ನಗರದ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಪಾತ್ರ ಬಹುಮುಖ್ಯ

ಬಸವಕಲ್ಯಾಣ: ಮೇ.16:ನಗರದ ಸೌಂದರ್ಯ ಹೆಚ್ಚಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಬಹುಮುಖ್ಯವಾದದು ಎಂದು ಶಾಸಕ ಶರಣು ಸಲಗರ ಹೇಳಿದರು.

ಶನಿವಾರ ನಗರದ ಕಾಳಿಗಲ್ಲಿಯ ಹನುಮಾನ ಮಂದಿರದ ಆವರಣದಲ್ಲಿ ಪೌರಕಾರ್ಮಿಕರಿಗೆ ಬೆಳಗ್ಗಿನ ಉಪಹಾರ, ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಿ ಮಾತನಾಡಿದ ಅವರು, ಕರೊನಾ ನಿಯಂತ್ರಣ ಹಾಗೂ ಅದನ್ನು ಮಟ್ಟಹಾಕಲು ಪೌರ ಕಾರ್ಮಿಕರ ಅವಶ್ಯಕತೆ ಬಹಳಷ್ಟಿದೆ. ಬಸವಕಲ್ಯಾಣ ನಗರದ ಪ್ರತಿಯೊಂದು ಕಾಲೋನಿಯನ್ನು ಸ್ವಚ್ಛವಾಗಿರಿಸುವ ಜವಾಬ್ದಾರಿ ನಿಮ್ಮದು. ನಗರದ ಆರೋಗ್ಯ ಕಾಪಾಡುವಲ್ಲಿ ನಿಮ್ಮ ಪಾಲುದಾರಿಕೆ ಬಹು ದೊಡ್ಡದಾಗಿದೆ ಎಂದರು.

ಸ್ವಚ್ಛತೆಗೆ ನೀವು ಬುನಾದಿ. ಹಾಗಾಗಿ, ನಿಮ್ಮ ಯಾವುದೇ ಸಮಸ್ಯೆಗೆ ನಾನು ಸ್ಪಂದಿಸುವೆ. ಸ್ವಚ್ಛ ಭಾರತ ಅಭಿಯಾನದ ಬಹುಮುಖ್ಯ ಅಂಗವಾಗಿರುವ ನೀವು ನಗರದ ಸಂಪೂರ್ಣ ಸ್ವಚ್ಛತೆಗಾಗಿ ಕೈಜೋಡಿಸಬೇಕು. ಇದಕ್ಕಾಗಿ ನಿಮಗೆ ಯಾವುದೇ ಅಡಚಣೆ ಬಂದರೂ ಬಗೆಹರಿಸುವೆ. ಮೇ 24 ಬಳಿಕ ನಿಮ್ಮ ಸಭೆ ಕರೆಯುವೇ ಎಂದರು. ಬಿಜೆಪಿ ನಗರಾಧ್ಯಕ್ಷ ಕೃಷ್ಣಾ ಗೋಣೆ ಇನ್ನಿತರರಿದ್ದರು.