ನಗರದ ವಿವಿಧ ಬಡಾವಣೆಗಳಲ್ಲಿನ 780ಕ್ಕೂ ಹೆಚ್ಚು ಹಂದಿಗಳ ಸ್ಥಳಾಂತರ

ಕಲಬುರಗಿ,ನ.03:ಕಲಬುರಗಿ ಮಹಾನಗರ ಪಾಲಿಕೆಯು ಮಂಗಳವಾರದಂದು ಹುಬ್ಬಳ್ಳಿ-ಧಾರವಾಡದಿಂದ ಹಂದಿ ಹಿಡಿಯುವ ತಂಡವನ್ನು ಕರೆತಂದು ಕಲಬುರಗಿ ನಗರದ ವಿವಿಧ ಬಡಾವಣೆಗಲ್ಲಿನ ಸುಮಾರು 780 ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಸ್ಬೇಹಲ್ ಸುಧಾಕರ ಲೋಖಂಡೆ ಅವರು ತಿಳಿಸಿದ್ದಾರೆ.
ನಗರದ ವಿವಿಧ ಬಡಾವಣೆಗಳಾದ ಜಯನಗರ, ಪೂಜಾ ಕಾಲೋನಿ, ಓಂ ನಗರ, ಓಕಳಿ ಕ್ಯಾಂಪ್, ಸ್ವಸ್ತಿಕ ನಗರ, ತಿಲಕ್ ನಗರ, ಪ್ರಶಾಂತ್ ಕಾಲೋನಿ, ಅಣೆಮ್ಮ ನಗರ, ಗಣೇಶ ನಗರ, ಅಕ್ಬರ್ ಬಾಗ್ ಹಾಗೂ ರೆಹ್ಮಾನ ಕಾಲೋನಿ ಬಡಾವಣೆಗಳಲ್ಲಿ 20 ಜನರನ್ನೊಳಗೊಂಡ ಹಂದಿ ಹಿಡಿಯುವ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಹಂದಿಗಳನ್ನು ಸ್ಥಳಾಂತರಿಸಲಾಗಿದೆ.
ನಗರದ ವಿವಿಧ ಬಡಾವಣೆಗಳಿಂದ ಹಂದಿ ಹಾವಳಿಯ ಕುರಿತು ದಿನನಿತ್ಯ ಹಲವಾರು ದೂರುಗಳು ಬಂರುತ್ತಿವೆ. ಹಂದಿ ಜ್ವರ, ಡೆಂಗ್ಯೂ, ಮಲೇರಿಯಾ ಮತ್ತಿತರ (Sತಿiಟಿe ಜಿಟu, ಜeಟಿgue, mಚಿಟಚಿಡಿiಚಿ eಣಛಿ) ಯಾವುದೇ ರೋಗಗಳು ಸಾರ್ವಜನಿಕರಲ್ಲಿ ಹರಡದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗುತ್ತಿದೆ.
ಈ ಹಿಂದೆ ನಗರದ ಹಂದಿ ಮಾಲೀಕರೊಂದಿಗೆ ಸಭೆಯನ್ನು ನಡೆಸಿ ಕೆಲವು ಹಂದಿ ಮಾಲೀಕರ ಸಹಯೋಗದೊಂದಿಗೆ ಕಳೆದ ಸೆಪ್ಟೆಂಬರ್ 9 ರಿಂದ 14ರವರೆಗೆ ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 1800 ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ. ಅದೇ ರೀತಿ ಹಂದಿ ಹಾವಳಿ ಕುರಿತು ಸಾರ್ವಜನಿಕರಿಂದ ಹೆಚ್ಚಾಗಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಹಾಗೂ ಇನ್ನು ಕೆಲ ಪ್ರದೇಶದಲ್ಲಿ ಹಂದಿ ಮಾಲೀಕರು ಹಂದಿಗಳನ್ನು ಸ್ಥಳಾಂತರಿಸಲು ಅಸಹಕಾರ ತೋರುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಹಂದಿ ಹಿಡಿಯುವ ತಂಡವನ್ನು ಕರೆತಂದು ದಿನಾಂಕ: 19-09-2020 ರಂದು ಹಂದಿಗಳನ್ನು ಹಿಡಿದು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ನಗರದ ಕೆಲವು ಹಂದಿ ಮಾಲೀಕರು ಮತ್ತೆ ಇತರೆ ಪ್ರದೇಶಗಳಿಂದ ಹಂದಿಗಳನ್ನು ತಂದು ನಗರದ ವಿವಿಧ ಬಡಾವಣೆ (ಸಾರ್ವಜನಿಕ ಸ್ಥಳ ಹಾಗೂ ಖುಲ್ಲಾ ನಿವೇಶನ) ಗಳಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿರುವ ಪ್ರಯುಕ್ತ ಹಾಗೂ ಹಂದಿಗಳ ಹಾವಳಿ ನಿಲ್ಲಿಸಲು ಸಾರ್ವಜನಿಕರಿಂದ ಬಂದ ದೂರು ಹಿನ್ನೆಲೆಯಲ್ಲಿ ಇಂದು ಮತ್ತೊಮ್ಮೆ ಹುಬ್ಬಳ್ಳಿ-ಧಾರವಾಡದಿಂದ ಹಂದಿ ಹಿಡಿಯುವ ತಂಡವನ್ನು ಕರೆಯಿಸಿ ಹಂದಿಗಳನ್ನು ಹಿಡಿದು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಕಾರ್ಯಾಚರಣೆ ಮಾಡಲಾಗಿದೆ.
ನವೆಂಬರ್ 5ರೊಳಗಾಗಿ ಹಂದಿಗಳನ್ನು ಸ್ಥಳಾಂತರಿಸಲು ಮಾಲೀಕರಿಗೆ ಸೂಚನೆ: ನಗರÀದಲ್ಲಿನ ಹಂದಿ ಮಾಲೀಕರು ಸ್ವಯಂ ಪ್ರೇರಿತವಾಗಿ 2020ರ ನವೆಂಬರ್ 5 ರೊಳಗಾಗಿ ಇನ್ನುಳಿದ ಕೆಲ ಬಡಾವಣೆಗಳಲ್ಲಿನ ಹಂದಿಗಳನ್ನು ಹಿಡಿದು ನಗರ ಪ್ರದೇಶದಿಂದ ಹೊರಗಡೆ ಸ್ಥಳಾಂತರಿಸಬೇಕೆಂದು ಹಂದಿಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಇಲ್ಲದಿದ್ದಲ್ಲಿ ಸದರಿ ಹಂದಿ ಮಾಲೀಕರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿಯೂ ಸಹ ನಗರದಲ್ಲಿನ ಹಂದಿ ಹಾವಳಿಯನ್ನು ನಿಯಂತ್ರಿಸಲು ಈ ತರಹದ ಕಾರ್ಯಕ್ರಮವನ್ನು ರೂಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ ಹಿರಿಯ ಪಶುವೈದ್ಯಾಧಿಕಾರಿ, ಪರಿಸರ ಅಭಿಯಂತರರು ಹಾಗೂ ನೈರ್ಮಲ್ಯ ನಿರೀಕ್ಷಕರು ಮತ್ತು ಪಶು ವೈದ್ಯಕೀಯ ಪರೀಕ್ಷಕರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.