ನಗರದ ವಿಕಾಸ್ ಬ್ಯಾಂಕ್ ಎಟಿಎಂ ನಲ್ಲಿ8.72 ಲಕ್ಷ ರೂ ಕಳ್ಳತನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ,19- ಇಲ್ಲಿನ ತಾಳೂರು ರಸ್ತೆಯಲ್ಲಿನ ವಿಕಾಸ್ ಸೌಹಾರ್ದ್ ಬ್ಯಾಂಕಿನ ಎಟಿಎಂ8.72 ಲಕ್ಷ ರೂ ಕಳ್ಳತನ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
 ಸೆ 15  ರಂದು ಮಧ್ಯಾಹ್ನ 1.30 ರ ವೇಳೆಗೆ  ನಗದನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಗಾಂಧಿನಗರ ಠಾಣೆಯಲ್ಲಿ ಎರೆಡು ದಿನಗಳ ನಂತರ ಪ್ರಕರಣ ದಾಖಲಾಗಿದೆ.
ಎಟಿಎಂ ವ್ಯವಹಾರದ ಪ್ರಕಾರ
ಬ್ಯಾಂಕ್ ಬ್ಯಾಲೆನ್ಸ್ ಶೀಟ್ ನಲ್ಲಿ  8.72.000 ರೂ ತೋರಿಸುತ್ತಿದೆ. ಬೀಗ ಸಹ ಮುರಿದಿಲ್ಲ ಆದರೂ ಸಹ ಹಣ ನಾಪತ್ತೆ. ಈ ಬಗ್ಗೆ ಪರಿಶೀಲನೆ ಮಾಡಿದರೆ
ಸಿಸಿಟಿವಿಯಲ್ಲು ಮುಸುಕುದಾರಿಯೊಬ್ಬ ಎಟಿಎಂನ್ನು ಸೀಕ್ರೇಟ್ ಪಿನ್ ಬಳಸಿ  ಹಣ ಲಪಟಾಯಿಸಿರುವುದು ಪತ್ತೆಯಾಗಿದೆ. ಆತ ಹಣ ತೆಗೆದುಕೊಂಡು ಹೊರಗೆ ಬಂದು ಮತ್ತೊಬ್ಙ‌ಜೊತೆ ಬೈಕ್ ನಲ್ಲಿ  ಪಾರ್ವತಿ ನಗರದ ಮುಖ್ಯ ರಸ್ತೆ ಕಡೆ ತೆರಳಿದ್ದಾನೆ.
 ಎಟಿಎಂ ತೆರೆಯುವ ಸೀಕ್ರೇಟ್ ಪಿನ್ ಬ್ಯಾಂಕಿನ‌ ಕೆಲ ಸಿಬ್ಬಂದಿಗೆ ಬಿಟ್ಟರೆ   ಬೇರೆಯವರಿಗೆ ಗೊತ್ತಿರಲಿಲ್ಲ. ಇದು ಹೆರಗೆ ಬೇರೆಯವರಿಗೆ ಗೊತ್ತಾಯಿತು ಎಂಬುದೇ ಇಲ್ಲಿ ರಹಸ್ಯವಾಗಿದ್ದು ತನಿಖೆ ನಡೆಯುತ್ತಿದೆ.