
ಕಲಬುರಗಿ.ಮೇ.20:ಕಲಬುರಗಿ ನಗರದ ಕೆಳಕಂಡ ವಿವಿಧ ಸ್ಥಳಗಳಲ್ಲಿ 2023ರ ಮೇ 19 ಹಾಗೂ 20 ರಂದು ಮೂರು ತಂಡಗಳೊಂದಿಗೆ ಕಾರ್ಯಾಚರಣೆ ನಡೆಸಿ ಒಟ್ಟು 17 ಮಕ್ಕಳನ್ನು ರಕ್ಷಿಸಲಾಗಿದ್ದು, ಇದರಲ್ಲಿ 11 ಜನ ಬಾಲಕಾರ್ಮಿಕ ಮಕ್ಕಳನ್ನು ಹಾಗೂ 6 ಜನ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳ ವ್ಹಿ ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಇವರ ಮಾರ್ಗದರ್ಶನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ ಕುಮಾರ್ ಹಾಗು ಶ್ರೀಮತಿ ಮಂಜುಳ ವ್ಹಿ. ಪಾಟೀಲ ಇವರ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೆÇಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ-1098 ಸಂಸ್ಥೆಗಳ ಮತ್ತು ತೆರೆದ ತಂಗುದಾಣಗಳ ಸಂಯುಕ್ತಾಶ್ರಯದಲ್ಲಿ ಮೇ 19 ಹಾಗೂ 20 ರಂದು ಕಲಬುರಗಿ ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತ, ಕೇಂದ್ರಿಯ ಬಸ್ ನಿಲ್ದಾಣ, ಮಾರ್ಕೇಟ್ ಏರಿಯಾ, ಖರ್ಗೆ ಪೆಟ್ರೋಲ್ ಪಂಪ್, ಶರಣಬಸವೇಶ್ವರ ದೇವಸ್ಥಾನ, ರಾಮಮಂದಿರ ಸರ್ಕಲ್, ಗಂಜ ಏರಿಯಾ ಹಾಗೂ ಹುಮನಾಬಾದ್ ರಿಂಗ್‍ರೋಡ ಪ್ರಮುಖ ಜನಸಂದಣಿ ಇರುವ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಭಿಕ್ಷಾಟನೆಯಲ್ಲಿ ಹಾಗೂ ಬಾಲಕಾರ್ಮಿಕತೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲಾಯಿತು.
ಉಚ್ಚ ನ್ಯಾಯಾಲಯ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗದ ನಿರ್ದೇಶದನ್ವಯ ಈ ಕಾರ್ಯಾಚರಣೆಂ ನಡೆಸಲಾಗಿದ್ದು, ಭಿಕ್ಷಾಟನೆಯಲ್ಲಿ ಮಕ್ಕಳನ್ನು ತೊಡಗಿಸುವುದು ಕಾನೂನು ಬಾಹಿರವಾಗಿದ್ದು, ಭಿಕ್ಷಾಟನೆಯಲ್ಲಿ ಮಕ್ಕಳನ್ನು ತೊಡಗಿಸಿಕೊಂಡಲ್ಲಿ ಬಾಲ ನ್ಯಾಯ ಕಾಯ್ದೆ 2015ರ ಕಲಂ 76 ರನ್ವಯ ಶಿಕ್ಷಾರ್ಹ ಅಪರಾಧವಾಗಿದ್ದು, 5 ವರ್ಷದವರೆಗೂ ವಿಸ್ತರಿಸಬಹುದಾದ ಕಠಿಣ ಕಾರಾಗೃಹವಾಸ ಮತ್ತು 1 ಲಕ್ಷ ದಂಡ ವಿಧಿಸಬಹುದಾಗಿದೆ. ಆದ್ದರಿಂದ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳಬಾರದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳ ವ್ಹಿ ಪಾಟೀಲ ಅವರು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಭಿಕ್ಷಾಟನೆಗೆ ಹಾಗೂ ಬಾಲಕಾರ್ಮಿಕತೆಗೆ ಸಂಬಂಧಿಸಿದಂತೆ, ಚಿಕ್ಕ ಕಂದಮ್ಮಗಳನ್ನು, ಮಕ್ಕಳನ್ನು ಬಳಸುವುದು ಹಾಗೂ ಮಕ್ಕಳನ್ನು ದಿನದ ಬಾಡಿಗೆ ಪಡೆದು ಭಿಕ್ಷಾಟನೆಯಲ್ಲಿ ಬಳಸುವುದು ಮಹಿಳೆಯರು ಹಸುಗೂಸುಗಳನ್ನು ಬಳಸಿಕೊಂಡು ಭಿಕ್ಷೆ ಬೇಡುತ್ತಿರುವುದು ಜಿಲ್ಲೆಯಲ್ಲಿ ದಿನೆದಿನೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಈ ಕಾರ್ಯಾಚರಣೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾ ಅಧಿಕಾರಿ ಭಾರತೀಶ್ ಶೀಲವಂತರ, ರಕ್ಷಣಾಧಿಕಾರಿ ಬಸವರಾಜ್, ಮಕ್ಕಳ ಸಹಾಯವಾಣಿ ಸಂಯೋಜಕ ಬಸವರಾಜ್ ತೆಂಗಳಿ, ಸುಂದರ್, ಮಲ್ಲಯ್ಯ ಗುತ್ತೆದಾರ್, ಅಶೋಕ್, ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ರವಿಕುಮಾರ್, ಶಿವಾರಾಜ್, ಯೋಜನಾ ನಿರ್ದೇಶಕ ಸಂತೋμï ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗಂಗಾಧರ್, ರಾಕೇಶ್ ಡಿಸಿಪಿಯು ಸಿಬ್ಬಂದಿಗಳು, ಮಕ್ಕಳ ಸಹಾಯವಾಣಿ ಡಾನ್ ಬಾಸ್ಕೊ ಸಂಸ್ಥೆ, ಮಾರ್ಗದರ್ಶಿ ಸಂಸ್ಥೆ ಸಿಬ್ಬಂದಿಗಳು, ವಿಶ್ವಭಾರತಿ, ವಿಶ್ವಸೇವಾ ಮಿಷನ್ ಹಾಗೂ ಐಡಿಓ ತೆರೆದ ತಂಗುದಾಣಗಳ ಸಿಬ್ಬಂದಿಗಳು ಹಾಗೂ ಪಿ.ಎಸ್.ಐ. ಹಾಗೂ ಪೆÇಲೀಸರು ಉಪಸ್ಥಿತರಿದ್ದರು.