ನಗರದ ವಿವಿಧ ಭಾಗಗಳಿಗೆ ಜಿಲ್ಲಾಧಿಕಾರಿ ಭೇಟಿ: ಕಾಮಗಾರಿ ಕುರಿತು ಪರಿಶೀಲನೆ

ಚಾಮರಾಜನಗರ, ಸೆ.09- ಜಿಲ್ಲಾಧಿಕಾರಿಚಾರುಲತಾಸೋಮಲ್‍ಅವರು ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಿಅಭಿವೃದ್ದಿ ಕಾಮಗಾರಿ ಸಂಬಂಧ ಪರಿಶೀಲನೆ ನಡೆಸಿದರು.
ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸಕಲ ಸೌಲಭ್ಯಗಳುಳ್ಳ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನಕೇಂದ್ರ (ಸ್ಟಡಿ ಸೆಂಟರ್) ಕಟ್ಟಡ ನಿರ್ಮಾಣವನ್ನು ವೀಕ್ಷಿಸಿದರು.
ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ 15 ಲಕ್ಷ ಲೀಟರ್ ಸಾಮಥ್ರ್ಯದಓವರ್ ಹೆಡ್‍ಟ್ಯಾಂಕ್‍ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅತೀ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ಸಂತೇಮರಹಳ್ಳಿ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣ ಕೆಲಸ ವೀಕ್ಷಿಸಿ ತ್ವರಿತವಾಗಿಕಾಮಗಾರಿ ಪೂರೈಸುವಂತೆ ನಿರ್ದೇಶನ ನೀಡಿದರು.
ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಯವರು ಮಳೆ ನೀರು ನಿಲ್ಲದೆ ಸರಾಗವಾಗಿಚರಂಡಿಗೆ ಹರಿಯಲು ಪೂರಕವಾಗಿರುವಕಾಮಗಾರಿಗೆ ಸೂಕ್ತ ಪ್ರಸ್ತಾವನೆಯನ್ನುತಕ್ಷಣವೇ ಸಿದ್ದಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ದೊಡ್ಡರಸನ ಕೊಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೋರಿಕೆತಡೆಯುವುದು ಸೇರಿದಂತೆ ಕೊಳದ ಸಮಗ್ರ ಅಬಿವೃದ್ದಿ ಕಾರ್ಯಕ್ಕಾಗಿಅಂದಾಜು ಪಟ್ಟಿ ಸಿದ್ದಪಡಿಸುವಂತೆ ನಿರ್ದೇಶನ ನೀಡಿದರು.
ತರಕಾರಿ ಮಾರುಕಟ್ಟೆ ಸ್ಥಳಕ್ಕೆ ಭೇಟಿಕೊಟ್ಟುಅದರ ನವೀಕರಣ ಸಂಬಂಧ ಪರಿಶೀಲನೆ ನಡೆಸಿದರು. ಇತರೆ ಭಾಗಗಳಿಗೂ ಭೇಟಿ ನೀಡಿ ನೀರು ನಿಲ್ಲದಂತೆ ವಹಿಸಬೇಕಿರುವ ಕ್ರಮಗಳಿಗೆ ಮುಂದಾಗುವಂತೆಜಿಲ್ಲಾಧಿಕಾರಿಚಾರುಲತಾ ಸೋಮಲ್‍ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ನಗರಾಭಿವೃದ್ದಿಕೋಶದಯೋಜನಾ ನಿರ್ದೇಶಕಿ ಎಂ.ವಿ. ಸುಧಾ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಇಬ್ರಾಹಿಂ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್‍ಕುಮಾರ್, ನಗರಸಭೆ ಆಯುಕ್ತ ನಟರಾಜು, ಜಿಲ್ಲಾ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ ಸೇರಿದಮತೆ ಇತರೆ ಅಧಿಕಾರಿಗಳು ಇದ್ದರು.