ನಗರದ ವಿವಿಧ ವಾರ್ಡಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ

ಸಂಜೆವಾಣಿ ವಾರ್ತೆ
ಸಿಂಧನೂರು.ಏ.೧೯- ನಗರದ ವಿವಿಧ ವಾರ್ಡ್‌ಗಳಲ್ಲಿ ಕೊಪ್ಪಳ ಲೋಕಸಭಾ ಬಿಜೆಪಿ ಡಾ.ಬಸವರಾಜ ಕ್ಯಾವಟರ್ ಪರ ಮತಯಾಚನೆ ಮಾಡಿದರು.
ಭಾರತೀಯ ಜನತಾ ಪಾರ್ಟಿ ಸಿಂಧನೂರು ನಗರ ಮಂಡಲದ ವತಿಯಿಂದ ವಾರ್ಡ್ ಸಂಖ್ಯೆ ೧ ರ ಚೌಡಿ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರ ಮುಖಾಂತರ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಡಾಕ್ಟರ್ ಬಸವರಾಜ ಅವರ ಮನೆ, ಮನೆ ಸಂಪರ್ಕ ಮಾಡಿ ಮತಯಾಚಿಸಲಾಯಿತು.
ಮುಖಂಡರುಗಳಾದ ರಾಜೇಶ್ ಹಿರೇಮಠ, ಬಸವರಾಜ್ ನಾಡಗೌಡ, ಎಂ.ದೊಡ್ಡ ಬಸವರಾಜ, ಮಧ್ವರಾಜ ಆಚಾರ್ಯ, ಜಿಲ್ಲಾ ಓಬಿಸಿ ಮೋರ್ಚಾಧ್ಯಕ್ಷ ಹನುಮೇಶ ಕುರಕುಂದಿ, ಶಿವಬಸನಗೌಡ ಗೋರೆಬಾಳ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸಿರಾಜ್ ಪಾಶ, ಸುಮಿತ್ ತಡಕಲ್, ನಗರಸಭಾ ಮಾಜಿ ಸದಸ್ಯ ಯಲ್ಲೂಸಾ ಬದಿ, ಶ್ರೀರಾಮೂರ್ತಿ, ಪ್ರಶಾಂತ್ ಕಿಲ್ಲೆದ್, ಮಹಿಳಾ ಮುಖಂಡರಾದ ಶ್ರೀಮತಿ ಮಮತಾ ಹಿರೇಮಠ, ಪ್ರೇಮಾ ಸಿದ್ಧಾಂತಿಮಠ, ಮಂಡಲ ಉಪಾಧ್ಯಕ್ಷರುಗಳಾದ, ಶಿವಕುಮಾರ್ ಕುರುಕುಂದಿ, ನಾಗರಾಜ್ ದೇವರಗುಡಿ, ಆನಂದ್ ಗೋರಕರ್, ಯುವ ಮುಖಂಡರುಗಳು, ಮೋರ್ಚಾ ಅಧ್ಯಕ್ಷರುಗಳಾದ ರಾಜಸಾಬ್, ಮಹಾದೇವ ನಾಯಕ್, ಮುತ್ತು ಬರ್ಸಿ, ಇನ್ನೂ ಹಲವರು ಉಪಸ್ಥಿತರಿದ್ದರು.