ನಗರದ ವಿವಿಧ ಬಡಾವಣೆಗಳಲ್ಲಿ ಕಾರ್ಯಾಚರಣೆ ನಡೆಸಿ 870 ಕ್ಕೂ ಹೆಚ್ಚು ಹಂದಿಗಳ ಸ್ಥಳಾಂತರ

ಕಲಬುರಗಿ,ನ.19:ಕಲಬುರಗಿ ಮಹಾನಗರ ಪಾಲಿಕೆಯಿಂದ ಹುಬ್ಬಳ್ಳಿ-ಧಾರವಾಡದ 20 ಜನರನ್ನೊಳಗೊಂಡ ಹಂದಿ ಹಿಡಿಯುವ ತಂಡವನ್ನು ಕರೆತಂದು ಕಲಬುರಗಿ ನಗರ ವಿವಿಧ ಬಡಾವಣೆಗಳಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿ, ಸುಮಾರು 870ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ತಿಳಿಸಿದ್ದಾರೆ.
ನಗರದ ಕೇಂದ್ರ ಬಸ್ ನಿಲ್ದಾಣ, ಕಣ್ಣಿ ತರಕಾರಿ ಮಾರುಕಟ್ಟೆ, ಹಿರಾಪೂರ ವೃತ್ತ, ಲಕ್ಮೀ ನಗರ ಹೀರಾಪೂರ, ಕೋಲ್ಡ್ ಸ್ಟೋರೇಜ್, ಎಂ.ಎಸ್.ಕೆ. ಮಿಲ್ ಹತ್ತಿರ, ಮೌಲಾ ಅಲಿ ಕಟ್ಟೆ ಹಾಗೂ ಇಲಾಹಿ ಮಸೀದಿ ಹಾಗೂ ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಬೀದಿ ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಈ ತರಹದ ಕಾರ್ಯಕ್ರಮವನ್ನು ರೂಪಿಸಿ ನಗರದಿಂದ ಹಂದಿಗಳ ಹಾವಳಿಯನ್ನು ನಿಯಂತ್ರಸಲು ಕ್ರಮವನ್ನು ತೆಗೆದುಕೊಳ್ಳಲಾಗುವುದು. ನಗರದಲ್ಲಿ ಹಂದಿ ಹಿಡಿಯಲು ಹುಬ್ಬಳ್ಳಿ-ಧಾರವಾಡದಿಂದ ತಂಡ ಕರೆ ತರಲಾಗಿದೆ.
ಕಲಬುರಗಿ ಮಹಾನಗರ ಪಾಲಿಕೆಯ ಹಿರಿಯ ಪಶುವೈದ್ಯಾಧಿಕಾರಿ ಡಾ. ಮಹ್ಮದ್ ಸಖಾವತ ಹುಸೇನ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಹಣಮಂತ ಹಬ್ಶಿಯಾಳ, ನೈರ್ಮಲ್ಯ ನಿರೀಕ್ಷಕ ನಾಗರಾಜ, ಬಸವರಾಜ ಪಾಣೆಗಾಂವ ಹಾಗೂ ಈ ತಂಡದ ಮುಖ್ಯಸ್ಥ ದುರ್ಗಪ್ಪ ನೇತೃತ್ವದಲ್ಲಿ ಈ ಕಾರ್ಯಾಚರಣೆ ಇದ್ದರು.