ನಗರದ ಸಮಗ್ರ ಅಭಿವೃದ್ಧಿ ನಡೆಯುತ್ತಿದೆ
 ಕಾಂಗ್ರೆಸ್ ನ್ನು ಗ್ಯಾರಂಟಿಯಾಗಿ ಮನೆಗೆ ಕಳುಹಿಸಿ : ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.07: ರಸ್ತೆ ಅಗಲೀಕರಣ, ಅಭಿವೃದ್ಧಿ, ಒಳ ಚರಂಡಿ, ಶಾಲಾ ಕೊಠಡಿಗಳು, ಎಲ್ ಇಡಿ ಬೀದಿ ದೀಪಗಳ ಅಳವಡಿಕೆ ಸೇರಿದಂತೆ  ಸಮಗ್ರ  ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಗ್ಯಾರೆಂಟಿ ಎಂದು ಬರುವ ಕಾಂಗ್ರೆಸ್ ನ್ನು ಗ್ಯಾರೆಂಟಿಯಾಗಿ ಮನೆಗೆ ಕಳುಹಿಸಿ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದರು.
ಅವರು ಇಂದು ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಫಲಾನುಭವಿಗಳ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ಕೊಳಚೆ ಪ್ರದೇಶದಲ್ಲಿನ ಹದಿಮೂರು ಮನೆಗಳ ಸಾವಿರ ಹಕ್ಕುಪತ್ರ ನೀಡಿದ್ದೇವೆ. ನಗರಕ್ಕೆ ಎಲ್ಲ ದಿಕ್ಕುಗಳಲ್ಲಿ ಚತುಷ್ಪತ ರಸ್ತೆ ಅಭಿವೃದ್ಧಿ ಮಾಡುತ್ತಿದೆ. ಗಡಗಿ ಚೆನ್ನಪ್ಪ  ವೃತ್ತದಲ್ಲಿ ದೊಡ್ಡದಾದ ಟವರ್ ನಿರ್ಮಾಣ ಮಾಡುತ್ತಿದೆ. ನೂರು ಕೋಟಿ ರೂ ವೆಚ್ಚದಲ್ಲಿ ಮೆಗಾ ಡೈರಿ ಮಾಡುತ್ತಿದೆ. ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲಿದೆಂದು ಹೇಳಿದರು.