
(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 05 : ನಗರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೊರ್ಲಗುಂದಿಯ ದೊಡ್ಡ ಕೇಶವ ರೆಡ್ಡಿ ಅವರು ಇಂದು ನಗರದ ಹಲವಡೆ ತಮ್ಮ ಬೆಂಬಲಿಗರೊಂದಿಗೆ ಸಂಚರಿಸಿ ಮತಯಾಚನೆ ಮಾಡಿದರು.
ಮನಿ ಹಿಡಿದುಕೊಂಡು ಬಂದು ಮತ ಕೇಳುವ ಅಭ್ಯರ್ಥಿಗಳು ಗೆದ್ದ ಮೇಲೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ.
ಪೊರಕೆ ಗುರ್ತಿಗೆ ಮತ ನೀಡಿ. ದೆಹಲಿ ಮತ್ತು ಪಂಜಾಬಿನಂತ ಉತ್ತಮ ಆಡಳಿತ ಪಡೆಯಿರಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ
ಬಾಲಜಿ, ಗಾದಿಲಿಂಗ, ಪ್ರದೀಪ್ ರೆಡ್ಡಿ, ಪ್ರಸಾದ್ ರೆಡ್ಡಿ ಮೊದಲಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.