ನಗರದ ವಿವಿಧ ಬಡಾವಣೆಗಳ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಮ್ ಆದ್ಮಿ ಪಾರ್ಟಿ ಆಗ್ರಹ

ವಿಜಯಪುರ, ಜು.31-ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಬಡಾವಣೆಯಲ್ಲಿ ತಲೆದೋರಿರುವ ವಿವಿಧ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ, ವಿಜಯಪುರ ನಗರ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವುದರ ಮೂಲಕ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರ ನಗರವು ನಗರಸಭೆಯಿಂದ ಬಡ್ತಿ ಹೊಂದಿ ಮಹಾನಗರ ಪಾಲಿಕೆಯಾಗಿದ್ದರೂ ಸಹ ಇನ್ನೂ ಹಲವಾರು ಬಡಾವಣೆಗಳಲ್ಲಿ ಮೂಲಭೂತ ಸಮಸ್ಯೆಗಳ ಆಗರವಾಗಿದೆ. ಮಹಾನಗರ ಪಾಲಿಕೆಯಾದ ನಂತರ ಸರಕಾರವು ಹೆಚ್ಚಿನ ಪ್ರಮಾಣದ ಅಂದರೆ ಪ್ರತಿ ವರ್ಷಕ್ಕೆ 100 ಕೋಟಿ ರೂ. ಮೂಲಭೂತ ಸಮಸ್ಯೆಗಳಿಗೆ ಹಣ ಬಿಡುಗಡ ಮಾಡುತ್ತಿದ್ದು, ಆದರೆ ಈ ಹಣವನ್ನು ಮಹಾನಗರ ಪಾಲಿಕೆಯು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಇನ್ನು ವಾರ್ಡಗಳಲ್ಲಿ ಪಾಲಿಕೆ ಸದಸ್ಯರು ಇಲ್ಲದೇ ಇರುವದರಿಂದ ಬಡಾವಣೆಗಳ ಜನರ ಮೂಲಭೂತ ಸಮಸೈಗಳು ಸಮಸ್ಯೆ ಆಗಿಯೇ ಉಳಿದಿವೆ.
ಅದರನ್ವಯ ವಿಜಯಪುರ ನಗರದ ವಾರ್ಡ ನಂ : 28 ರಲ್ಲಿ ಬರುವ ನವಬಾಗ ದಿಂದ ಸರಕಾರಿ ಪದವಿ ಕಾಲೇಜಿನವರೆಗೆ ರಸ್ತೆಯನ್ನು ಪಡಿಸಬೇಕು. ವಿಶ್ವೇಶ್ವರಯ್ಯ ಸರ್ಕಲ್‍ದಿಂದ ರಾಮನಗರ ಬಿದನೂರ ಪೆಟ್ರೋಲ್ ಪಂಪ್‍ವರೆಗೆ ರಸ್ತೆ ಹಾಗೂ ಒಳಚರಂಡಿ ಹಾಳಾಗಿದ್ದು ಸರಿಪಡಿಸಬೇಕು. ಅಂಬೇಡ್ಕರ್ ಸರ್ಕಲ್‍ನಿಂದ ರೇಲ್ವೆ ಸ್ಟೇಷನ್‍ವರೆಗೆ ರಸ್ತೆಯನ್ನು ದುರಸ್ತಿಕರಣ. ಬಾಗಲಕೋಟ ಕ್ರಾಸ್‍ದಿಂದ ಅಥಾವುಲ್ಲಾ ಚೌಕ್, ಬಡಿಕಮಾನ , ಜುಮ್ಮಾ ಮಸೀದಿ, ಹಕೀಂಚೌಕ್ & ಗೋಳಗುಮ್ಮಟವರೆಗೆ ರಸ್ತೆಯನ್ನು ದುರಸ್ತಿ, ವಾರ್ಡ ನಂ : 8 ರಲ್ಲಿ ಬರುವ ಹಳೆ ವಿಠಲ ಗುಡಿಯ ಮುಂದೆ ರಸ್ತೆ ಮತ್ತು ಚರಂಡಿಯನ್ನು ದುರಸ್ತಿ, ರುಕ್ಕಾಂಗದ ಶಾಲೆ ಹತ್ತಿರ ಚರಂಡಿಯ ಬ್ಲಾಕ್‍ನ್ನು ಮುಚ್ಚುವದು. ಬಹುತೇಕ ಕಡೆ ಬೀದಿ ದೀಪಗಳ ಸಮಸ್ಯೆಯಾಗುತ್ತಿದ್ದು ಇನ್ನುವರೆಗೆ ಸರಿಪಡಿಸಿರುವದಿಲ್ಲ. ಬಸ್ಟ್ಯಾಂಡ್ ದಿಂದ ಜಮಖಂಡಿಗೆ ಹೋಗುವ ಮಾರ್ಗ, ಮಹಾನಗರ ಪಾಲಿಕೆಯಿಂದ ಆರ್.ಟಿ.ಒ ಆಫೀಸ್ ಕಚೇರಿವರೆಗೆ, ಹಾಗೂ ವಿಜಯಪುರ ನಗರದಲ್ಲಿ ಬಹುತೇಕ ಕಡೆ ಒಳಚರಂಡಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ನೂ ಜಲನಗರ ಕ್ಲಾಸ್‍ದಿಂದ ಬಿ.ಡಿ.ಎವರೆಗೆ ಮತ್ತು ಬಡಾವಣೆಯ ಒಳ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿಯು ವೇಗವನ್ನು ಪಡೆದುಕೊಳ್ಳಬೇಕು. ನಗರದಲ್ಲಿರುವ ಬಿಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸಬೇಕು. ಬಹುತೇಕ ಕಡೆ ಬೀದಿ ಕಸವನ್ನು ಕೂಡಿಸದೇ ಇರುವದು ನಗರದ ಹಲವಾರು ಬಡಾವಣೆಗಳಲ್ಲಿ ರಸ್ತೆ, ನೀರು,ವಿದ್ಯುತ್, ಕೇಬಲ್ ಅಳವಡಿಕೆ ಇದೀಗ ಬಂದಂತಹ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಈ ಎಲ್ಲಾ ಕಾಮಗಾರಿಗಳಿಗೆ ಅನುಕೂಲವಾಗುವ ಹಾಗೆ ಮುಂಚೆಯ ಕಾಮಗಾರಿಗಳನ್ನು ಮಾಡಬೇಕು, ಡಾಂಬರ್ ರಸ್ತೆ ಮಾಡುವ ಸಮಯದಲ್ಲಿ ಎಲ್ಲಾ ಕಡೆ ಚರಂಡಿಗೆ ಜೋಡಿಸಲು ಎರಡು ಮನೆಗಳಿಗೆ ಬರುವ ಹಾಗೆ ಸರ್ವಿಸ್‍ಚೇಂಬರ್ ನಿರ್ಮಿಸಬೇಕು. ಈ ಎಲ್ಲ ಮಲಭೂತ ಸಮಸ್ಯೆಗಳನ್ನು ಬಗೆಹರಿಸದೇ ಹೋದಲ್ಲಿ ಆಮ್ ಆದ್ಮಿ ಪಕ್ಷವು ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬೋಗೇಶ ಸೋಲಾಪುರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನರಜ ಬಸವಂತಿ, ನಾರಾಯಣ ಆರ್.ಸಂಸ್ಥಾನಿಕ, ನಗರ ಉಪಾಧ್ಯಕ್ಷ ನಿಹಾದ ಅಹ್ಮದ ಗೋಡಿಹಾಳ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಕೆಂಗನಾಳ, ಡಾ. ಸಾಬೀರ ಮೋಮಿನ,ಡಾ.ಬಿ. ಎಂ. ಬಿರಾದಾರ, ಬಾಷಾ ಪಠಾಣ, ಅಮೀರ ಪಟೇಲ, ದಶರಥ ಪೋಳ, ಶಖೀಲ ಡಾಲಾಯತ, ನಬಿರಸೂಲ ಮಡಿಕೇಶ್ವರ, ಬುಡನ ಬೇಪಾರಿ, ರಮಜಾನ ಶೇಖ ಇನ್ನಿತರರು ಇದ್ದರು.