ನಗರದ ರೈಲ್ವೇ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆಪ್ರಧಾನಿ ನರೇಂದ್ರ ಮೋದಿ ಚಾಲನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದ ಕೇಂದ್ರ ರೈಲ್ವೇ ನಿಲ್ದಾಣ 151 ವರ್ಷಗಳ ಹಳೆಯದಾದ ಕಟ್ಟಡವಾಗಿದ್ದು. ಇದನ್ನು ಆಕರ್ಷಕವಾಗಿ ನವೀಕರಿಸುವುದು ಸೇರಿದಂತೆ ಪ್ರಯಾಣಿಕರಿಗೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲು
ಅಮೃತ ಭಾರತ್ ಯೋಜನೆಯಡಿ 16.7 ಕೋಟಿ ರೂಗಳ ವೆಚ್ಚದ ಕಾಮಗಾರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವರ್ಚ್ಯುವಲ್ ಮೂಲಕ ಚಾಲನೆ ನೀಡಿದರು.

ಇದಕ್ಕೂ ಮುನ್ನ ರೈಲ್ವೇ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಸಂಸದ ವೈ.ದೇವೇಂದ್ರಪ್ಪ ಉದ್ಘಾಟನೆ ಮಾಡಿ. ಆದಷ್ಟು ಅಭಿವೃದ್ಧಿ ಯೋಜನೆಗಳಿಗೆ ಪ್ರಯತ್ನಿಸುತ್ತಿರುವೆ. ಸುಧಾಕ್ರಸ್ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಟೆಂಡರ್ ಕರೆದಿದೆಂದು ತಿಳಿಸಿದರು.

ರೈಲ್ವೇ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ ಅವರು ಈ ಭಾಗದಲ್ಲಿ ಆಗಬೇಕಾದ ರೈಲ್ವೇ ಯೋಜಬೆಗಳ ಬೇಡಿಕೆಗಳ ಮನವಿ ಪತ್ರ ಮಂಡಿಸಿದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ. ಈ ಭಾಗದ ಭತ್ತ ಮೊದಲಾದ ಫಸಲನ್ನು ಇತರೇ ರಾಜ್ಯಗಳಿಗೆ ಸಾಗಾಣೆ ಆಗಲು
ಆಗಬೇಕಾದ ರೈಲ್ವೇ ಯೋಜನೆಗಳ ಬಗ್ಗೆ ತಿಳಿಸಿ. ರೈಲ್ವೇ ಸೇತುವೆಗಳ ಅಗಲೀಕರಣ ನಗರದಲ್ಲಿ ಆಗದಿದ್ದರೆ ಜನತೆಗೆ ಸಮಸ್ಯೆ ಆಗುತ್ತದೆಂದರು.
ವೇದಿಕೆಯಲ್ಲಿ ಶಾಸಕ ಭರತ್ ರೆಡ್ಡಿ, ಮೇಯರ್ ತ್ರಿವೇಣಿ, ರೈಲ್ವೆ ಕಮಿಟಿ ಸದಸ್ಯ ವಿ.ರವಿಕುಮಾರ್ ಮೊದಲಾದವರು ಇದ್ದರು.

ರೈಲ್ವೇ ಅಧಿಕಾರಿ ಸಂಜಯ್ ಕುಮಾರ್ ಮಾತನಾಡಿ,
ಬಳ್ಳಾರಿ ನಿಲ್ದಾಣವು ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಕಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.

ರೈಲ್ವೇ ಅಧಿಕಾರಿ ಯೋಜನೆ ಬಗ್ಗೆ ವಿವರಿಸಿ ಈ ಯೋಜನೆಯಡಿ ಕಟ್ಟಡದ ನವೀಕರಣವು ಇತಿಹಾಸ ಮತ್ತು ವಾಸ್ತುಶಿಲ್ಪದ ವೈಭವನ್ನು ಮರಳಿಸುವಂತೆ ಮಾಡಲಿದೆ. ವಿಶ್ರಾಂತಿ ಕೊಠಡಿ, ಆಸನಗಳ ವ್ಯವಸ್ಥೆ ಸೇರಿದಂತೆ ಹೊಸ ಮಾದರಿಯ ಸೌಲಭ್ಯ ಕಲ್ಪಿಸಲಿದೆ.

ಬಿಸಿಲು ಮತ್ತು ಮಳೆಯಿಂದ ಪ್ರಯಾಣಿಕರ ರಕ್ಷಣೆಗೆಂದು ಪ್ಲಾಟ್‌ಫಾರ್ಮ್‌ಗಳಿಗೆ ಪೂರ್ಣ ಪ್ರಮಾಣದ ಮೇಲ್ದಾವಣೆ ಒದಗಿಸಲಾಗುವುದು. ಜನ ದಟ್ಟಣೆಯನ್ನು ತಡೆಗಟ್ಟಲು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರದೊಂದಿಗೆ , ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳಿಗೆ ಸೂಕ್ತ ಪಾರ್ಕಿಗ್‌ ವ್ಯವಸ್ಥೆ ಕಲ್ಪಿಸಿ ಸರ್ಕ್ಯುಲೇಟಿಂಗ್ ಏರಿಯಾವನ್ನು ಹೆಚ್ಚಿಸಲಿದೆ. ಬೋಗಿ ಮತ್ತು ರೈಲು ಸೂಚನಾ ಫಲಕಗಳು ಮತ್ತು ಸಂಕೇತಗಳು ಪ್ರಯಾಣಿಕರಿಗೆ ಸುಲಭವಾಗಿ ಅರಿಯುವಂತೆ ಮಾಡಲಿದೆ.
ಭವಿಷ್ಯದಲ್ಲಿ ಹೆಚ್ಚಾಗಬಹುದಾದ ಜನ ದಟ್ಟಣೆಗೆ ಸದ್ಯ ಇರುವ 2.5 ಮೀಟರ್ ಅಗಲದ ಪಾದಾಚಾರಿ ಮೇಲು ಸೇತುವೆಯನ್ನು 12 ಮೀಟರ್‌ಗೆ ವಿಸ್ತರಿಸಲಾಗುವುದು.

ಸುಸಜ್ಜಿತ ಫುಡ್ ಕೋರ್ಟ್, ಸುಧಾರಿತ ಒಳಾಂಗಣ ವಿನ್ಯಾಸದ ನಿರೀಕ್ಷಣ ಕೊಠಡಿಗಳು ಮತ್ತು ಉಚಿತ ವೈ-ಫೈ ಸೌಲಭ್ಯ ನೀಡಲಿದೆ. ನಿಲ್ದಾಣದಲ್ಲಿ ಎಲ್ ಇಡಿ ಬಲ್ಪುಗಳ ಅಳವಡಿಕೆ ಮಾಡಲಿದೆಂದು ತಿಳಿಸಿದರು.

ಅಮೃತ ಭಾರತ ಕಾರ್ಯಕ್ರಮದಡಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ನೀಡಿ ಗೌರವಿಸಲಾಯ್ತು.