಂದು ಪಕ್ಷಕ್ಕೂ ಈ ಹಿಂದೆ ನೀಡಿದಂತೆ ಓನ್ ಸೈಡ್ ಆಗಿ ಮತ ನೀಡಲಾರ ಎಂಬಂತಿದೆ. ದಿನಕಳೆದಂತೆ ಈ ಚಿತ್ರಣ ಚುನಾವಣಾ ತಂತ್ರಗಳ ಮೇಲೆ ಬದಲಾಗುವ ಸಾಧ್ಯತೆ ಇದೆ.