ನಗರದ ಹಲವೆಡೆ ಮಳೆ, ಸವಾರರ ಪರದಾಟ

ಬೆಂಗಳೂರು, ಜೂ.೧೦-ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ ಮುಂದುವರೆದಿದ್ದು,ವಾಹನ ಸವಾರರು ಪರದಾಟ ನಡೆಸಿದರು.ವರುಣನ ಆರ್ಭಟದಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ವಾಹನ ದಟ್ಟಣೆ ಉಂಟಾಗಿದ್ದರಿಂದ ಸವಾರರು ಪರದಾಡುವಂತಾಗಿದರೆ, ನಗರದ ಕೆಲವೆಡೆ ಮರಗಳೂ ಧರೆಗುರುಳಿ ಬಿದ್ದವು.ನಗರದ ಹಲವೆಡೆ ಭಾರೀ ಮಳೆಯಾಗಿದ್ದು, ಆರ್ ಟಿ ನಗರ, ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ, ಹೊರವರ್ತುಲ ರಸ್ತೆ, ನಾಯಂಡಹಳ್ಳಿ, ಮಾರತ್‌ಹಳ್ಳಿ, ಬೆಳ್ಳಂದೂರು, ಎಚ್‌ಎಸ್‌ಆರ್ ಲೇಔಟ್, ರಾಜರಾಜೇಶ್ವರಿನಗರ, ಜಯನಗರ, ಯಲಹಂಕ, ತುಮಕೂರು ರಸ್ತೆ ಸೇರಿದಂತೆ ಹೆಚ್ಚು ಮಳೆಯಾಗಿದೆ.ಇನ್ನೂ ನಗರದ ಕೆಲವೆಡೆ ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲ ಹೊಳೆಯಂತಾಗಿದ್ದು, ಅಂಡರ್‌ಪಾಸ್‌ಗಳಲ್ಲಿ ಹೆಚ್ಚಾಗಿ ನೀರು ನಿಂತಿತ್ತು. ಕೆ.ಆರ್.ಮಾರುಕಟ್ಟೆ ಜಂಕ್ಷನ್, ಚಿಕ್ಕಪೇಟೆ ವೃತ್ತ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆ, ಪಣತ್ತೂರು ರೈಲ್ವೆ ಅಂಡರ್‌ಪಾಸ್, ಬನ್ನೇರುಘಟ್ಟ ರಸ್ತೆಯ ನಾಗಾರ್ಜುನ ಜಂಕ್ಷನ್, ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತ, ಕಲ್ಯಾಣನಗರ ಮೇಲ್ಸೇತುವೆ.ಹೆಸರಘಟ್ಟ ಕ್ರಾಸ್, ನಾಗವಾರ, ಹೆಣ್ಣೂರು ಜಂಕ್ಷನ್, ಕುಂದಲಹಳ್ಳಿಯ ಸ್ಪೈಸ್ ಗಾರ್ಡನ್, ಕಾಡುಬೀಸನಹಳ್ಳಿ, ಮಾರತ್‌ಹಳ್ಳಿ, ಹೊರವರ್ತುಲ ರಸ್ತೆಯ ಕಾರ್ತಿಕ್‌ನಗರ ಜಂಕ್ಷನ್‌ನಿಂದ ದೇವರಬೀಸನಹಳ್ಳಿ ಜಂಕ್ಷನ್, ದೊಡ್ಡನೆಕ್ಕುಂದಿ, ಕನಕಪುರ ರಸ್ತೆಯ ತಲಘಟ್ಟಪುರ, ಹುಳಿಮಾವು, ರೂಪೇನಅಗ್ರಹಾರ, ಮಾನ್ಯತಾ ಟೆಕ್‌ಪಾರ್ಕ್, ಮೈಕೋ ಲೇಔಟ್, ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್, ವಿಜಯನಗರ, ಮೈಸೂರು ರಸ್ತೆಯ ನಾಯಂಡಹಳ್ಳಿ, ಹರಳೂರು ಜಂಕ್ಷನ್, ಹೆಬ್ಬಾಳ ವೃತ್ತದಲ್ಲಿ ಕೆಲ ಕಾಲ ನೀರು ನಿಂತಿತ್ತು.