ನಗರದ ಹಲವಡೆ ಶ್ರೀರಾಮುಲು  ಭರ್ಜರಿ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.23: ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಇಂದು ನಗರದ ಹಲವು ಪ್ರದೇಶಗಳಲ್ಲಿ ಸಂಚರಿಸಿ ಭರ್ಜರಿ ಪ್ರಚಾರ ನಡೆಸಿದರು.
ನಗರದ ವಾರ್ಡ್ ನಂ 19ನೇ ವಾರ್ಡಿನ ಹುಸೇನ್ ನಗರ,17 ನೇ ವಾರ್ಡಿನ ಆಯುರ್ವೇದ ಕಾಲೇಜಿನ ಪ್ರದೇಶ ,09 ವಾರ್ಡ್ ನ ವರಬಸಪ್ಪ ಗುಡಿ  ಪ್ರದೇಶದಲ್ಲಿ ನಗರದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ,  ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮೀನಳ್ಳಿ ತಾಯಣ್ಣ, ಮುಖಂಡರಾದ ಗಾಲಿ ಲಕ್ಷ್ಮಿ ಅರುಣ, ಮಾಜಿ ಕಾರ್ಪೊರೇಟ ಕೃಷ್ಣಮೊದಲಾದವರ ಜೊತೆ ಕೂಡಿ  ಪ್ರಚಾರ ಮಾಡಲಾಯಿತು.
ನಾನು ಈ ಬಳ್ಳಾರಿಯ ಮಗ ಕಳೆದ ಮೂರು  ದಶಕಗಳಿಂದ ರಾಜಕೀಯಕ್ಕೆ ಬಂದ ನನ್ನನ್ನು ಇಲ್ಲಿನ ಜನತೆ ನಗರ ಸಭಾ ಸದಸ್ಯನಾಗಿ, ಶಾಸಕನನ್ನಾಗಿ, ಸಂದರನ್ನಾಗಿ ಮಾಡಿದ್ದೀರಿ, ಸಚಿವನಾಗಿ ನಗರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿರುವೆ. ನಗರ ಬೆಳೆದಂತೆ ಸಮಸ್ಯೆಗಳು ಬೆಳೆಯುತ್ತಲೇ ಇರುತ್ತವೆ. ಅವನ್ನು ಪರಿಹರಿಸುವುದು ನಮ್ಮ ಜವಾಬ್ದಾರಿ. ಆ ಕೆಲಸ ಮಾಡುವುದು ನನ್ನ ಆಧ್ಯತೆ ಎಂದರು.
ದೇಶದಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ.  ದೇಶ ಸಂರಕ್ಷಣೆಗಾಗಿ ಅವರು ಕೈಗೊಂಡ ಯೋಜನೆಗಳ ಬಗ್ಗೆ ತಿಳಿಸಿ ಬಿಜೆಪಿಗೆ ಮತನೀಡಿ ಎಂದು ಮನವಿ ಮಾಡಿದರು.