ನಗರದ ರಿಲಾಯನ್ಸ್ ಮಾರ್ಟ್ : ಯುವಕನ ಮೇಲೆ ಹಲ್ಲೆ ಪ್ರಕರಣ

ರಾಯಚೂರು.ಸೆ.೦೪- ವಾರದ ಹಿಂದೆ ನಡೆದ ರಿಲಾಯನ್ಸ್ ಮಾರ್ಟ್ ಹತ್ತಿರದ ಯುವಕನೊಬ್ಬನ ಮೇಲಿನ ಹಲ್ಲೆಯ ವಿಡಿಯೋ ಫುಟೇಜ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲಾಗಿದೆ.
ಕಳೆದ ತಿಂಗಳು ೨೪ ರಂದು ಈ ಘಟನೆ ಸಂಭವಿಸಿತ್ತು. ರಾತ್ರಿ ಸಮಯದಲ್ಲಿ ಕೆಲ ಯುವಕರು ವಾಹನದ ಮೇಲೆ ಸಾಗುತ್ತಿದ್ದ ಯುವಕನೊಬ್ಬನನ್ನು ತಡೆದು, ಹಲ್ಲೆ ಮಾಡಿದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಗೆಳೆಯರ ಮಧ್ಯೆ ನಡೆದ ಕ್ಷುಲ್ಲಕ ಘಟನೆ ನಂತರ ಮಾರಾಮಾರಿಗೆ ಕಾರಣವಾಗಿತ್ತು. ರಿಲಾಯನ್ಸ್ ಮಾರ್ಟ್‌ನಿಂದ ವಾಹನದ ಮೇಲೆ ಹೊರಟಿದ್ದ ಯುವಕನನ್ನು ಹಿಡಿದು ಥಳಿಸಲಾಗುತ್ತದೆ. ಈ ಕುರಿತು ಸದಾರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆಂದು ಪೊಲೀಸರು ತಿಳಿಸಿದ್ದಾರೆ.
ವಾರದ ಹಿಂದಿನ ಈ ಘಟನೆ ಈಗ ವಿಡಿಯೋ ಫುಟೇಜ್ ಸಹಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಅರದಲ್ಲೂ ವಿಶೇಷವಾಗಿ ವಾಟ್ಸಾಪ್‌ಗಳಲ್ಲಿ ಈ ಪ್ರಕರಣದ ವಿಡಿಯೋ ಭಾರೀ ಸದ್ದು ಮಾಡಿದೆ.