ನಗರದ  ರಸ್ತೆಗಳ ದುರಸ್ತಿಗಾಗಿ ನ. 29 ಪಾಲಿಕೆ ಮುಂದೆ ಪ್ರತಿಭಟನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ತೀವ್ರವಾಗಿ ಹಾಳಾಗಿರುವ ನಗರದ ರಸ್ತೆಗಳ ದುರಸ್ಥಿಗೆ ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ಪಾಲಿಕೆ ಮುಂದೆ ನ 29 ರಂದು ಪ್ರತಿಭಟನೆ ಮಾಡಲು ನಿರ್ಧರಿಸಿದೆ.
ನಗರದ ಗಾಂಧಿ ಭವನದಲ್ಲಿ ಸಭೆ ಸೇರಿದ ಸಮಿತಿಯ ಮುಖಂಡರು. ನಗರದ ಮೂಲಭೂತ ಸೌಕರ್ಯದ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟಲು ಹಾಗೂ ಪ್ರತಿಭಟನಾ ಧರಣೆಯನ್ನು ನಡೆಸಲು  ನಿರ್ಧರಿಸಿದರು.
ಹೋರಾಟಕ್ಕೂ ಪೂರ್ವದಲ್ಲಿ ನಾಳೆ ನ 23ರಂದು ನಗರದ ಗಡಗಿ ಚೆನ್ನಪ್ಪ ವೃತ್ತದ ಸುತ್ತಾ ಮುತ್ತ ಸಹಿ ಸಂಗ್ರಹ. ನಂತರ ನ.27ರಂದು ನಗರದ ಕೌಲ್ ಬಜಾರ್ ಮಾರುಕಟ್ಟೆಯಲ್ಲಿ ಸಹಿ ಸಂಗ್ರಹ ಜೊತೆಗೆ ಉದ್ಯಾನವನ, ಮೈದಾನ ಹಾಗೂ ಬಡಾವಣೆಗಳಲ್ಲಿ ವ್ಯಾಪಕ ಪ್ರಚಾರ. ನ. 28 ರಂದು ಆಟೋದಲ್ಲಿ ಪ್ರಚಾರ ನಡೆಸಲಿದೆ.
ನಗರದಲ್ಲಿ ಹಾಳಾದ ರಸ್ತೆಗಳನ್ನು ದುರಸ್ತಿಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು. ನೆನೆಗುದಿಗೆ ಬಿದ್ದಿರುವ ರಿಂಗ್ ರೋಡ್ ಯೋಜನೆ ಕೂಡಲೆ ಪೂರ್ಣಗೊಳಿಸಬೇಕು. ಸುಧಾಕ್ರಾಸ್ ಹತ್ತಿರ ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕು. ಸತ್ಯನಾರಾಯಣಪೇಟೆಯ ಕೆಳಸೇತುವೆಯಲ್ಲಿ ಚರಂಡಿ ನೀರು ನಿಲ್ಲುವಂತೆ ಸೂಕ್ತ ಕ್ರಮಕೈಗೊಳ್ಳಬೇಕಿ. ಮೋತಿ ಸರ್ಕಲ್ ಹತ್ತಿರದ ರೈಲ್ವೆ ಮೇಲ್ಸೇತುವೆ ಅಗಲೀಕರಣಕ್ಕೆ ಕ್ರಮಕೈಗೊಳ್ಳಬೇಕು.ನಗರದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿ. ರಸ್ತೆ ಅಪಘಾತಗಳ ತಡೆಯಬೇಕು. ನಗರದಾದ್ಯಂತ ಒಳಚರಂಡಿ, ಹೊರಚರಂಡಿ ವ್ಯವಸ್ಥೆಯನ್ನು ದುರಸ್ತಿಗೊಳಿಸಿ. ನಗರದ ಸ್ವಚ್ಛತೆಯನ್ನು ಕಾಪಾಡಬೇಕು ಎಂಬ ಬೇಡಿಕೆಗಳೊಂದಿಗೆ ಈ ಹೋರಾಟ ನಡೆಸಲಿದೆಂದು
ಸಭೆಯಲ್ಲಿ  ಸಮಿತಿಯ  ಸಂಚಾಲಕರಾದ ಸೋಮಶೇಖರ ಗೌಡ ತಿಳಿಸಿದ್ದಾರೆ.