ನಗರದ 24 ನೇ ವಾರ್ಡಿನಲ್ಲಿ ಕೋವಿಡ್ ಲಸಿಕೆ

ಬಳ್ಳಾರಿ ಜೂ 04 : ನಗರದ 24 ನೇ ವಾರ್ಡಿನಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳ ಸೂಚನೆ ಮೇರೆಗೆ ನಿನ್ನೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಂಗನವಾಡಿ ಶಾಲೆಯಲ್ಲಿ ಕೋವಿಡ್ ಲಸಿಕಾ ಅಭಿಯಾನ ನಡೆಯಿತು. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಯಿತು.
ವಾರ್ಡಿನ ಪಾಲಿಕೆ ಸದಸ್ಯ ಟಿ.ಶ್ರೀನಿವಾಸ ಮೋತ್ಕರ್ ಅವರು ಸ್ಥಳದಲ್ಲಿದ್ದು ಜನರಿಗೆ ಲಸಿಕೆ ಕೊಡಿಸಿದರು.